Viral Video: ರೀಲ್ಸ್​ಗಾಗಿ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸವಾರಿ ಹೊರಟ ವ್ಯಕ್ತಿ

|

Updated on: Dec 27, 2024 | 12:39 PM

ರಾಜಸ್ಥಾನದ ಝಾಲಾವರ್‌ನಲ್ಲಿ ಚಾಲಕನೊಬ್ಬ ತನ್ನ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ಅತಿವೇಗವಾಗಿ ಚಲಾಯಿಸಿದ ಘಟನೆ ವೈರಲ್ ಆಗಿದೆ. ಈ ಅಪಾಯಕಾರಿ ಸ್ಟಂಟ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದ ಜನಪ್ರಿಯತೆಗಿಂತ ಸುರಕ್ಷತೆ ಮುಖ್ಯ ಎಂದು ಪೊಲೀಸರು ಎಚ್ಚರಿಸಿದ್ದಾರೆ.

Viral Video: ರೀಲ್ಸ್​ಗಾಗಿ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸವಾರಿ ಹೊರಟ ವ್ಯಕ್ತಿ
Child Rides On Car Bonnet
Follow us on

ಇನ್‌ಸ್ಟಾಗ್ರಾಮ್ ರೀಲ್‌ಗಳಿಗಾಗಿ ಜೀವವನ್ನೇ ಪಣಕಿಟ್ಟು ಸಾಕಷ್ಟು ಸ್ಟಂಟ್​ ಮಾಡುವುದನ್ನು ನೋಡಿರುತ್ತೀರಿ. ಇದೀಗ ಇದೇ ರೀತಿಯ ಘಟನೆ ರಾಜಸ್ಥಾನದ ಝಾಲಾವರ್‌ನ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದೆ. ಗುರ್ಜರ್ ಕಾ ಧಾಬಾ ಪ್ರದೇಶದಲ್ಲಿ ಚಾಲಕನೊಬ್ಬ ಅತಿವೇಗವಾಗಿ ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ಸವಾರಿ ಹೊರಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವು ಲೈಕ್‌ಗಳು ಮತ್ತು ಶೇರ್‌ಗಳಿಗಾಗಿ ಜನರು ಯಾವುದೇ ಹಂತಕ್ಕೂ ಹೋಗಬಹುದು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಘಟನೆಯ ಕುರಿತು ಝಾಲಾವರ್ ಪೋಲೀಸ್ ಗಮನಹರಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಕಪ್ಪು ಬಣ್ಣದ ಮಾರುತಿ ಆಲ್ಟೊ ಕಾರಿನ ಬಾನೆಟ್ ಮೇಲೆ ಬಾಲಕ ಕೂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮತ್ತೊಂದು ಕಾರಿನಲ್ಲಿದ್ದ ಪ್ರಯಾಣಿಕರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

ಕಾರಿನ ನಂಬರ್ ಕೂಡ ವಿಡಿಯೋದಲ್ಲಿ ಕಾಣಿಸುತ್ತಿದೆ. ಆಲ್ಟೊ ಕಾರು ಪರವಾನಗಿ ಸಂಖ್ಯೆ ‘RJ17CB3024’ ಹೊಂದಿದ್ದು, ಆರೋಪಿಯನ್ನು ಹಿಡಿಯಲು ಪೊಲೀಸರು ವೈರಲ್ ವೀಡಿಯೊವನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ವರದಿಗಳಿಲ್ಲ. ವೀಡಿಯೊದ ನಿಖರವಾದ ಸಮಯ ಮತ್ತು ದಿನಾಂಕವನ್ನು ಇನ್ನೂ ಖಚಿತಪಡಿಸಲಾಗಿಲ್ಲ. ಆದಾಗ್ಯೂ, ವೀಡಿಯೊವನ್ನು ಲೈವ್ ಹಿಂದೂಸ್ತಾನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಗುರುವಾರ ಹಂಚಿಕೊಂಡಿದೆ.

ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಚಾಲಕನೊಬ್ಬ ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಇರಿಸಿ, ಅಜಾಗರೂಕತೆಯಿಂದ ಅವರ ಜೀವಕ್ಕೆ ಅಪಾಯವನ್ನುಂಟುಮಾಡುವುದನ್ನು ದೃಶ್ಯಾವಳಿಗಳು ಸ್ಪಷ್ಟವಾಗಿ ತೋರಿಸುತ್ತವೆ” ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಗೆಳತಿಗೆ 4BHK ಫ್ಲ್ಯಾಟ್‌, ಐಷಾರಾಮಿ ಕಾರ್‌ ಗಿಫ್ಟ್‌ ಕೊಟ್ಟ ತಿಂಗಳಿಗೆ 13 ಸಾವಿರ ಸಂಬಳ ಪಡೆಯುವ ಯುವಕ

ಇಂತಹ ವರ್ತನೆ ಇದೇ ಮೊದಲಲ್ಲ. ಸಾಮಾಜಿಕ ಮಾಧ್ಯಮಕ್ಕಾಗಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುವ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್‌ಗಳನ್ನು ಪ್ರದರ್ಶಿಸುವ ಅಪಾಯಗಳು ಮತ್ತು ಅಸುರಕ್ಷಿತ ನಡವಳಿಕೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ಪೋಷಕರು, ಶಿಕ್ಷಣತಜ್ಞರು ಮತ್ತು ಸಮುದಾಯದ ಮುಖಂಡರಿಗೆ ಕರೆ ನೀಡಿದ್ದಾರೆ. ETV ಭಾರತ್‌ನ ವರದಿಗಳ ಪ್ರಕಾರ, “ಸಾಮಾಜಿಕ ಮಾಧ್ಯಮದ ಜನಪ್ರಿಯತೆಗಿಂತ ಸುರಕ್ಷತೆಗೆ ಆದ್ಯತೆ ನೀಡುವಂತೆ ನಾವು ಪ್ರತಿಯೊಬ್ಬರನ್ನು, ವಿಶೇಷವಾಗಿ ಯುವಕರನ್ನು ಒತ್ತಾಯಿಸುತ್ತೇವೆ. ಇಂತಹ ಕ್ರಮಗಳು ಕಾನೂನುಬಾಹಿರವಲ್ಲ ಆದರೆ ದುರಂತ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ