Viral Video: ಸ್ಕೂಟಿ ಕದಿಯಲು ಹೋದ ಕಳ್ಳರು ತಮ್ಮ ಸ್ಕೂಟಿಯನ್ನೇ ಕಳೆದುಕೊಂಡಿದ್ದು ಹೇಗೆ?
ಎಲ್ಲಾ ಸಂದರ್ಭದಲ್ಲೂ ನೀವು ಅಂದುಕೊಂಡಿದ್ದು ನೆರವೇರಬೇಕೆಂದೇನಿಲ್ಲವಲ್ಲ, ಅದು ಈ ಕಳ್ಳರ ಪಾಲಿಗೆ ಸತ್ಯವಾಗಿದೆ. ಸ್ಕೂಟಿ ಕದಿಯಲು ಬೇರೆಯವರ ಮನೆಯ ಕಾಂಪೌಂಡ್ ಒಳಗೆ ನುಗ್ಗಿದ್ದ ಕಳ್ಳರಿಗೆ ಕೊನೆಗೆ ತಮ್ಮ ಸ್ಕೂಟಿಯನ್ನೂ ಉಳಿಸಿಕೊಳ್ಳಲಾಗಲಿಲ್ಲ
ಎಲ್ಲಾ ಸಂದರ್ಭದಲ್ಲೂ ನೀವು ಅಂದುಕೊಂಡಿದ್ದು ನೆರವೇರಬೇಕೆಂದೇನಿಲ್ಲವಲ್ಲ, ಅದು ಈ ಕಳ್ಳರ ಪಾಲಿಗೆ ಸತ್ಯವಾಗಿದೆ. ಸ್ಕೂಟಿ ಕದಿಯಲು ಬೇರೆಯವರ ಮನೆಯ ಕಾಂಪೌಂಡ್ ಒಳಗೆ ನುಗ್ಗಿದ್ದ ಕಳ್ಳರಿಗೆ ಕೊನೆಗೆ ತಮ್ಮ ಸ್ಕೂಟಿಯನ್ನೂ ಉಳಿಸಿಕೊಳ್ಳಲಾಗಲಿಲ್ಲ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿರುವುದು ಕಂಡು ಬಂದಿದೆ. ಇಬ್ಬರು ಕಳ್ಳರು ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಸ್ಕೂಟಿ ಕದಿಯಲು ಯತ್ನಿಸಿದ್ದು, ಅದರಲ್ಲಿ ವಿಫಲರಾಗಿದ್ದಾರೆ.
ಸತತ ಪ್ರಯತ್ನದಿಂದ ಯಶಸ್ಸು ಸಿಗುತ್ತದೆ ಎಂಬುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅದೇ ಸಮಯದಲ್ಲಿ, ಪ್ರತಿ ಪ್ರಯತ್ನದಲ್ಲಿ ಯಶಸ್ಸನ್ನು ಪಡೆಯುವುದು ಅನಿವಾರ್ಯವಲ್ಲ. ಈ ಕಳ್ಳರಿಗೆ ಅನ್ವಯಿಸುತ್ತವೆ.
Two thieves went to steal a motorcycle and ended up losing theirs. pic.twitter.com/BOSpL2PAjV
— CCTV IDIOTS (@cctvidiots) April 29, 2023
ಇಬ್ಬರು ಕಳ್ಳರು ಮೊದಲು ಯಾರಿಗೂ ತಿಳಿಯದಂತೆ ಮನೆಯ ಗೇಟ್ ಅನ್ನು ತೆರೆದು ಸ್ಕೂಟಿಯನ್ನು ಕದಿಯುವ ಪ್ರಯತ್ನ ನಡೆಸಿದ್ದಾರೆ, ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಮನೆಯೊಳಗಿಂತ ವ್ಯಕ್ತಿಯೊಬ್ಬರ ಓಡಿಬಂದು ತಡೆದಿದ್ದಾನೆ.
ಮತ್ತಷ್ಟು ಓದಿ: Viral News: ಸ್ಕರ್ಟ್ ಧರಿಸಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಯುವಕರು!
ಕಳ್ಳರು ಕದಿಯಲು ಹೊರಟಿದ್ದ ಗಾಡಿಯನ್ನು ಅಲ್ಲಿಯೇ ಬಿಟ್ಟು, ತಮ್ಮ ಗಾಡಿಯನ್ನಾದರೂ ತೆಗೆದುಕೊಂಡು ಪರಾರಿಯಾಗೋಣ ಎನ್ನುವಷ್ಟೊತ್ತಿಗೆ ಅಕ್ಕಪಕ್ಕದ ಮನೆಯವರೆಲ್ಲಾ ಬಂದಿದ್ದು, ಜೀವ ಉಳಿಸಿಕೊಂಡರೆ ಸಾಕೆಂದು ಓಡಿ ಪರಾರಿಯಾಗಿದ್ದಾರೆ, ವಿಡಿಯೋ 31 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ