ನಿನ್ನೆ ರಾತ್ರಿ ಜಗತ್ತಿನಾದ್ಯಂತ ಹೊಸ ವರ್ಷದ ಪಾರ್ಟಿ ಭರ್ಜರಿಯಾಗಿತ್ತು. ಹೆಚ್ಚಿನವರು ಹೊರಗಡೆ ಹೋಗಿ ಫ್ರೆಂಡ್ಸ್ ಫ್ಯಾಮಿಲಿ ಜೊತೆ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಪಬ್, ಬಾರ್‌ಗಳಲ್ಲಿಯೂ ಎಣ್ಣೆ ಪಾರ್ಟಿ ಬಲು ಜೋರಾಗಿತ್ತು. ಇನ್ನೂ ಹೆಚ್ಚಿನ ಕಡೆಗಳಲ್ಲಿ ಪ್ರತಿವರ್ಷ ಕೂಡಾ ರಾತ್ರಿ ಇನ್ನೇನೂ ಹೊಸ ವರ್ಷಕ್ಕೆ ಕ್ಷಣ ಗಣನೆ ಶುರುವಾಯಿತು ಎನ್ನುವಷ್ಟರಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಗುತ್ತದೆ. ಹೀಗೆ ನಿನ್ನೆ ಮಧ್ಯರಾತ್ರಿ ಕೂಡಾ ಎಣ್ಣೆ ಪಾರ್ಟಿ, ಡ್ಯಾನ್ಸ್ ಪಾರ್ಟಿ ಮಾಡುವ ಮೂಲಕ, ಪಟಾಕಿ ಹೊಡೆಯುವ ಮೂಲಕ ಜನ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ. ಆದ್ರೆ ಚೀನಾದಲ್ಲಿ ಡ್ರೋನ್ ಶೋ ಮೂಲಕ ಈ ವರ್ಷ ಬಹಳ ವಿಶೇಷ ರೀತಿಯಲ್ಲಿ ಹೊಸ ವರ್ಷವನ್ನು ಆಚರಿಸಲಾಗಿದೆ. ಈ ಪರಿಸರ ಸ್ನೇಹಿ ನ್ಯೂ ಇಯರ್ ಸೆಲೆಬ್ರೇಷನ್ ಇದೀಗ ವೈರಲ್ ಆಗಿದೆ.
ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳು ಲೈಟಿಂಗ್ಸ್ ಶೋ, ಪಟಾಕಿ ಪ್ರದರ್ಶನಗಳೊಂದಿಗೆ ಹೊಸ ವರ್ಷವನ್ನು ಬರ ಮಾಡಿಕೊಂಡರೆ, ಚೀನಾ ಮಾತ್ರ ಡ್ರೋನ್ ಶೋ ಮಾಡಲು ಮೂಲಕ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದೆ. ಹೌದು ಹೊಸ ವರ್ಷದ ಮುನ್ನಾದಿನ ಅಂದ್ರೆ ನಿನ್ನೆ ರಾತ್ರಿ ಆಕಾಶದೆತ್ತರದಲ್ಲಿ ಡ್ರೋನ್ ಶೋ ಏರ್ಪಡಿಸಿತ್ತು. 10 ಸಾವಿರಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿಕೊಂಡು ಈ ಒಂದು ಶೋ ಏರ್ಪಡಿಸಲಾಗಿತ್ತು.
ಈ ಕುರಿತ ವಿಡಿಯೋವನ್ನು APompliano ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಚೀನಾ ಹೊಸ ವರ್ಷವನ್ನು ಡ್ರೋನ್ ಪ್ರದರ್ಶನಗಳೊಂದಿಗೆ ಆಚರಿಸಿತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರು ವಿಡಿಯೋದಲ್ಲಿ ಅದ್ಭುತವಾದ ಡ್ರೋನ್ ಶೋ ಏರ್ಪಡಿಸಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಫೈನ್ ಬೀಳುತ್ತೆ ಎಂದು ನಂಬರ್ ಪ್ಲೇಟ್ ಮುಚ್ಚಿ ಬೈಕ್ ಓಡಿಸಿದ ಯುವಕರು; ಟ್ರಾಫಿಕ್ ಪೊಲೀಸ್ ಮಾಡಿದ್ದೇನು ನೋಡಿ…
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 2.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್ ಇದಂತೂ ನಿಜಕ್ಕೂ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಟಾಕಿ ಸಿಡಿಸುವ ಬದಲು ಹೀಗೆ ಟ್ರೋನ್ ಪ್ರದರ್ಶನ ಮಾಡುವುದೇ ಉತ್ತಮʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದಂತೂ ತುಂಬಾ ಕೂಲ್ ಆಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ