Video: ಬೆಡ್ ರೂಮಿನ ಹಾಸಿಗೆ ಮೇಲೆ ರಾಶಿ ರಾಶಿ ಹಾವುಗಳು, ಈ ಯುವತಿ ಏನ್ ಮಾಡ್ತಿದ್ದಾಳೆ ನೋಡಿ

ಚೀನಾದ ಜನರ ಆಹಾರ ಕ್ರಮ ಹಾಗೂ ಜೀವನ ಶೈಲಿಯೂ ವಿಭಿನ್ನ, ಈ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿನ ಜನರು ಜಿರಳೆ, ಹಾವು, ಕಪ್ಪೆಯನ್ನು ಫ್ರೈ ಮಾಡಿ ಬಾಯಿ ಚಪ್ಪರಿಸಿಕೊಂಡು ಸವಿಯುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲಿನ ಜನರು ಬೆಡ್ ರೂಮ್‌ನಲ್ಲೇ ರಾಶಿ ರಾಶಿ ಹಾವುಗಳನ್ನು ಸಾಕ್ತಾರಂತೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಈ ಯುವತಿಯೂ ಹಾಸಿಗೆಯ ಕೆಳಗೆ ಹಾವುಗಳನ್ನು ಇರಿಸಿದ್ದು, ಈಕೆಯ ಹಾವು ಸಾಕುವ ಕ್ರೇಜ್‌ನ ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

Video: ಬೆಡ್ ರೂಮಿನ ಹಾಸಿಗೆ ಮೇಲೆ ರಾಶಿ ರಾಶಿ ಹಾವುಗಳು, ಈ ಯುವತಿ ಏನ್ ಮಾಡ್ತಿದ್ದಾಳೆ ನೋಡಿ
ವೈರಲ್ ವಿಡಿಯೋ
Image Credit source: Instagram

Updated on: Aug 07, 2025 | 3:04 PM

ಕೆಲವು ಜನರು ಬದುಕುವ ರೀತಿ, ಸೇವಿಸುವ ಆಹಾರ ಹಾಗೂ ಹವ್ಯಾಸಗಳು ವಿಚಿತ್ರವಾಗಿರುತ್ತದೆ. ಇದನ್ನೆಲ್ಲಾ ನೋಡುವಾಗ ಇಂತಹ ಜನರು ಇರ್ತಾರಾ ಎಂದೆನಿಸದೇ ಇರದು. ಇದೀಗ ಚೀನಾದ (China) ಯುವತಿಯೊಬ್ಬಳು ತನ್ನ ಮಲಗುವ ಕೋಣೆಯಲ್ಲಿ ರಾಶಿ ರಾಶಿ ಹಾವುಗಳನ್ನು (snakes) ಸಾಕಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಇದೇನು ಮೃಗಾಲಯನಾ ಅಥವಾ ಬೆಡ್ ರೂಮಾ ಎಂದು ಕೇಳಿದ್ದಾರೆ.

ಬೆಡ್ ರೂಮಿನ ಹಾಸಿಗೆಯ ಮೇಲೆ ಹಾವುಗಳದ್ದೇ ರಾಶಿ

ಇದನ್ನೂ ಓದಿ
ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ
ಹೂವು ಹಿಡಿದಷ್ಟು ಸಲೀಸಾಗಿ ನಾಗರಹಾವು ಹಿಡಿದ ವ್ಯಕ್ತಿ
ಸಾವಿನಿಂದ ತಪ್ಪಿಸಿಕೊಳ್ಳಲು ಹಾವಿನ ತಲೆಯ ಮೇಲೆ ಕುಳಿತ ಇಲಿ
18 ಅಡಿ ಉದ್ದದ ಕಿಂಗ್‌ ಕೋಬ್ರಾವನ್ನು ರಕ್ಷಣೆ ಮಾಡಿದ ಮಹಿಳಾ ಅರಣ್ಯಾಧಿಕಾರಿ

sports.jx.china ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಮಂಚದ ಮೇಲಿರುವ ಹೊದಿಕೆಯನ್ನು ಮೇಲೆಕ್ಕೆತ್ತಿರುವುದನ್ನು ನೋಡಬಹುದು. ಈ ಹಾಸಿಗೆಯ ಮೇಲೆ ಹಾವುಗಳದ್ದೇ ರಾಶಿ. ತೆವಳುತ್ತ ನೆಲದ ಮೇಲೆ ಬಿದ್ದಿದೆ. ಈ ಚೀನಾದ ಯುವತಿಯೂ ಮಲಗುವ ಕೋಣೆಯನ್ನು ಹಾವು ಸಾಕಾಣಿಕೆ ಕೇಂದ್ರವನ್ನಾಗಿಸಿಕೊಂಡಿದ್ದಾಳೆ. ಹೀಗಾಗಿ ದಿನಾಲೂ ಹೊದಿಕೆಯನ್ನು ಮೇಲಕ್ಕೆತ್ತಿ ಹಾಸಿಗೆಯಲ್ಲಿನ ಹಾವುಗಳನ್ನು ನೆಲಕ್ಕೆ ಚೆಲ್ಲಿ ಹಾಸಿಗೆಯ ಮೇಲಿನ ಭಾಗವನ್ನು ಶುಚಿಗೊಳಿಸುವುದು ಈ ಯುವತಿಯ ನಿತ್ಯದ ಕಾಯಕವಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ


ಇದನ್ನೂ ಓದಿ: Video: ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ

ಈ ವಿಡಿಯೋ 8.2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಈ ಕಣ್ಣಲ್ಲಿ ಏನೇನೂ ನೋಡ್ಬೇಕೋ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಸಂಬಂಧಿಕರಿಗೆ ಇದು ಪರ್ಫೆಕ್ಟ್ ಬೆಡ್ ಆಗಿದೆ ಎಂದು ಹೇಳಿದ್ದಾರೆ. ನನ್ನ ಸ್ನೇಹಿತರಿಗೆ ಈಕೆಗೆ ಪರಿಚಯ ಮಾಡಿಕೊಡಬೇಕು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಅಚ್ಚರಿಕಾರಿ ಸಿಂಬಲ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Thu, 7 August 25