Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: ವಿವಿಧ ಕಳ್ಳತನದಲ್ಲಿ ಭಾಗಿಯಾದ್ದವರು ಪೊಲೀಸ್​ ಬಲೆಗೆ; ಬಂಧಿತರಿಂದ 16 ಲಕ್ಷ ಮೌಲ್ಯದ ಬೈಕ್​, ದವಸ ಧಾನ್ಯ ವಶ

ವಿವಿಧ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ವರು ಕಳ್ಳರನ್ನ ಇದೀಗ ಜಿಲ್ಲೆಯ ಚಿಟಗುಪ್ಪಾ ಪೊಲೀಸರು ಹೆಡೆಮುರಿ ಕಟ್ಟಿದ್ದು, ಬಂಧಿತರಿಂದ 16 ಲಕ್ಷ ಮೌಲ್ಯದ ಬೈಕ್​, ದವಸ ಧಾನ್ಯ ವಶಕ್ಕೆ ಪಡೆದಿದ್ದಾರೆ.

ಬೀದರ್: ವಿವಿಧ ಕಳ್ಳತನದಲ್ಲಿ ಭಾಗಿಯಾದ್ದವರು ಪೊಲೀಸ್​ ಬಲೆಗೆ; ಬಂಧಿತರಿಂದ 16 ಲಕ್ಷ ಮೌಲ್ಯದ ಬೈಕ್​, ದವಸ ಧಾನ್ಯ ವಶ
ಆರೋಪಿಗಳನ್ನ ಬಂಧಿಸಿದ ಪೊಲೀಸರು
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 12, 2023 | 3:01 PM

ಬೀದರ್: ವಿವಿಧ ಕಳ್ಳತನದಲ್ಲಿ ಭಾಗಿಯಾದ್ದ ನಾಲ್ವರು ಕಳ್ಳರನ್ನ ಇದೀಗ ಜಿಲ್ಲೆಯ ಚಿಟಗುಪ್ಪಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ವಿವಿಧ ಕಂಪನಿಯ 18 ಮೋಟಾರ್ ಸೈಕಲ್, 350 ಕೆಜಿಯಷ್ಟು ಸೋಯಾಬಿನ್, 250 ಕೆಜಿಯಷ್ಟು ಅಲಸಂದಿ, 840 ಕೆಜಿ ತೊಗರಿಯನ್ನ ಸೇರಿ ಒಟ್ಟು 16.93 ಲಕ್ಷ ರೂ. ಮೌಲ್ಯದ ಬೈಕ್ ಹಾಗೂ ದವಸಧಾನ್ಯವನ್ನ ವಶಕ್ಕೆ ಪಡೆಯಲಾಗಿದೆ. ಹೌದು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ 7, ತೆಲಂಗಾಣ ರಾಜ್ಯದ ಜಹೀರಾಬಾದ್​ನಲ್ಲಿ ಮೂರು, ಕಲ್ಬುರ್ಗಿ ಜಿಲ್ಲೆಯ ಚಿಂಚೋಳ್ಳಿಯ ಕೂಡ್ಲಿಯಲ್ಲಿ 2 ಹಾಗೂ ಬಸವಕಲ್ಯಾಣ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ 1 ಪ್ರಕರಣ ಸೇರಿ ಒಟ್ಟು 13 ಪ್ರಕರಣಗಳಲ್ಲಿ ಕಳುವಾದ ಬೈಕ್ ದವಸಧಾನ್ಯವನ್ನ ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.

ಅಕ್ರಮ ಮದ್ಯ ವಶ; ಆಟೋ‌ಮಾಲೀಕನ ವಿರುದ್ಧ ದೂರು ದಾಖಲು

ದಾವಣಗೆರೆ: ನಗರದ ಶಾಮನೂರು ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನ ಎಸ್‌ಎಸ್‌ಟಿ ತಂಡದ ಜೊತೆಗೂಡಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುಮಾರು 32 ಸಾವಿರ ಮೌಲ್ಯದ ಮದ್ಯ ಇದಾಗಿದೆ. ಹೌದು ಒಂದೇ ಅಂಗಡಿಗೆ ಲೈಸೆನ್ಸ್ ಪಡೆಯಲಾಗಿತ್ತು, ಆದರೆ ಗುತ್ತಿಗೆ ನೀಡಿದ್ದ ಮತ್ತೊಂದು ಅಂಗಡಿಗೂ ಮದ್ಯವನ್ನು ಸರಬರಾಜು ಮಾಡಲು ಆಪ್ಪೆ ಆಟೊದಲ್ಲಿ ಸಾಗಿಸುತ್ತಿರುವಾಗ 10,581 ಮೌಲ್ಯದ 8.64 ಲೀಟರ್ ದೇಶಿ ಮದ್ಯ ಹಾಗೂ 22,400 ಮೌಲ್ಯದ 93.840 ಲೀಟರ್ ಬಿಯರ್ ಸೇರಿ 3 ಲಕ್ಷ ಮೌಲ್ಯದ ಆಟೊವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಟೋ ಮಾಲೀಕ ಯಲ್ಲಮ್ಮನಗರದ ಬಸಣ್ಣ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂಓದಿ:ಚುನಾವಣೆ ಘೋಷಣೆ ಮುನ್ನವೇ ಸಾಮಗ್ರಿ ವಶಕ್ಕೆ ಪಡೆದಿದ್ದ ಚುನಾವಣಾ ಅಧಿಕಾರಿಗಳ ಕ್ರಮ ರದ್ದುಗೊಳಿಸಿ ಹೈಕೋರ್ಟ್ ಆದೇಶ

ಮಹಿಳೆ ಕೊಂದು ಎಂ ಸ್ಯಾಂಡ್ ನಲ್ಲಿ ಹೂತು ಹಾಕಿದ ಹಂತಕರು

ಗದಗ: ಮಹಿಳೆಯನ್ನ ಕೊಂದು ಎಂ ಸ್ಯಾಂಡ್(ಮರಳು)ನಲ್ಲಿ ಹೂತು ಹಾಕಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನವೋದಯ ಶಾಲೆ ಹಿಂದುಗಡೆ ಹಾಕಲಾಗಿದ್ದ ಎಂ ಸ್ಯಾಂಡನಲ್ಲಿ ಮೃತ ದೇಹ ಪತ್ತೆಯಾಗಿದ್ದು, ಕೊಲೆಗೆ ಕಾರಣ ಇನ್ನು ತಿಳಿದಬಂದಿಲ್ಲ. ಸ್ಥಳಕ್ಕೆ ಸಿಪಿಐ ಮಲ್ಲಯ್ಯ ಮಠಪತಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ