ಪ್ರಪಂಚದಾದ್ಯಂತ ಕಳ್ಳಸಾಗಣೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಚಿನ್ನ-ಬೆಳ್ಳಿ, ಡ್ರಗ್ಸ್ ಈಗ ಅಪರೂಪದ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ಇತ್ತೀಚೆಗಷ್ಟೇ ಆಘಾತಕಾರಿ ಪ್ರಕರಣವೊಂದು ಚೆನ್ನೈ ಏರ್ಪೋರ್ಟ್ನಲ್ಲಿ ನಡೆದಿದೆ. ಮಲೇಷ್ಯಾದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಮಹಿಳಾ ಪ್ರಯಾಣಿಕರ ಬಗ್ಗೆ ಅನುಮಾನ ಹುಟ್ಟಿ ಬ್ಯಾಗ್ ತಪಾಸಣೆ ನಡೆಸಿದಾಗ 22 ಜೀವಂತ ಹಾವುಗಳು ಪತ್ತೆಯಾಗಿವೆ. ವಾಸ್ತವವಾಗಿ ಹಾವು ವಿಷಕಾರಿಯಾಗಿರುವುದರಿಂದ ಜನರು ಅದರಿಂದ ದೂರವೇ ಇರುತ್ತಾರೆ, ವಿಷದ ಖರೀದಿ ಹಾಗೂ ಮಾರಾಟ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹೆಬ್ಬಾವನ್ನು ಜನರು ಸಾಕು ಪ್ರಾಣಿಯಂತೆ ಮನೆಯಲ್ಲಿ ಇರಿಸಿಕೊಳ್ಳುತ್ತಿದ್ದಾರೆ. ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಹಿಳೆಯ ಲಗೇಜ್ ತಪಾಸಣೆ ವೇಳೆ ಕಸ್ಟಮ್ ಇಲಾಖೆಯ ತಂಡವು ಹುಡುಕುತ್ತಿರುವಾಗ ಚೀಲದಿಂದ ಹಾವುಗಳು ಹೊರಬರಲು ಪ್ರಾರಂಭಿಸಿದಾಗ ಭಯಗೊಂಡರು.
ಮತ್ತಷ್ಟು ಓದಿ: Viral Post: ಏರ್ ಇಂಡಿಯಾದ ನಿರ್ಲಕ್ಷ್ಯದಿಂದ ವಿಮಾನ ನಿಲ್ದಾಣದಲ್ಲಿ ಬೆಕ್ಕಿನ ಮರಿಯನ್ನು ಕಳೆದುಕೊಂಡ ಪ್ರಯಾಣಿಕ
ಮಾಹಿತಿ ಪ್ರಕಾರ ಎಲ್ಲಾ ಹಾವುಗಳು ವಿವಿಧ ಜಾತಿಯ ಹಾವುಗಳಾಗಿದ್ದು, ಅವುಗಳನ್ನು ವಿವಿಧ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ತರಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ, ಮಹಿಳೆ ಏಪ್ರಿಲ್ 28 ರಂದು ಮಲೇಷ್ಯಾದ ರಾಜಧಾನಿ ಕೌಲಾಲಂಪುರದಿಂದ AK 13 ಸಂಖ್ಯೆಯ ವಿಮಾನದಿಂದ ಭಾರತದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಎಂದು ಹೇಳಲಾಗಿದೆ.
#WATCH | Tamil Nadu: On 28th April, a female passenger who arrived from Kuala Lumpur by Flight No. AK13 was intercepted by Chennai Airport Customs. On examination of her checked-in baggage, 22 snakes of various species and a chameleon were found & seized under the Customs Act,… pic.twitter.com/mRGKivczbA
— ANI Digital (@ani_digital) April 29, 2023
ಬ್ಯಾಗ್‌ನಿಂದ ಹಾವುಗಳು ಹೊರಬರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುದ್ದಿ ಸಂಸ್ಥೆ ANI ಟ್ವಿಟ್ಟರ್‌ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡಿದೆ ಮತ್ತು ಕಸ್ಟಮ್ಸ್ ಇಲಾಖೆ ತಂಡವು ಕಸ್ಟಮ್ಸ್ ಆಕ್ಟ್ 1962 ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಚೀಲಗಳನ್ನು ಪರಿಶೀಲಿಸುವಾಗ ಪತ್ತೆಯಾದ 22 ಜೀವಂತ ಹಾವುಗಳೊಂದಿಗೆ ಗೋಸುಂಬೆಯನ್ನು ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ