Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?

|

Updated on: Jul 14, 2023 | 4:10 PM

Music : ಆ ಬಟ್ಟಲುಗಣ್ಣುಗಳು, ಗುಳಿಕೆನ್ನೆ ಮತ್ತು ಎಳೇಬೆರಳುಗಳಿಂದ ಪಕ್ವವಾಗಿ ಹೊಮ್ಮುವ ಆ ನಾದ ಆಹಾ... ಈ ವಾರಾಂತ್ಯಕ್ಕೆ ಇದಕ್ಕಿಂತ ನಶೆ ಬೇಕೆ? ಎಷ್ಟು ಸಲ ನೋಡುತ್ತೀರಿ ಮತ್ತು ಕೇಳುತ್ತೀರಿ ಈ ವಿಡಿಯೋ? ಲೆಕ್ಕ ಒಪ್ಪಿಸಿ!

Viral Video: ಕ್ಯಾ ಬಾತ್​ ಹೈ ಛೋಟೇ ಉಸ್ತಾದ್​! ಎಲ್ಲಿಯವರು ನೀವು?
ಕನುನ್​ ಎಂಬ ತಂತೀ ವಾದ್ಯ ನುಡಿಸುತ್ತಿರುವ ಬಾಲಕ
Follow us on

Child Prodigy : ಎಳವೆಯೆಂದರೆ ನೀರಿನಂತೆ. ನೀವು ಯಾವ ಆಕಾರದ ಪಾತ್ರೆಗೆ ನೀರು ಹಾಕುತ್ತೀರೋ ಆ ಆಕಾರವನ್ನು ನೀರು ಪಡೆದುಕೊಳ್ಳುತ್ತದೆ. ಮಕ್ಕಳ ವಿಷಯದಲ್ಲಿಯೂ ಇದು ಅಷ್ಟೇ ಸತ್ಯ. ಇದೀಗ ಇಲ್ಲೊಬ್ಬ ಛೋಟಾ ಉಸ್ತಾದ್​ರನ್ನು ನಿಮಗಾಗಿ ಕರೆದುಕೊಂಡು ಬಂದಿದ್ದೇವೆ. ಇವರಿಗೆ ವಯಸ್ಸು ಆರರ ಮೇಲೆ ದಾಟಿರಲಿಕ್ಕಿಲ್ಲ. ಆದರೆ ಇವರು ವೃತ್ತಿಪರರಂತೆ ಈ ವಾದ್ಯವನ್ನು ನುಡಿಸುವುದನ್ನು ಕೇಳುತ್ತಿದ್ದರೆ, ಈಗಲೇ ಹೋಗಿ ಇವರನ್ನು ಕಿಡ್ನ್ಯಾಪ್​ (Kidnap) ಮಾಡಬೇಕು ಎಂದೆನಿಸದೇ ಇರದು!

ಮ್ಯೂಸಿಕ್​ ಪ್ರೊಡ್ಯೂಸರ್​ Eduardo Ihidoype ಈ ಛೋಟಾಉಸ್ತಾದನ ವಿಡಿಯೋ  ಹಂಚಿಕೊಂಡಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1.8 ಲಕ್ಷ ಜನರು ಲೈಕ್ ಮಾಡಿದ್ದು, 4 ಮಿಲಿಯನ್​ಗಿಂತಲೂ ಹೆಚ್ಚು ಜನರು ಇದನ್ನು ಕೇಳಿ ಆನಂದಿಸಿದ್ದಾರೆ. ಸಾವಿರಾರು ಜನರು ಛೋಟೆ ಉಸ್ತಾದರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಇವರು ನಮಗೆ ಈ ವಾದ್ಯವನ್ನು ಕಲಿಸುತ್ತಾರೆಯೇ? ಎಂದು ಕೇಳಿದ್ದಾರೆ ಅನೇಕರು.

ಇದನ್ನೂ ಓದಿ : Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ

ಕನುನ್ (Qanun, Kanun) ಎಂದು ಕರೆಯುವ ಈ ವಾದ್ಯವನ್ನು ಭಾರತದಲ್ಲಿ ಸ್ವರಮಂಡಲವೆನ್ನುತ್ತಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು ಈ ವಾದ್ಯವನ್ನು ನುಡಿಸಿಕೊಂಡು ಹಾಡುವ ಪದ್ಧತಿ ಇದೆ. ಈ ವಾದ್ಯದ ಮೂಲ ಈಜಿಪ್ತ್​ ಮತ್ತು ಸಿರಿಯಾ, 18ನೇ ಶತಮಾನದಲ್ಲಿ ಇದು ಬೆಳಕಿಗೆ ಬಂದಿತು ನಂತರ ಏಷ್ಯಾದಲ್ಲಿ ವಿಸ್ತರಿಸಿಕೊಂಡಿತು ಎನ್ನುತ್ತದೆ ಒಂದು ಮೂಲ. ಇನ್ನೊಂದು ಮೂಲದ ಪ್ರಕಾರ 10ನೇ ಶರಮಾನದಲ್ಲಿ ಅರಬ್ಬರು ಈ ವಾದ್ಯವನ್ನು ಶೋಧಿಸಿದರೆಂದು ಇದೆ.

ಇದನ್ನೂ ಓದಿ : Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ! 

ನೆಟ್ಟಿಗರಂತೂ ಈ ಛೋಟೆ ಉಸ್ತಾದರ ನುಡಿಸಾಣಿಕೆಗೆ ಫಿದಾ ಆಗಿದ್ದಾರೆ, ನೀವು? ಆ ಬಟ್ಟಲುಗಣ್ಣುಗಳು,  ಗುಳಿಕೆನ್ನೆ ಮತ್ತು ಎಳೇಬೆರಳುಗಳಿಂದ ಪಕ್ವವಾಗಿ ಹೊಮ್ಮಿಸುವ ಆ ನಾದ ಆಹಾ… ಈ ವಾರಾಂತ್ಯಕ್ಕೆ ಇದಕ್ಕಿಂತ ನಶೆ ಬೇಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ