Mangalsutra ಸಬ್ಯಸಾಚಿ ಮಂಗಳಸೂತ್ರ ಜಾಹೀರಾತಿಗೆ ಆಕ್ಷೇಪ, ಇದು ಒಳಉಡುಪಿನ ಜಾಹೀರಾತು ಅಲ್ಲ ಎಂದ ನೆಟ್ಟಿಗರು

| Updated By: ರಶ್ಮಿ ಕಲ್ಲಕಟ್ಟ

Updated on: Oct 28, 2021 | 6:23 PM

Sabyasachi Mukherjee ಹಲವಾರು ನೆಟ್ಟಿಗರು ಸಬ್ಯಸಾಚಿ ಜನರ  ಭಾವನೆಯನ್ನು ಘಾಸಿಗೊಳಿಸಿದ್ದಾರೆ ಮತ್ತು ಮಂಗಳಸೂತ್ರವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Mangalsutra ಸಬ್ಯಸಾಚಿ ಮಂಗಳಸೂತ್ರ ಜಾಹೀರಾತಿಗೆ ಆಕ್ಷೇಪ, ಇದು ಒಳಉಡುಪಿನ ಜಾಹೀರಾತು ಅಲ್ಲ ಎಂದ ನೆಟ್ಟಿಗರು
ಸಬ್ಯಸಾಚಿ ಜಾಹೀರಾತು (ಇನ್​​ಸ್ಟಾಗ್ರಾಮ್)
Follow us on

ದೆಹಲಿ: ಸೆಲೆಬ್ರಿಟಿ ಡಿಸೈನರ್ ಸಬ್ಯಸಾಚಿ ಮುಖರ್ಜಿ  (Sabyasachi Mukherjee) ಅವರು ತಮ್ಮ ರಾಯಲ್ ಬೆಂಗಾಲ್ ಮಂಗಳಸೂತ್ರ (Mangalsutra) ಧರಿಸಿರುವ ಜೋಡಿ, ಸಲಿಂಗ ಮತ್ತು ಭಿನ್ನಲಿಂಗೀಯ ಜೋಡಿಗಳನ್ನು ಒಳಗೊಂಡ ಆಭರಣ ಜಾಹೀರಾತುಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ  ಆಕ್ಷೇಪ ವ್ಯಕ್ತವಾಗಿದೆ. ಸಬ್ಯಸಾಚಿಯವರ “ಇಂಟಿಮೇಟ್ ಫೈನ್ ಜ್ಯುವೆಲ್ಲರಿ” ಸಂಗ್ರಹದ ಜಾಹೀರಾತುಗಳು ಇದಾಗಿದೆ. ಈ ಜಾಹೀರಾತುಗಳಲ್ಲಿ ಮಹಿಳೆಯರು ಬ್ರಾ ಧರಿಸಿ ನಿಂತಿರುವ ಫೋಟೊ ಕೂಡಾ ಇದೆ. ಹಲವಾರು ನೆಟ್ಟಿಗರು ಸಬ್ಯಸಾಚಿ ಜನರ  ಭಾವನೆಯನ್ನು ಘಾಸಿಗೊಳಿಸಿದ್ದಾರೆ ಮತ್ತು ಮಂಗಳಸೂತ್ರವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ನೀವು ನಿಖರವಾಗಿ ಏನು ಜಾಹೀರಾತು ಮಾಡುತ್ತಿದ್ದೀರಿ? ಯಾರೂ ಈ ಆಭರಣವನ್ನು ಧರಿಸುವುದಿಲ್ಲ, ಏಕೆಂದರೆ ನಾನು ಆ ಆಭರಣವನ್ನು ಧರಿಸಿದರೆ ನಾನು ಕೆಳಮಟ್ಟದವರು ಎಂದು ನೀವು ಜಗತ್ತಿಗೆ ತೋರಿಸಿದ್ದೀರಿ! ದಯವಿಟ್ಟು ನಿಮ್ಮ ಪ್ರಚಾರಗಳನ್ನು ನೋಡಿಕೊಳ್ಳಿ ,” ಇನ್​​ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟಿಸಿದ್ದಾರೆ.

ಸಬ್ಯಸಾಚಿ ಕೆಲಸಕ್ಕೆ ಧನಸಹಾಯ ಮಾಡುವ ವ್ಯಕ್ತಿ ನಗ್ನತೆಯನ್ನು ನಂಬುತ್ತಾರೆ! ಇಂತಹ ಕೊಳಕು ಜಾಹೀರಾತುಗಳು ಅದರ ತಯಾರಕರ ಒತ್ತಾಯವನ್ನು ಅನ್ನು ಚಿತ್ರಿಸುತ್ತದೆ, ಬೇರೇನೂ ಇಲ್ಲ. ನಾಚಿಕೆಗೇಡು ಎಂದು ಮತ್ತೊಬ್ಬರು ಕಾಮೆಂಟಿಸಿದ್ದಾರೆ.


ಮಂಗಳಸೂತ್ರದಂತಹ ಪವಿತ್ರವಾದದ್ದನ್ನು “ಅಗೌರವ” ಮಾಡಿದ್ದಕ್ಕಾಗಿ ಸಬ್ಯಸಾಚಿಯನ್ನು ಜನರು ಟೀಕಿಸಿದ್ದಾರೆ
ಇಲ್ಲ! ಇದು ಒಳ ಉಡುಪು ಅಥವಾ ಕೊಂಡೊಮ್ ಜಾಹೀರಾತು ಅಲ್ಲ.ಇದು ಸಬ್ಯಸಾಚಿ ಮಂಗಳಸೂತ್ರ ಜಾಹೀರಾತು.ಅಲ್ಟ್ರಾ ವೋಕ್ ಸಬ್ಯಸಾಚಿ ಎಷ್ಟು ಸೃಜನಾತ್ಮಕವಾಗಿ ದಿವಾಳಿಯಾಗಿದ್ದಾರೆ ಎಂದರೆ ಅವರು ಮಂಗಳಸೂತ್ರ ಜಾಹೀರಾತಿಗಾಗಿ ಅರೆ ನಗ್ನ ಮಾಡೆಲ್‌ಗಳನ್ನು ಬಳಸಬೇಕಾಗುತ್ತದೆ ಎಂದು ಶ್ರದ್ಧಾ ಎಂಬವರು ಟ್ವೀಟ್ ಮಾಡಿದ್ದಾರೆ.


ಅಕ್ಟೋಬರ್ 19 ರಂದು ಬಟ್ಟೆ ಬ್ರಾಂಡ್ ಫ್ಯಾಬ್ ಇಂಡಿಯಾ ‘ಜಶ್ನ್-ಎ-ರಿವಾಜ್’ ಎಂಬ ಬಟ್ಟೆ ಸಂಗ್ರಹದ ಜಾಹೀರಾತನ್ನು ಹಿಂತೆಗೆದುಕೊಂಡಿತು. ಹಿರಿಯ ಬಿಜೆಪಿ ನಾಯಕರು ದೀಪಾವಳಿಯನ್ನು ಉರ್ದು ಪದಕ್ಕೆ ಜೋಡಿಸುವ ಮೂಲಕ ದೀಪಾವಳಿಯನ್ನು ‘ವಿರೂಪಗೊಳಿಸಿದ್ದಾರೆ’ ಎಂದು ಆರೋಪಿಸಿದ್ದರು.

ಇದನ್ನೂ ಓದಿ: BoycottFabindia ಟ್ರೆಂಡ್; ದೀಪಾವಳಿ ಜಾಹೀರಾತಿನಿಂದ ಜಷ್ನ್- ಎ-ರಿವಾಜ್ ಹೆಸರು ಕೈಬಿಟ್ಟ ಫ್ಯಾಬ್ ಇಂಡಿಯಾ