ಕೆಲವರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿದರೆ, ಇನ್ನೂ ಕೆಲವರು ಭಿಕ್ಷೆ ಬೇಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿದ್ದಾರೆ. ಹೌದು ಈಗೀಗ ಭಿಕ್ಷಾಟನೆ ಒಂದು ದಂಧೆಯಾಗಿಬಿಟ್ಟಿದೆ ಅಂತಾನೇ ಹೇಳಬಹುದು. ಅದೆಷ್ಟೋ ಭಿಕ್ಷುಕರು ಕೈಕಾಲು ಸರಿ ಇದ್ದರೂ ಕೂಡಾ ನನಗೆ ದುಡಿಯಲು ಒಂದು ಕೈಯಿಲ್ಲ, ನನಗೆ ಒಂದು ಕಾಲಿಲ್ಲ ಅಂತ ಅನುಕಂಪದ ನಾಟಕವನ್ನಾಡುತ್ತಾ ಭಿಕ್ಷೆ ಬೇಡಿ ಹಣ ಸಂಪಾದನೆ ಮಾಡುತ್ತಿರುತ್ತಾರೆ. ಹೀಗೆ ಭಿಕ್ಷಾಟನೆಯ ಮೂಲಕವೇ ಇವರುಗಳು ತಿಂಗಳಿಗೆ ಲಕ್ಷಾನುಗಟ್ಟಲೆ ದುಡಿಯುತ್ತಾರೆ. ಇದೇ ರೀತಿ ಇಲ್ಲೊಬ್ಬ ಪುಟ್ಟ ಬಾಲಕ ನನಗೆ ಒಂದು ಕೈಯಿಲ್ಲ ಎಂದು ಸುಳ್ಳು ಹೇಳುತ್ತಾ ಭಿಕ್ಷೆ ಬೇಡುತ್ತಿದ್ದ ವೇಳೆ ಬೈಕ್ ಸವಾರನ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಹಾಸ್ಯಮಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ವಾಷಿಪ್ ರಾಜ್ (@waship_raj) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಬಾಲಕನೊಬ್ಬ ಟ್ರಾಫಿಕ್ ಸಿಗ್ನಲ್ ಬಳಿ ನಿಂತು ಕೈ ಒಂದು ಕೈಯಿಲ್ಲ ಎಂದು ಸುಳ್ಳು ಹೇಳಿ ವಾಹನ ಸವಾರರ ಬಳಿ ಭಿಕ್ಷೆ ಬೇಡುತ್ತಿರುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ಯಾವುದೋ ನಗರದ ಟ್ರಾಫಿಕ್ ಸಿಗ್ನಲ್ ಬಳಿ ನಿಂತು ಪುಟ್ಟ ಬಾಲಕನೊಬ್ಬ ನನಗೆ ಕೈಯಿಲ್ಲ ದಯವಿಟ್ಟು ಭಿಕ್ಷೆ ನೀಡಿ ಸ್ವಾಮಿ ಎಂದು ವಾಹನ ಸವಾರರ ಬಳಿ ಭಿಕ್ಷೆ ಬೇಡುತ್ತಾ ನಿಂತಿರುತ್ತಾನೆ. ಹೀಗೆ ಆತನ ಬಳಿ ಬಂತಂತಹ ಬೈಕ್ ಸವಾರರರೊಬ್ಬನ ಬಳಿಯೂ ಆತ ʼನೋಡಿ ಸ್ವಾಮಿ ನನ್ಗೆ ಒಂದು ಕೈಯಿಲ್ಲ ದಯವಿಟ್ಟು ಭಿಕ್ಷೆ ಕೊಡಿʼ ಎಂದು ಕೇಳುತ್ತಾನೆ. ಈತ ಪಕ್ಕಾ ಸುಳ್ಳು ಹೇಳುತ್ತಿದ್ದಾನೆ ಎಂದು ಭಾವಿಸಿದ ಬೈಕ್ ಸವಾರ ಆತನ ಕೈಯನ್ನು ಹಿಡಿದು, ಇದು ಕೈಯಲ್ಲವೇ, ಅಬ್ಬಬ್ಬಾ ಏನ್ ನಾಟಕ ಮಾಡ್ತೀಯಪ್ಪಾ ಎಂದು ಕೇಳುವ ತಮಾಷೆಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮೋದಿ ಯಾರು ಎಂದು ಪತ್ರಕರ್ತೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳ ಉತ್ತರ ಹೇಗಿತ್ತು ನೋಡಿ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 50.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2.1 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಸಿಕ್ಕಿ ಬಿದ್ದ ನಂತರ ಆ ಬಾಲಕನ ನಗುವನ್ನು ಕಂಡು ನನಗೆ ನಗು ತಡೆಯಲಾಗಲಿಲ್ಲʼ ಎಂದು ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಬಾಲಕನಿಗೆ ಆಸ್ಕರ್ ಪ್ರಶಸ್ತಿ ನೀಡಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ