Viral Video: ‘ಕಾನ್ಫಿಡೆನ್ಸ್​ ಈಸ್ ಸೆಕ್ಸಿ’; ಮಾಡೆಲಿಂಗ್ ಕ್ಷೇತ್ರಕ್ಕೆ ಈಕೆ ಕಾಲಿಟ್ಟಾಗ ವಯಸ್ಸು 50!

|

Updated on: Aug 23, 2023 | 5:02 PM

Woman: 'ನಾನು #AgeNotCage ಅಭಿಯಾನ ಆರಂಭಿಸಿದಾಗ ಅದು ಈ ಮಟ್ಟಕ್ಕೆ ಬಂದು ತಲುಪುತ್ತದೆ ಎಂದುಕೊಂಡಿರಲಿಲ್ಲ. ಈತನಕ 25,000ಕ್ಕಿಂತಲೂ ಹೆಚ್ಚು ಜನರು ಸಹಿ ಹಾಕಿ ಉದ್ದೇಶವನ್ನು ಬೆಂಬಲಿಸಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಪ್ರಚಾರ ನೀಡಿ ಸಾಮಾನ್ಯ ಜನರಿಗೂ ತಲುಪಿಸಲು ಸಹಾಯ ಮಾಡಿವೆ.'

Viral Video: ಕಾನ್ಫಿಡೆನ್ಸ್​ ಈಸ್ ಸೆಕ್ಸಿ; ಮಾಡೆಲಿಂಗ್ ಕ್ಷೇತ್ರಕ್ಕೆ ಈಕೆ ಕಾಲಿಟ್ಟಾಗ ವಯಸ್ಸು 50!
ರೂಪದರ್ಶಿ, ಲೇಖಕಿ ಗೀತಾ
Follow us on

Dream : ‘ಚಿಕ್ಕಂದಿನಿಂದಲೂ ರೂಪದರ್ಶಿ (Model) ಆಗಬೇಕೆನ್ನುವ ಆಸೆಯಿತ್ತು. ಆದರೆ ಹುಡುಗಿಯರಿಗಿದೆಲ್ಲ ಶೋಭೆ ಅಲ್ಲ ಎಂದರು. ಆಗ ಶಾಲೆಯೊಂದರಲ್ಲಿ ಶಿಕ್ಷಕಿಯಾದೆ. ನನ್ನೊಳಗಿನ ಆಸೆ ಮಾತ್ರ ಗರಿಚಾಚಿಕೊಂಡೇ ಇತ್ತು. ಒಂದು ದಿನ ದಿನಪತ್ರಿಕೆಯಲ್ಲಿ ಸೌಂದರ್ಯ ಸ್ಪರ್ಧೆಯೊಂದರ ಜಾಹೀರಾತನ್ನು ನೋಡಿದೆ. ಆಗ ನನ್ನ ವಯಸ್ಸು 50. ಆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ರನ್ನರ್ ಅಪ್​ ಗಳಿಸಿದೆ. ಮಾಡೆಲಿಂಗ್​ಗಾಗಿ ಕಂಪೆನಿಯೊಂದನ್ನು ಸಂಪರ್ಕಿಸಿದಾಗ, ‘ನಿಮಗೆ ವಯಸ್ಸಾಗಿದೆ, ಒಳಉಡುಪುಗಳಿಗೆ ಮಾಡೆಲಿಂಗ್ (Lingerie Model) ಮಾಡುವುದು ಸೂಕ್ತವೆನ್ನಿಸದು’ ಎಂದರು. ಅದು ನನ್ನೊಳಗನ್ನು ಕುಟುಕಿತು. ಒಳಉಡುಪನ್ನು ಧರಿಸಿ ಫೋಟೋ ಶೂಟ್ ಮಾಡಿಸಿದೆ. ಅಂದಿನಿಂದ ಇಂದಿನವರೆಗೂ ನನ್ನ ವರ್ಕೌಟ್​ ಮತ್ತು ಮಾಡೆಲಿಂಗ್ ಯಾನ ಸಾಗಿಯೇ ಇದೆ. ಕಾನ್ಫಿಡೆನ್ಸ್​ ಈಸ್​ ಸೆಕ್ಸಿ (ಆತ್ಮವಿಶ್ವಾಸ ಮೋಹಕ)! ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ನನಗೀಗ 52 ವರ್ಷಗಳು!’ ಗೀತಾ, ರೂಪದರ್ಶಿ, ಲೇಖಕಿ.

ಇದನ್ನೂ ಓದಿ : Viral Video: ‘ಯಾರು ನ್ಯೂಸ್​ ನೋಡುತ್ತಿದ್ದಾರೆಂದು ನೆನಪಿಸಬಹುದೆ?’ ಆ್ಯಂಕರ್ ಲೈವ್​ನಲ್ಲಿ ತಡವರಿಸಿದ ಆ ಕ್ಷಣಗಳು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರೂಪದರ್ಶಿ ಗೀತಾ​ ಅವರ ವಿಡಿಯೋ ಅನ್ನು Officialpeopleofindia ಎಂಬ ಇನ್​ಸ್ಟಾ ಪುಟವು ಪೋಸ್ಟ್  ಮಾಡಿದೆ. ಇವರ ಆಲೋಚನೆ, ಆತ್ಮವಿಶ್ವಾಸ, ಛಲ ಮತ್ತು ಇವರ ಹೋರಾಟದ ಪ್ರಯಾಣವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ‘ನಾನು #AgeNotCage ಅಭಿಯಾನ ಆರಂಭಿಸಿದಾಗ ಅದು ಈ ಮಟ್ಟಕ್ಕೆ ಬಂದು ತಲುಪುತ್ತದೆ ಎಂದುಕೊಂಡಿರಲಿಲ್ಲ. ಈತನಕ 25,000ಕ್ಕಿಂತಲೂ ಹೆಚ್ಚು ಜನರು ಸಹಿ ಹಾಕಿ ಉದ್ದೇಶವನ್ನು ಬೆಂಬಲಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಮಾಧ್ಯಮಗಳು ಈ ಕುರಿತಾಗಿ ಪ್ರಚಾರ ನೀಡಿ ಸಾಮಾನ್ಯ ಜನರಿಗೂ ತಲುಪಿಸಲು ಸಹಾಯ ಮಾಡಿವೆ.’ ಎಂದಿದ್ದಾರೆ ಗೀತಾ.

‘ಏಜ್ ಈಸ್​ ಕೇಜ್​’ ಅಭಿಯಾನದ ರೂವಾರಿ, ರೂಪದರ್ಶಿ ಗೀತಾ

‘ನೀವು ಬದುಕಿನಲ್ಲಿ ಬದಲಾವಣೆ ಬಯಸಿದರೆ ಅದು ನಿಮ್ಮಿಂದಲೇ ಶುರುವಾಗಬೇಕು ಎನ್ನುವುದನ್ನು ನಾನು ಕಲಿತಿದ್ದೇನೆ. ನಿಮ್ಮನ್ನು ನೀವು ನಂಬಿ, ನಿಮ್ಮ ಉದ್ದೇಶಗಳಲ್ಲಿ ನಂಬಿಕೆ ಇಡಿ. ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾದೆ. ಭಾರತದಲ್ಲಿ ಪಿತೃಪ್ರಧಾನತೆ ಆಳವಾಗಿ ಬೇರೂರಿದೆ. ಇದನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ. ಅಭಿಯಾನದ ಪ್ರಚಾರ ಇನ್ನೂ ನಡೆಯುತ್ತಲೇ ಇದೆ. ಜನರು ಸಹಿ ಹಾಕುತ್ತ ಬೆಂಬಲಿಸುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಮೆಸೇಜ್ ಮೂಲಕ ತಲುಪಿಸುತ್ತಿದ್ದಾರೆ. ಇದೀಗ ನನ್ನೆಲ್ಲಾ ಸಂಕೋಲೆಗಳನ್ನು ಮುರಿದುಕೊಂಡಿದ್ದೇನೆ. ಇನ್ನೆಂದೂ ಪಂಜರದಲ್ಲಿ ಸಿಲುಕಲಾರೆ. ನನ್ನನ್ನು ಯಾರೂ ತಡೆಯಲಾರರು, ನನ್ನನ್ನು ಉದ್ದಕ್ಕೂ ಪ್ರೋತ್ಸಾಹಿಸಿದ ಸ್ನೇಹಿತರಿಗೆ ವಂದನೆ’ ಎಂದಿದ್ದಾರೆ ಗೀತಾ.

‘ಟ್ರೋಲ್​ಗೆ ಒಳಗಾದೆನಾದರೂ ನಾನು ಹೆಜ್ಜೆ ಹಿಂದಿಟ್ಟಿಲ್ಲ’

ಗೀತಾ ಅವರಿಗೆ ಈಗಲೂ ಸಂಸ್ಕೃತಿ ಪೋಷಕರಿಂದ ಪಾಠವೇನೂ ತಪ್ಪಿಲ್ಲ. ನೀನು ಮಾಡೆಲಿಂಗ್ ಮಾಡುವುದಾದರೆ ಮಾಡು, ಆದರೆ ಮೈಯನ್ನೇಕೆ ತೋರಿಸುತ್ತಿದ್ದೀ? ಮೈತುಂಬ ಬಟ್ಟೆ ಹಾಕಿಕೊಂಡು ಮಾಡೆಲಿಂಗ್ ಮಾಡು ಎಂದಿದ್ದಾರೆ. ಕುಟುಂಬ ಮತ್ತು ಸಾಮಾಜಿಕ ಒತ್ತಡಗಳಿಂದಾಗಿ ನನಗೆ 38 ವರ್ಷಕ್ಕೇ ಬದುಕು ಮುಗಿದಿದೆ ಎನ್ನಿಸಲಾರಂಭಿಸಿದೆ, ನಿಜಕ್ಕೂ ನಿಮ್ಮ ಪ್ರಯಾಣ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ ಒಬ್ಬರು. ನಿಮ್ಮ ಕನಸುಗಳು ನಿಮಗೆ ಮಾತ್ರ ಗೊತ್ತು, ಅದರ ಪ್ರಯಾಣವೂ ನಿಮಗಷ್ಟೇ. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಅನೇಕರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:53 pm, Wed, 23 August 23