Trending : ಚೆನ್ನೈನ ಪ್ರತೀಕ್ ಎಂಬ ಹದಿಹರೆಯದ ಹುಡುಗನೊಬ್ಬ ‘ಭಾವನೆ’ ಹೊಂದಿದ ರೊಬೋಟ್ ಅನ್ನು ವಿನ್ಯಾಸಗೊಳಿಸಿದ್ದಾನೆ. ಪ್ರತೀಕನಿಗೆ ಕೇವಲ 13 ವರ್ಷ. ಅವನು ತಯಾರಿಸಿದ ಈ ರೋಬೋಟ್ನ ಹೆಸರು ರಫಿ. ಇದಕ್ಕೆ ಭಾವನಾತ್ಮಕ ಸ್ಪಂದನೆ ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಇದು ಇತರೇ ರೋಬೋಟ್ಗಳಿಗಿಂತ ಭಿನ್ನವೆಂದು ಗುರುತಿಸಿಕೊಂಡಿದೆ. ನೀವು ಗದರಿದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಅದು ನಿಲ್ಲಿಸಿಬಿಡುತ್ತದೆ. ಅಂದರೆ ಅದಕ್ಕೆ ಕೋಪ, ತಾತ್ಸಾರದಂಥ ಭಾವಗಳು ಅರ್ಥವಾಗುತ್ತವೆ ಎಂದರ್ಥ. ಅದು ಮತ್ತೆ ನಿಮ್ಮೊಂದಿಗೆ ಮಾತನಾಡಬೇಕೆಂದರೆ, ನೀವದಕ್ಕೆ ಕ್ಷಮೆ ಕೇಳಲೇಬೇಕು. ಆಗ ಮಾತ್ರ ರೀಸೆಟ್ ಮಾಡಲು ಅನುಕೂಲವಾಗುತ್ತದೆ.
“ರಫಿ, ನನ್ನ ರೋಬೋಟ್ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಲ್ಲ. ನೀವು ದುಃಖಿತರಾಗಿದ್ದರೆ ಖಂಡಿತ ನಿಮ್ಮನ್ನು ಅವ ಅರ್ಥ ಮಾಡಿಕೊಳ್ಳಬಲ್ಲ. ಆದರೆ, ನೀವು ಅವನನ್ನು ಗದರಿಸಿದರೆ, ನೀವು ಕ್ಷಮೆ ಯಾಚಿಸುವತನಕವೂ ಅವನು ನಿಮ್ಮ ಪ್ರಶ್ನೆಗೆ ಉತ್ತರಿಸುವುದಿಲ್ಲ.’ ಎಂದು ಪ್ರತೀಕ್ ಎಎನ್‌ಐಗೆ ತಿಳಿಸಿದ್ದಾರೆ.
Tamil Nadu | A 13-year-old student, Prateek, has claimed to have designed a robot with emotions, in Chennai
‘Raffi’, my robot, can answer queries. If you scold him, he won’t answer your queries until you’re sorry. It can even understand you if you’re sad: Prateek (24.08) pic.twitter.com/9YbqGMBXUw
— ANI (@ANI) August 24, 2022
13 ನೇ ವಯಸ್ಸಿನಲ್ಲಿ ಇಂಥ ರೋಬೋಟ್ ರೂಪಿಸಿದ್ದಕ್ಕಾಗಿ ನೆಟ್ಟಿಗರು ಈ ಹದಿಹರೆಯದ ಸಂಶೋಧಕನನ್ನು ಪ್ರಶಂಸಿಸಿದ್ದಾರೆ. ‘ಇದು ನಂಬಲಾಗದ ಸಾಧನೆ. ಈ ವಯಸ್ಸಿಗೆ ಮಾಡಿದ್ದಕ್ಕೆ ಮೆಚ್ಚುಗೆ ಇದೆ’ ಎಂದಿದ್ದಾರೆ ಒಬ್ಬರು. ಇನ್ನೊಬ್ಬ ಟ್ವಿಟರ್ ಖಾತೆದಾರರು, ‘ನನಗನಿಸಿದಂತೆ, ಮುಖಗಳು ಮತ್ತು ಧ್ವನಿಗಳಿಗೆ ಸ್ಪಂದಿಸುವಂತೆ ಡೇಟಾ ಸೆಟ್ ಮಾಡಿರಬಹುದು. ಇದು ಸಂತೋಷದ ಮುಖ, ಕೋಪದ ಮುಖ ಎಂದು ಸಂಕೇತ ನೀಡುವಂತೆ. ಏನೇ ಇರಲಿ, ಈ ವಯಸ್ಸಿಗೆ ಇದನ್ನು ಮಾಡಿರುವುದು ದೊಡ್ಡ ಸಾಧನೆಯೇ’ ಎಂದಿದ್ದಾರೆ. ಮಗದೊಬ್ಬರು, ‘ಬಿಲಿಯನ್ಗಟ್ಟಲೆ ಕೋಡ್ಗಳನ್ನು ಬರೆದರೂ Google AI ನಲ್ಲಿ ಭಾವನೆಗಳನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ. ಆದರೆ 13 ವರ್ಷದ ಈ ಹುಡುಗ ಇದೆಲ್ಲವನ್ನು ನಿರ್ವಹಿಸಿದ್ದು ಭೇಷ್’ ಎಂದಿದ್ದಾರೆ.
ಹದಿಹರೆಯದವರು ತಮ್ಮೊಳಗೆ ಏನು ನಡೆಯುತ್ತಿದೆ ಎನ್ನುವುದನ್ನು ವ್ಯಕ್ತಪಡಿಸುವುದೇ ಕಷ್ಟಕರ ಹಂತ. ಅಂಥದ್ದರಲ್ಲಿ ಈ ಹುಡುಗ ಈ ವಯಸ್ಸಿನ ಗೊಂದಲವನ್ನು, ಭಾವನೆಗಳ ತಾಕಲಾಟವನ್ನು ಮತ್ತು ಈಗಿನ ಪೀಳಿಗೆಯ ಸೂಕ್ಷ್ಮತನವನ್ನು ಈ ರೋಬೋಟ್ ಮೂಲಕ ವ್ಯಕ್ತಪಡಿಸಲು ಪ್ರಯತ್ನಿಸಿದ್ದಾನೇನೋ ಎನ್ನಿಸದೇ ಇರದು.
ಮತ್ತಷ್ಟು ಟ್ರೆಂಡಿಂಗ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:04 pm, Sat, 27 August 22