Video: ಕೆಸರು ಗದ್ದೆಯಲ್ಲಿ ಈಜಾಡುತ್ತಿರುವ ಪುಟಾಣಿಗಳು; ವೈರಲ್‌ ಆಯ್ತು ದೃಶ್ಯ

ನೀವೆಲ್ಲರೂ ಸಮುದ್ರ, ನದಿ ಹಾಗೂ ಹೊಳೆಯಲ್ಲಿ ಈಜಾಡುವುದನ್ನು ನೋಡಿರುತ್ತೀರಿ. ಆದರೆ ಕೆಸರುಗದ್ದೆಯಲ್ಲಿ ಈಜಾಡುವುದನ್ನು ನೋಡಿರಲು ಸಾಧ್ಯವಿಲ್ಲ. ಆದರೆ ಈ ಪುಟಾಣಿಗಳು ಕೆಸರು ಗದ್ದೆಯಲ್ಲಿ ಈಜಾಡಿ ಖುಷಿಪಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಪುಟಾಣಿಗಳ ಮುದ್ದಾದ ವಿಡಿಯೋ ನೆಟ್ಟಿಗರ ಹೃದಯ ಗೆದ್ದುಕೊಂಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕೆಸರು ಗದ್ದೆಯಲ್ಲಿ ಈಜಾಡುತ್ತಿರುವ ಪುಟಾಣಿಗಳು; ವೈರಲ್‌ ಆಯ್ತು ದೃಶ್ಯ
ವೈರಲ್ ವಿಡಿಯೋ
Image Credit source: Instagram

Updated on: Nov 27, 2025 | 1:18 PM

ಗ್ರಾಮೀಣ ಭಾಗದ ಬದುಕು ಸುಂದರ. ವಾಹನಗಳ ಓಡಾಟ, ಟ್ರಾಫಿಕ್‌ನಿಂದ ಗಿಜಿಗುಟ್ಟುವ ರಸ್ತೆಗಳಿಲ್ಲ. ಹಚ್ಚ ಹಸಿರಿನ ವಾತಾವರಣ, ಕಟಾವು ಮುಗಿಯುತ್ತಿದ್ದಂತೆ ಗದ್ದೆ ಉಳುವೆ, ಮತ್ತೆ ಕೃಷಿ ಕಾಯಕ ಶುರು. ಹಳ್ಳಿಯ ಮಕ್ಕಳು  (children) ಕೂಡ ಗ್ರಾಮೀಣ ಭಾಗದ ಕ್ರೀಡೆ ಆಡುತ್ತ ಖುಷಿ ಪಡುತ್ತಾರೆ. ಇದೀಗ ಕೆಸರು ತುಂಬಿದ ಗದ್ದೆಯಲ್ಲಿಈಜಾಡುತ್ತಾ ಆಟ ಆಡುತ್ತಿದ್ದಾರೆ. ಗ್ರಾಮೀಣ ಬದುಕಿನ ಆಟ ಪಾಠದ ಚಿತ್ರಣ ನೆಟ್ಟಿಗರ ಕಣ್ಮನ ಸೆಳೆಯುತ್ತಿದೆ.

Jp badakere ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಗಳು ಕೆಸರು ಗದ್ದೆಯಲ್ಲಿ ಈಜಾಡುತ್ತಾ ಖುಷಿಪಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಕೆಸರುಗದ್ದೆ ಈಜುವ ಸ್ಪರ್ಧೆಯಲ್ಲಿ ಸಂಕೇತ್ ಮೇಲ್ಮನೆ ಪ್ರಥಮ, ದ್ವಿತೀಯ ನವೀನ. (ಸಮುದ್ರ ಮತ್ತು ಹೊಳೆಯಲ್ಲಿ ಈಜುವ ಸ್ಪರ್ಧೆ ನಾವೆಲ್ಲ ನೋಡಿದ್ದೀವಿ.. ಕೆಸರಲ್ಲಿ ಈಜುವ ಸ್ಪರ್ಧೆ ಇದೇ ಮೊದಲು) ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಶಾಲೆಗೆ ಬರಲು ಒಲ್ಲೆ ಎಂದ ಹುಡುಗನನ್ನು ಎತ್ಕೊಂಡು ಹೋದ ಸಹಪಾಠಿಗಳು

ಈ ವಿಡಿಯೋ ಇದುವರೆಗೆ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದು ತುಂಬಾ ವಿಭಿನ್ನವಾಗಿದೆ ಎಂದಿದ್ದಾರೆ. ಮತ್ತೊಬ್ಬರು ಈ ದೃಶ್ಯ ನೋಡಿ ನಗುವ ಇಮೋಜಿ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:11 pm, Thu, 27 November 25