ಒಟಿಟಿಯಲ್ಲಿ ಪಂಚಾಯತ್ ಅತ್ಯಂತ ಜನಪ್ರಿಯ ಹಾಸ್ಯ ವೆಬ್ ಸರಣಿಯಾಗಿದೆ. ಚಿತ್ರ ಪ್ರೇಮಿಗಳ ನೆಚ್ಚಿನ ಸೀರೀಸ್ ಇದಾಗಿದೆ. ಇದರ ಸೀಸನ್ 3 ಸರಣಿಯಲ್ಲಿ ಒಂದು ಕಾರ್ಯಕ್ರಮದಲ್ಲಿ ಸುಖ, ಶಾಂತಿ, ಸಮೃದ್ಧಿಗಾಗಿ ಪಾರಿವಾಳ ಹಾರಿಸುವ ದೃಶ್ಯವಿದೆ. ಹೀಗೆ ಪಾರಿವಾಳ ಹಾರಿಸುವಾಗ ಅದು ಹಾರದೆ ಕೆಳಗೆ ಬೀಳುತ್ತದೆ. ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾರಿವಾಳಗಳನ್ನು ಹಾರಿಸುವಾಗ ಅದರಲ್ಲಿ ಒಂದು ಪಾರಿವಾಳ ಹಾರದೆ ಕೆಳಗೆ ಬಿದ್ದಿದೆ. ಈ ದೃಶ್ಯ ಇದೀಗ ಸಖತ್ ವೈರಲ್ ಆಗಿದ್ದು, ಇದು ಪಂಚಾಯತ್-3 ಚಿತ್ರದ ದೃಶ್ಯವನ್ನು ನೆನಪಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ಘಟನೆ ಛತ್ತೀಸ್‌ಗಢದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಡೆದಿದ್ದು, ಎಸ್ಪಿ ಕೈಯಲ್ಲಿದ್ದ ಪಾರಿವಾಳವೊಂದು ಹಾರದೆ ಕೆಳ ಬಿದ್ದಿದೆ. ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಮತ್ತು ಶಾಂತಿಯ ಭಾಗವಾಗಿ ಪಾರಿವಾಳಗಳನ್ನು ಹಾರಿಸಲಾಯಿತು. ಅಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗಿರ್ಜಾ ಶಂಕರ್ ಜೈಸ್ವಾಲ್ ಅವರು ಪಾರಿವಾಳವನ್ನು ಹಾರಿಸುವಾಗ ಅದು ಹಾರದೇ ಪಂಚಾಯತ್ 3 ವೆಬ್ ಸರಣಿಯ ಗೋ ಕಬೂತರ್ ಗೋ’ ದೃಶ್ಯದಂತೆ ದೊಪ್ಪನೆ ಕೆಳಗೆ ಬಿದ್ದಿದೆ.
Panchayat-3 Chattisgarh Version🕊️
pic.twitter.com/QoxAoTEYps— Ghar Ke Kalesh (@gharkekalesh) August 19, 2024
ಈ ಕುರಿತ ಪೋಸ್ಟ್ ಒಂದನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪಂಚಾಯತ್-3 ಛತ್ತೀಸ್‌ಗಢ ಆವೃತ್ತಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಗಣ್ಯರು ಪಾರಿವಾಳ ಹಾರಿಸುವಾಗ ಅದರಲ್ಲಿ ಒಂದು ಪಾರಿವಾಳ ಹಾರದೆ ಕೆಳ ಬೀಳುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: 1008ರ ಮಧ್ಯೆ ಅಡಗಿರುವ 8001 ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವೇ?
ಆಗಸ್ಟ್ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ರಿಯಲ್ ಲೈಫ್ ಪಂಚಾಯತ್ 3 ದೃಶ್ಯ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದು ವಾಸ್ತವವಾಗಿ ಅಪರಾಧವಾಗಿದೆ’ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ