ರೆಸ್ಟೋರೆಂಟ್‌ನಲ್ಲಿ ಒಂದು ದಿನದ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ವ್ಯಕ್ತಿ; ವರದಿ ಹಂಚಿಕೊಂಡ ಝೊಮ್ಯಾಟೊ

ಝೊಮ್ಯಾಟೊ 2024 ರ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು, ಈ ವರ್ಷ ಭಾರತೀಯರು ಹೆಚ್ಚು ಯಾವ ಫುಡ್‌ ಅನ್ನು ಆರ್ಡರ್‌ ಮಾಡಿದ್ದಾರೆ ಎಂಬೆ ಕುತೂಹಲ ಮಾಹಿತಿಯನ್ನು ಹಂಚಿಕೊಂಡಿದೆ. ಈ ವರ್ಷ ಪ್ರತಿ ಸೆಕೆಂಡಿಗೆ 3 ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್‌ಗಳು ಬಂದಿದ್ದು, ಒಟ್ಟು 9 ಕೋಟಿಗೂ ಹೆಚ್ಚು ಬಿರಿಯಾನಿಯನ್ನು ಗ್ರಾಹಕರು ನಮ್ಮಲ್ಲಿ ಆರ್ಡರ್‌ ಮಾಡಿದ್ದಾರೆ ಜೊತೆಗೆ ಡೈನಿಂಗ್‌ ಔಟ್‌ ವಿಭಾಗದಲ್ಲಿ ರೆಸ್ಟೋರೆಂಟ್‌ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಝೊಮ್ಯಾಟೊ ತಿಳಿಸಿದೆ.

ರೆಸ್ಟೋರೆಂಟ್‌ನಲ್ಲಿ ಒಂದು ದಿನದ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ವ್ಯಕ್ತಿ; ವರದಿ ಹಂಚಿಕೊಂಡ ಝೊಮ್ಯಾಟೊ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 27, 2024 | 3:51 PM

ಝೊಮ್ಯಾಟೊ ಪ್ರತಿ ವರ್ಷವೂ ಎಷ್ಟು ಆರ್ಡರ್‌ಗಳು ಬಂದಿವೆ, ಯಾವ ಫುಡ್‌ ಹೆಚ್ಚು ಸೇಲ್‌ ಆಗಿವೆ ಎಂಬೆಲ್ಲಾ ಸಮಗ್ರ ಮಾಹಿತಿ ಪಟ್ಟಿಯನ್ನು ಹಂಚಿಕೊಳ್ಳುತ್ತದೆ. ಇದೀಗ ಝೊಮ್ಯಾಟೊ ತನ್ನ 2024 ರ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು, ಭಾರತೀಯಯರು ಹೆಚ್ಚು ಯಾವ ಫುಡ್‌ ಅನ್ನು ಆರ್ಡರ್‌ ಮಾಡಿದ್ದಾರೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದೆ. ಈ ವರ್ಷ ಪ್ರತಿ ಸೆಕೆಂಡಿಗೆ 3 ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್‌ಗಳು ಬಂದಿದ್ದು, ಒಟ್ಟು 9 ಕೋಟಿಗೂ ಹೆಚ್ಚು ಬಿರಿಯಾನಿಯನ್ನು ಗ್ರಾಹಕರು ನಮ್ಮಲ್ಲಿ ಆರ್ಡರ್‌ ಮಾಡಿದ್ದಾರೆ ಜೊತೆಗೆ ಡೈನಿಂಗ್‌ ಔಟ್‌ ವಿಭಾಗದಲ್ಲಿ ರೆಸ್ಟೋರೆಂಟ್‌ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಝೊಮ್ಯಾಟೊ ಹೇಳಿದೆ.

ಬಿರಿಯಾರಿಯದ್ದೇ ಮೇಲುಗೈ:

ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚು ಬಿರಿಯಾನಿ ಆರ್ಡರ್‌ಗಳೇ ಬಂದಿದ್ದು, ಸತತ ಒಂಬತ್ತನೇ ಬಾರಿಯೂ ಬಿರಿಯಾನಿ ಆರ್ಡರ್‌ಗಳನ್ನೇ ಹೆಚ್ಚು ವಿತರಿಸಲಾಗಿದೆ ಎಂದು ಝೊಮ್ಯಾಟೊ ಹೇಳಿದೆ. ಪ್ರತಿ ಸೆಕೆಂಡಿಗೆ 3 ಕ್ಕಿಂತ ಹೆಚ್ಚು ಬಿರಿಯಾನಿ ಆರ್ಡರ್‌ಗಳು ಬಂದಿದ್ದು, ಈ ವರ್ಷ ಒಟ್ಟು 9,13,99,110 (9 ಕೋಟಿಗೂ ಹೆಚ್ಚು) ಪ್ಲೇಟ್‌ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಲಾಗಿದೆ. ಇನ್ನೂ ಎರಡನೇ ಸ್ಥಾನದಲ್ಲಿ ಪಿಜ್ಜಾ ಇದ್ದು, ಝೊಮ್ಯಾಟೊ ದೇಶಾದ್ಯಂತ 5,84,46,908 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದೆ. ಜೊತೆಗೆ 2024 ರಲ್ಲಿ 77,76755 ಕಪ್‌ ಚಹಾ ಮತ್ತು 74,32,856 ಕಪ್‌ ಕಾಫಿಯನ್ನು ನಮ್ಮಲ್ಲಿ ಗ್ರಾಹಕರು ಆರ್ಡರ್‌ ಮಾಡಿದ್ದಾರೆ ಎಂದು ಝೊಮ್ಯಾಟೊ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ರೈಲಿನ ಇಂಜಿನ್ ಅಡಿಯಲ್ಲಿ ಕುಳಿತು 290 ಕಿ.ಮೀ ಪ್ರಯಾಣಿಸಿದ ವ್ಯಕ್ತಿ

ಒಂದು ಹೊತ್ತಿನ ಊಟಕ್ಕೆ 5 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ವ್ಯಕ್ತಿ:

ಡೈನಿಂಗ್‌ ಔಟ್‌ ವಿಭಾಗದಲ್ಲಿ ಈ ವರ್ಷ ಝೊಮ್ಯಾಟೊ ಮೂಲಕ ರೆಸ್ಟೋರೆಂಟ್‌ಗಳಲ್ಲಿ ಒಂದು ಕೋಟಿಗೂ ಹೆಚ್ಚು ಟೇಬಲ್‌ಗಳನ್ನು ಮುಂಗಡ ಬುಕ್‌ ಮಾಡಲಾಗಿತ್ತು ಎಂದು ಝೊಮ್ಯಾಟೊ ವರದಿ ತಿಳಿಸಿದೆ. ಇದರಲ್ಲಿ, 84,866 ಜನರು ಫಾದರ್ಸ್‌ ಡೇ ದಿನದಂದು ತಮ್ಮ ತಂದೆಯನ್ನು ಲಂಚ್‌ ಅಥವಾ ಡಿನ್ನರ್‌ಗೆ ಕರೆದುಕೊಂಡು ಹೋಗಲು ಮುಂಗಡ ಟೇಬಲ್‌ ಬುಕ್‌ ಮಾಡಿದ್ದಾರೆ . ಇನ್ನೂ ರೆಸ್ಟೋರೆಂಟ್‌ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ಆಹಾರ ಪ್ರೇಮಿಯೊಬ್ಬರು ಒಂದೇ ಬಾರಿಗೆ 5 ಲಕ್ಷ ರೂ ಬಿಲ್‌ ಪಾವತಿಸಿದ್ದಾರೆ. ಝೊಮ್ಯಾಟೊ ಪ್ರಕಾರ ಆ ವ್ಯಕ್ತಿ ಒಂದು ಹೊತ್ತಿನ ಊಟಕ್ಕೆ ನಿಖರವಾಗಿ 5.13 ರೂ. ಖರ್ಚು ಮಾಡಿದ್ದಾರೆ. ಒಂದೇ ಬಾರಿಗೆ ಇಷ್ಟು ದುಬಾರಿ ಬಿಲ್‌ ಪಾವತಿಸಿದ್ದು ನಮ್ಮಲ್ಲಿ ಇದೇ ಮೊದಲು ಎಂದು ಝೊಮ್ಯಾಟೊ ಹೇಳಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ