AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandrayaan 3; ‘ನಾವು ಗೆದ್ದೇ ಗೆಲ್ತೀವಿ’ ವಾದ್ಯಗೋಷ್ಠಿಯ ಮೂಲಕ ಇಸ್ರೋದ ಗೆಲುವಿಗೆ ಹಾರೈಸಿದ್ದ ಪೊಲೀಸ್​ ಪಡೆ

Khaki Studio: ನಮ್ಮ ಪೊಲೀಸ್ ಪಡೆ ಮಹತ್ವದ ಯಾವ ಕಾರ್ಯವೂ ಯಶಸ್ವಿಯಾಗಲೆಂದು ಹಾರೈಸುತ್ತಲೇ ಬಂದಿದೆ. ಇದೀಗ ಮುಂಬೈನ 'ಖಾಕಿ ಸ್ಟುಡಿಯೋ' ಚಂದ್ರಯಾನ 3 ಯಶಸ್ವಿಯಾಗಲಿ ಎಂದು ವಾದ್ಯಗೋಷ್ಠಿಯ ಮೂಲಕ ಹಾರೈಸಿತ್ತು. ಈ ವಿಡಿಯೋ ಇದೀಗ ವೈರಲ್ ಆಗಿದ್ದು ನೆಟ್ಟಿಗರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ನೀವೂ ಕೇಳಿ ಒಮ್ಮೆ 'ಹಮ್​ ಹೋಂಗೇ ಕಾಮ್ಯಾಬ್​...'

Chandrayaan 3; 'ನಾವು ಗೆದ್ದೇ ಗೆಲ್ತೀವಿ' ವಾದ್ಯಗೋಷ್ಠಿಯ ಮೂಲಕ ಇಸ್ರೋದ ಗೆಲುವಿಗೆ ಹಾರೈಸಿದ್ದ ಪೊಲೀಸ್​ ಪಡೆ
ಇಸ್ರೋದ ವಿಜ್ಞಾನಿಗಳಿಗೆ ವಾದ್ಯಗೋಷ್ಠಿಯ ಮೂಲಕ ಗೌರವ ಸಲ್ಲಿಸಿದ ಮುಂಬೈನ ಖಾಕೀ ಸ್ಟುಡಿಯೋದ ಪೊಲೀಸ ಪಡೆ
ಶ್ರೀದೇವಿ ಕಳಸದ
|

Updated on: Aug 23, 2023 | 6:37 PM

Share

Mumbai : ಮುಂಬೈ ಪೊಲೀಸ್​ ಬ್ಯಾಂಡ್​ನ ಖಾಕಿ ಸ್ಟುಡಿಯೋ ‘ಚಂದ್ರಯಾನ 3’ (Chandrayaan 3 Moon Landing) ಯಶಸ್ವಿಯಾಗಲಿ ಎಂದು ಮೂರು ಗಂಟೆಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇಸ್ರೋ ವಿಜ್ಞಾನಿಗಳಿಗೆ ವಿಶೇಷ ಗೌರವವನ್ನು ಸಲ್ಲಿಸಲು ಈ ಬ್ಯಾಂಡ್​ ಹಮ್ ಹೋಂಗೇ ಕಾಮ್ಯಾಬ್​/We Shall Overcome/ನಾವು ಗೆದ್ದೇ ಗೆಲ್ತೀವಿ ಎನ್ನುವ ಹಾಡನ್ನು ವಾದ್ಯಗೋಷ್ಠಿಯ ಮೂಲಕ ಪ್ರಸ್ತುಪಡಿಸಿದ್ದರು. ‘ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಪೂರ್ತಿ ವಿಶ್ವಾಸ ನಮಗಿದೆ’ ಎಂಬ ಒಕ್ಕಣೆ ಈ ವಿಡಿಯೋಗಿದೆ. ಈತನಕ ಈ ವಿಡಿಯೋ ಅನ್ನು ಸುಮಾರು 4,700 ಜನರು ಲೈಕ್ ಮಾಡಿದ್ದಾರೆ. ನೂರಾರು ಜನ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ಬೆಂಗಳೂರು; ‘ನಾಯಿಮಾಂಸ ಕಾನೂನುಬದ್ಧಗೊಳಿಸಿ’; ಭಿತ್ತಿಫಲಕ ಹಿಡಿದ ಯುವಕನ ವಿರುದ್ಧ ನೆಟ್ಟಿಗರ ಆಕ್ರೋಶ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಾದ್ಯಗೋಷ್ಠಿಯನ್ನು ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸುಮಾರು 30,000 ಜನರು ಈ ವಿಡಿಯೋ ನೋಡಿದ್ದಾರೆ. ಮಹತ್ತರ ಕಾರ್ಯಗಳಿಗೆ ನಿಮ್ಮದೇ ಆದ ಶೈಲಿಯಲ್ಲಿ ಗೌರವ ಅರ್ಪಿಸುವುದನ್ನು ನೀವು ಯಾವತ್ತೂ ಮುಂದುವರೆಸಿಕೊಂಡು ಬಂದಿದ್ದೀರಿ, ಅಭಿನಂದನೆ ಎಂದಿದ್ದಾರೆ ಒಬ್ಬರು. ಮುಂಬೈ ಪೊಲೀಸರು ಸದಾ ಕ್ರಿಯಾಶೀಲರು ಮತ್ತು ಸೃಜನಶೀಲರು, ಅದ್ಭುತವಾದ ಪ್ರತಿಭೆಗಳ ಕಣಜವೇ ಆಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಮುಂಬೈ ಪೊಲೀಸರ ವಾದ್ಯಗೋಷ್ಠಿಯಲ್ಲಿ ಕೇಳಿ, ಹಮ್ ಹೋಂಗೇ ಕಾಮ್ಯಾಬ್ಮ…

ವಿಶಿಷ್ಟ ಶೈಲಿಯಲ್ಲಿ ಈ ಹಾಡನ್ನು ನೀವು ನುಡಿಸಿದ್ದೀರಿ, ಸಂಗೀತದ ಬಗ್ಗೆ ನಿಮ್ಮೆಲ್ಲರಿಗೂ ತುಂಬಾ ಗೌರವ ಇದೆ ಎಂದಿದ್ದಾರೆ ಇನ್ನೊಬ್ಬರು. ನೀವು ಧೈರ್ಯಶಾಲಿಗಳೂ ಮತ್ತು ಕಲಾಪ್ರೇಮಿಗಳೂ, ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ನೀವೆಲ್ಲರೂ ದೇಶಕ್ಕಾಗಿ ಹೃನ್ಮಂದಿರದಿಂದ ಸೇವೆಗೈಯ್ಯುತ್ತಿದ್ದೀರಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ‘ಕಾನ್ಫಿಡೆನ್ಸ್​ ಈಸ್ ಸೆಕ್ಸಿ’; ಮಾಡೆಲಿಂಗ್ ಕ್ಷೇತ್ರಕ್ಕೆ ಈಕೆ ಕಾಲಿಟ್ಟಾಗ ವಯಸ್ಸು 50!

ನನ್ನ ತಂದೆ ಹೀಗೆಯೇ ವಾದ್ಯಗೋಷ್ಠಿಯಲ್ಲಿ ಭಾಗಿಯಾಗುತ್ತಿದ್ದರು, ಈಗ ಅವರಿಲ್ಲ, ಅವರ ಯೂನಿಫಾರ್ಮ್​, ದೇಶಸೇವೆಯ ಬಗ್ಗೆ ಪ್ರೀತಿ ಈಗಲೂ ನೆನಪಾಗುತ್ತಿದೆ. ಅವರನ್ನು ನೆನಪಿಸಿದ ನಿಮ್ಮೆಲ್ಲರಿಗೆ ಧನ್ಯವಾದ ಎಂದು ಇನ್ನೊಬ್ಬರು ಹೇಳಿದ್ದಾರೆ. ನಿಮ್ಮ ಪ್ರಾರ್ಥನೆ ತಲುಪಿತು, ಚಂದ್ರಯಾನ ಯಶಸ್ವಿಯಾಗಿದೆ ಎಂದು ಅನೇಕರು ಸಂತಸಪಟ್ಟಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ