ಫೈನ್ ಬೀಳುತ್ತೆ ಎಂದು ನಂಬರ್ ಪ್ಲೇಟ್ ಮುಚ್ಚಿ ಬೈಕ್ ಓಡಿಸಿದ ಯುವಕರು; ಟ್ರಾಫಿಕ್ ಪೊಲೀಸ್ ಮಾಡಿದ್ದೇನು ನೋಡಿ…
ಸ್ಯಾಮ್‌ಸಂಗ್ ಕಂಪೆನಿಯ S24 ultra ಫೋನ್ ತನ್ನ ಕ್ಯಾಮೆರಾ ಕ್ವಾಲಿಟಿಗೆ ಸಖತ್ ಫೇಮಸ್. ಇದರ ಕ್ಯಾಮೆರಾಕ್ಕೆ ಸಂಬಂಧಿಸಿದ ಕೆಲವೊಂದು ಆಶ್ಚರ್ಯಕರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಆಗಿದೆ. ಯುವಕರಿಬ್ಬರು ಟ್ರಾಫಿಕ್ ಪೊಲೀಸರನ್ನು ಕಂಡು ಪಕ್ಕಾ ಫೈನ್ ಬೀಳುತ್ತೆ ಎಂದು ನಂಬರ್ ಪ್ಲೇಟ್‌ಗೆ ಕೈ ಹಿಡಿದುಕೊಂಡು ಬೈಕ್ ಓಡಿಸಿದ್ದು, ಸ್ವಲ್ಪ ದೂರ ಸಾಗಿದ ಮೇಲೆ ಪೊಲೀಸಪ್ಪ ತನ್ನ S24 ultra ಮೊಬೈಲ್‌ನಲ್ಲಿ ನಂಬರ್ ಪ್ಲೇಟ್ ಫೋಟೋ ತೆಗೆದು ಡೈರೆಕ್ಟ್ ಮನೆಗೆ ನೋಟೀಸ್ ಕಳುಹಿಸಿದ್ದಾರೆ.
ಸೀಟ್ ಬೆಲ್ಟ್ ಧರಿಸದೆ ಇರುವುದು, ಓವರ್ ಸ್ಪೀಡ್, ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ವಾಹನ ಚಾಲನೆ ಹೀಗೆ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿ ವಾಹನ ಚಲಾಯಿಸುವವರಿಗೆ ಸಂಚಾರಿ ಪೊಲೀಸರು ಫೈನ್ ಹಾಕ್ತಾರೆ. ಇನ್ನೂ ನಂಬರ್ ಪ್ಲೇಟ್ ಆಧಾರದ ಮೇಲೆ ಡೈರೆಕ್ಟ್ ಮನೆ ವಿಳಾಸಕ್ಕೆ ಕೂಡಾ ನೋಟಿಸ್ ಕಳುಹಿಸುತ್ತಾರೆ. ಇಂತಹ ಫೈನ್‌ಗಳಿಂದ ತಪ್ಪಿಸಿಕೊಳ್ಳಲು ಕೆಲವರು ಏನೇನೋ ಕಸರತ್ತು ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡಾಡುತ್ತಿರುತ್ತಾರೆ. ಅದೇ ರೀತಿ ಇಲ್ಲಿಬ್ಬರು ಯುವಕರು ಟ್ರಾಫಿಕ್ ಪೊಲೀಸರನ್ನು ಕಂಡು ಪಕ್ಕಾ ಫೈನ್ ಬೀಳುತ್ತೆ ಎಂದು ನಂಬರ್ ಪ್ಲೇಟ್‌ಗೆ ಕೈ ಹಿಡಿದುಕೊಂಡು ಬೈಕ್ ಓಡಿಸಿದ್ದಾರೆ. ಸ್ವಲ್ಪ ದೂರ ಸಾಗಿದ ಮೇಲೆ ನಂಬರ್ ಪ್ಲೇಟ್‌ನಿಂದ ಕೈ ತೆಗೆದಿದ್ದು, ಪೊಲೀಸಪ್ಪ ತನ್ನ S24 ultra ಮೊಬೈಲ್‌ನಲ್ಲಿ ನಂಬರ್ ಪ್ಲೇಟ್ ಫೋಟೋ ತೆಗೆದು ಡೈರೆಕ್ಟ್ ಮನೆಗೆ ನೋಟೀಸ್ ಕಳುಹಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಯುವಕರಿಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿ ನಿಂತಿದ್ದ ಪೊಲೀಸರನ್ನು ಕಂಡು ಫೈನ್ ಬಿದ್ರೆ ಕಷ್ಟ, ನಂಬರ್ ಪ್ಲೇಟ್ ಫೋಟೋ ತೆಗೆದು ಮನೆಗೆ ನೋಟಿಸ್ ಕಳಿಸಿದ್ರೆ ಕಷ್ಟ ಎಂದು ನಂಬರ್ ಪ್ಲೇಟ್‌ಗೆ ಕೈ ಹಿಡಿದುಕೊಂಡು ಹೋಗಿದ್ದಾರೆ. ಆದ್ರೆ ಪೊಲೀಸರು ಅವರನ್ನು ಅಟ್ಟಾಡಿಸಿಕೊಂಡು ಹೋಗಿಲ್ಲ,ಬದಲಿಗೆ ಆ ಯವಕರು ಸ್ವಲ್ಪ ದೂರಕ್ಕೆ ಹೋದ ಮೇಲೆ ಇದೆಲ್ಲಾ ಗಿಮಿಕ್ ನಮ್ಮಲ್ಲಿ ನಡೆಯಲ್ಲ ಎಂದು ಪೊಲೀಸರೊಬ್ಬರು ಥಟ್ಟನೆ ತಮ್ಮ S24 ultra ಮೊಬೈಲ್‌ನಲ್ಲಿ ಝೂಮ್ ಮಾಡಿ ನಂಬರ್ ಪ್ಲೇಟ್ ಫೋಟೋ ತೆಗೆದು ಡೈರೆಕ್ಟ್ ಮನೆ ವಿಳಾಸಕ್ಕೆ ನೋಟೀಸ್ ಕಳುಹಿಸಿದ್ದಾರೆ.
JamesStanly ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪೊಲೀಸರೊಬ್ಬರು ದೂರದಿಂದಲ್ಲೇ ತಮ್ಮ S24 ultra ಮೊಬೈಲ್‌ನಲ್ಲಿ ಬೈಕ್ ಒಂದರ ನಂಬರ್ ಪ್ಲೇಟ್ ಫೋಟೋವನ್ನು ಕ್ಲಿಕ್ಕಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬರೋಬ್ಬರಿ 12 ದಿನಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಜನ; ವಿಶ್ವದ ಅತಿ ಉದ್ದನೆಯ ಟ್ರಾಫಿಕ್ ಜಾಮ್ ಕಥೆಯಿದು
ಡಿಸೆಂಬರ್ 30 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 2.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದರ ಬದಲು ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಬಹುದಲ್ವಾʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮತ್ತೇ S24 ultra ಮೊಬೈಲ್ ಅಂದ್ರೆ ಸುಮ್ನೇನಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ