ಅನೇಕರು 60 ಅಥವಾ 70 ವರ್ಷ ತಲುಪುತ್ತಿದ್ದಂತೆ ಜೀವನ ಸಾಕು ಅಂತಾ ನಿವೃತ್ತರಾಗುತ್ತಾರೆ ಮತ್ತು ವಿಶ್ರಾಂತಿಯನ್ನು ಆರಿಸಿಕೊಳ್ಳುತ್ತಾರೆ. ಇನ್ನು ಈಗೀಗಂತೂ 30-40 ವಯಸ್ಸಿಗೆ ಜೀವನ ಬತ್ತುಹೋಗಿರುತ್ತದೆ. ಉಸ್ಸಪ್ಪಾ ಅಂತಾರೆ ಯುವ ಮಂದಿ. ಆದರೆ ಆ ಇಳಿ ವಯಸ್ಸಿನಲ್ಲೂ ಫಿಟ್ ಆಗಿರುವವರು ಬಹಳ ಕಡಿಮೆ. ಕೆಲವರು ಕೋಲಿನ ಸಹಾಯವಿಲ್ಲದೆ ನಡೆಯಲಾರರು. ಆದರೆ ಅಮೆರಿಕದ ವಿನ್ಸೆಂಟ್ ಡ್ರಾನ್ ಫೀಲ್ಡ್ ಎಂಬ 109 ವರ್ಷದ ಮುದುಕರೊಬ್ಬರು (USA Man) ತಮ್ಮ ಜೀವನೋತ್ಸಾಹದಿಂದ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ವಯಸ್ಸಿನಲ್ಲೂ ಅವರು ಎಷ್ಟು ಫಿಟ್ ಆಗಿದ್ದಾರೆ ಎಂದು ನೋಡಿದರೆ ನೀವು ಅಬ್ಬಬ್ಬಾ ಅಂತಾ ಹೇಳದೇ ಇರಲಾರಿರಿ.
ಏಕೆಂದರೆ ಅವರು ಈ ವಯಸ್ಸಲ್ಲೂ ಇನ್ನೂ ತಮ್ಮ ಕಾರನ್ನು (Car) ಓಡಿಸುತ್ತಾನೆ. ಕನ್ನಡಕ ಧರಿಸದೆಯೇ ಸರಾಗವಾಗಿ ಪತ್ರಿಕೆ ಓದುತ್ತಾರೆ (Good Habits). ಇನ್ನು ಊರುಗೋಲಿನ ಸಹಾಯವಿಲ್ಲದೆ ಹೊರಗೆ ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನು ತರುತ್ತಾರೆ. ಮನೆಗೆಲಸದಲ್ಲೂ ಸಹಾಯ ಮಾಡುತ್ತಾರೆ (Lifestyle).
109ನೇ ವಯಸ್ಸಿಗೆ ಬಂದರೂ ಇಷ್ಟು ಆರೋಗ್ಯವಾಗಿರುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ಅವರ ಮೊಮ್ಮಗಳನ್ನು ಕೇಳಿದಾಗ, ವಿನ್ಸ್ ಅವರು 21ನೇ ವಯಸ್ಸಿನಲ್ಲಿ ಅಗ್ನಿಶಾಮಕ ದಳ ಸೇವಾ ಠಾಣೆಯಲ್ಲಿ ಉಸ್ಯೋಗ ಮಾಡಿ, ಸೇವೆ ಸಲ್ಲಿಸಿದವರು. ಸುಮಾರು 80 ವರ್ಷಗಳ ಕಾಲ ಇದೇ ಕೆಲಸ ಮುಂದುವರೆಸಿ ಹಲವರ ಜೀವ ಉಳಿಸಿದ್ದಾರೆ. ಹಾಗೆ ಬದುಕುಳಿದವರ ಆಶೀರ್ವಾದವೇ ವಿನ್ಸೆಂಟ್ ಡ್ರಾನ್ ಫೀಲ್ಡ್ ಅವರನ್ನು ಆರೋಗ್ಯವಾಗಿರುವಂತೆ ಮಾಡಿದೆ. ಆದರೆ ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು ಮತ್ತು ದೇಹವನ್ನು ನಿರಂತರವಾಗಿ ಚಲಿಸುವುದು ಅವರ ಆರೋಗ್ಯದ ರಹಸ್ಯ ಎಂದು ವಿನ್ಸ್ ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ