AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಅಮಲಿನಲ್ಲಿ ವಿದ್ಯುತ್ ತಂತಿಗಳ ಮೇಲೆಯೇ ಮಲಗಿದ ಭೂಪ: ವಿಲಕ್ಷಣ ವಿಡಿಯೋ ವೈರಲ್

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮದ್ಯಪಾನದ ಅಮಲಿನಲ್ಲಿ ತೂರಾಡುವವರನ್ನು, ಓಲಾಡುವವರನ್ನು ನೋಡಿದ್ದೇವೆ. ಆದರೆ, ಆಂಧ್ರಪ್ರದೇಶದ ಪಾರ್ವತಿಪುರಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಈಗಾಗಲೇ ಮದ್ಯಪಾನದ ಅಮಲಿನಲ್ಲಿದ್ದು, ಎಣ್ಣೆ ಖರೀದಿಗೆ ಅಮ್ಮ ಹಣ ಕೊಡಲಿಲ್ಲ ಎಂದು ಕರೆಂಟ್ ಕಂಬ ಹೇರಿ ಲೈನ್​ಗಳ ಮೇಲೆ ಮಲಗಿದ್ದಾನೆ! ಆಮೇಲೆ ಏನಾಯ್ತು? ತಿಳಿಯಲು ಮುಂದೆ ಓದಿ. ಜತೆಗೆ ವಿಡಿಯೋವನ್ನೂ ಇಲ್ಲಿ ನೋಡಿ.

Ganapathi Sharma
|

Updated on: Jan 01, 2025 | 12:07 PM

Share

ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಹಲವು ಕಡೆಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರೆ ಇನ್ನು ಕೆಲವೆಡೆ ಎಣ್ಣೆ ಪಾರ್ಟಿಗಳೂ ಭರ್ಜರಿಯಾಗಿ ನೆರವೇರಿವೆ. ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮದ್ಯಪಾನದ ಅಮಲಿನಲ್ಲಿ ಯುವಕ, ಯುವತಿಯರು ತೂರಾಡಿದ್ದಾರೆ. ಆದರೆ, ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಪಾಲಕೊಂಡ ಮಂಡಲದ ಎಂ.ಸಿಂಗುಪುರಂನಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ತಂತಿ ಮೇಲೆ ಅಡ್ಡಲಾಗಿ ಮಲಗಿ ಗಮನ ಸೆಳೆದಿದ್ದಾನೆ!

ಮಾದಕ ವ್ಯಸನಿ ಯಜ್ಜಲ ವೆಂಕಣ್ಣ ಎಂಬಾತ ಮದ್ಯ ಖರೀದಿಗೆ ಹಣ ನೀಡುವಂತೆ ತಾಯಿಗೆ ಒತ್ತಡ ಹೇರಿ, ಕರೆಂಟ್ ಕಂಬ ಹತ್ತಿ ವಿದ್ಯುತ್ ತಂತಿಗಳ ಮೇಲೆ ಮಲಗಿ ಅವಾಂತರ ಸೃಷ್ಟಿಸಿದ್ದಾನೆ.

ನಡೆದಿದ್ದೇನು?

ತನ್ನ ವಯಸ್ಸಾದ ತಾಯಿಗೆ ಪಿಂಚಣಿ ಬಂದಿದ್ದನ್ನು ಅರಿತ ವೆಂಕಣ್ಣ ಮದ್ಯ ಖರೀದಿಸಲು ಹಣ ನೀಡುವಂತೆ ಕೇಳಿದ್ದಾನೆ. ಆದರೆ, ಅವರು ಹಣ ಕೊಡುವುದಿಲ್ಲ ಎಂದಿದ್ದರು. ಹೀಗಾಗಿ ಅದಾಗಲೇ ಮದ್ಯದ ಅಮಲಿನಲ್ಲಿದ್ದ ವೆಂಕಣ್ಣ, ಕರೆಂಟ್ ಕಂಬ ಹತ್ತಿದ್ದಾನೆ.

ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ವೆಂಕಣ್ಣ ಬಚಾವ್!

ವೆಂಕಣ್ಣ ಕರೆಂಟ್ ಕಂಬ ಏರುತ್ತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು ವಿದ್ಯುತ್ ಡಿಪಿ ಸ್ವಿಚ್ ಆಫ್ ಮಾಡಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಆತನ ಜೀವ ಉಳಿದಿದೆ.

ಇದನ್ನೂ ಓದಿ: ಫೈನ್‌ ಬೀಳುತ್ತೆ ಎಂದು ನಂಬರ್‌ ಪ್ಲೇಟ್‌ ಮುಚ್ಚಿ ಬೈಕ್‌ ಓಡಿಸಿದ ಯುವಕರು; ಟ್ರಾಫಿಕ್‌ ಪೊಲೀಸ್ ಮಾಡಿದ್ದೇನು ನೋಡಿ

ಮಲಗಿದ್ದಷ್ಟೇ ಅಲ್ಲದೆ, ಅರ್ಧ ಗಂಟೆಗೂ ಹೆಚ್ಚು ಕಾಲ ವೆಂಕಣ್ಣ ವಿದ್ಯುತ್ ತಂತಿಗಳ ಮೇಲೆ ಓಡಾಡಿ ಹುಚ್ಚು ಸಾಹಸ ಮೆರೆದಿದ್ದಾನೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೆಳಗಿಳಿಯುವಂತೆ ಮನವಿ ಮಾಡಿದರೂ ಬಹಳ ಹೊತ್ತಾದರೂ ಕೆಳಗೆ ಬರಲಿಲ್ಲ. ಕೊನೆಗೆ ಏನೇನೋ ಹೇಳಿ ಗ್ರಾಮಸ್ಥರು ಕಷ್ಟಪಟ್ಟು ವೆಂಕಣ್ಣನನ್ನು ಕೆಳಗಿಳಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ