AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 12 ದಿನಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಜನ; ವಿಶ್ವದ ಅತಿ ಉದ್ದನೆಯ ಟ್ರಾಫಿಕ್‌ ಜಾಮ್‌ ಕಥೆಯಿದು

ಬೆಂಗಳೂರು, ಮುಂಬೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಪ್ರತಿನಿತ್ಯವೂ ಇದ್ದೇ ಇರುತ್ತದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಪೀಕ್‌ ಟೈಮ್‌ಗಳಲ್ಲಿ ತುಂಬಾನೇ ಟ್ರಾಫಿಕ್‌ ಜಾಮ್‌ ಇದ್ದೇ ಇರುತ್ತೆ. ಈ ಸಂಚಾರ ದಟ್ಟಣೆ ಸಮಸ್ಯೆಯಲ್ಲಿ ಸಿಲುಕಿ ಗಂಟೆಗಟ್ಟಲೆ ಕಾಲ ಜನ ಒದ್ದಾಡುತ್ತಿರುತ್ತಾರೆ. ಆದ್ರೆ ಇಲ್ಲೊಂದು ಕಡೆ ಜನ ಬರೋಬ್ಬರಿ 12 ದಿನಗಳ ಕಾಲ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದರು. ಅಷ್ಟಕ್ಕೂ ಜಗತ್ತಿನ ಈ ಅತಿ ಉದ್ದನೆಯ ಟ್ರಾಫಿಕ್‌ ಜಾಮ್‌ ಆಗಿದ್ದೆಲ್ಲಿ ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬರೋಬ್ಬರಿ 12 ದಿನಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಜನ; ವಿಶ್ವದ ಅತಿ ಉದ್ದನೆಯ ಟ್ರಾಫಿಕ್‌ ಜಾಮ್‌ ಕಥೆಯಿದು
ವೈರಲ್​ ಸುದ್ದಿ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 31, 2024 | 6:15 PM

Share

ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಬೆಳಗ್ಗೆ ಕೆಲಸ ಹೋಗುವ ಮತ್ತು ಸಂಜೆ ಕೆಲಸದಿಂದ ವಾಪಸ್‌ ಆಗುವಂತಹ ಪೀಕ್‌ ಟೈಮ್‌ಗಳಲ್ಲಿ ತುಸು ಹೆಚ್ಚೇ ಸಂಚಾರ ದಟ್ಟಣೆ ಇರುತ್ತದೆ. ಈ ಟ್ರಾಫಿಕ್‌ ಜಾಮ್‌ನಲ್ಲಿ ಗಂಟೆಗಟ್ಟಲೆ ಸಿಲುಕಿ ನಗರ ಪ್ರದೇಶಗಳಲ್ಲಿನ ಜನ ಪ್ರತಿನಿತ್ಯ ಒದ್ದಾಡುತ್ತಿರುತ್ತಾರೆ. ಸಾಮಾನ್ಯವಾಗಿ ಹೆಚ್ಚೆಂದರೆ ಒಂದರಿಂದ ಎರಡು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಆಗುತ್ತವೆ. ಆದ್ರೆ ಇಲ್ಲೊಂದು ಕಡೆ ಬರೋಬ್ಬರಿ 12 ದಿನಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿ, ಜನ ಹೈರಾಣಾಗಿ ಹೋಗಿದ್ದರು. ಅಷ್ಟಕ್ಕೂ ಜಗತ್ತಿನ ಅತಿ ದೊಡ್ಡ ಟ್ರಾಫಿಕ್‌ ಜಾಮ್‌ ಆಗಿದ್ದೆಲ್ಲಿ? ಈ ಟ್ರಾಫಿಕ್‌ ಸಮಸ್ಯೆ ಉದ್ಭವಿಸಲು ಕಾರಣವೇನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವದ ಅತಿ ಉದ್ದನೆಯ ಟ್ರಾಫಿಕ್‌ ಜಾಮ್:

2010 ರ ಆಗಸ್ಟ್‌ 14 ರಂದು ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ವಿಶ್ವದ ಅತಿ ಉದ್ದನೆಯ ಟ್ರಾಪಿಕ್‌ ಜಾಮ್‌ ಉಂಟಾಗಿತ್ತು. 12 ದಿನಗಳ ಕಾಲ ಈ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಜನ ಹೈರಾಣಾಗಿ ಹೋಗಿದ್ದರು. ಬೀಜಿಂಗ್‌ನ ಬೀಜಿಂಗ್‌-ಟಿಬೆಟ್‌ ಎಕ್ಸ್‌ಪ್ರೆಸ್‌ ವೇ (ಚೀನಾ ರಾಷ್ಟ್ರೀಯ ಹೆದ್ದಾರಿ 110) ನಲ್ಲಿ ಈ ಉದ್ದನೆಯ ಸಂಚಾರ ದಟ್ಟಣೆ ಉಂಟಾಗಿದ್ದು, ಸುಮಾರು 100 ಕಿ.ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಂದಿನ ಈ ಟ್ರಾಫಿಕ್‌ ಜಾಮ್‌ ಪ್ರಪಂಚದ ಅತ್ಯಂತ ಉದ್ದನೆಯ ಟ್ರಾಫಿಕ್‌ ಜಾಮ್‌ ಎಂಬ ಹೆಸರು ಪಡೆದಿದೆ.

ಇದನ್ನೂ ಓದಿ: ವಧುನಿನ ಕಡೆಯವರು ರೊಟ್ಟಿ ಬಡಿಸಲು ತಡ ಮಾಡಿದರೆಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ವರ

ಟ್ರಾಫಿಕ್‌ ಜಾಮ್‌ ಉಂಟಾಗಿದ್ದು ಹೇಗೆ?

ಅಂದು ಬೀಜಿಂಗ್-ಟಿಬೆಟ್‌ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಹಂತದಲ್ಲಿತ್ತು. ಈ ರಸ್ತೆ ಕಾಮಗಾರಿಗೆ ಬೇಕಾದ ಕಲ್ಲಿದ್ದಲು ಮತ್ತು ಇತರೆ ಸಾಮಾಗ್ರಿಗಳನ್ನು ಮಂಗೋಲಿಯಾದಿಂದ ಟ್ರಕ್‌ಗಳಲ್ಲಿ ತರಿಸಲಾಗಿತ್ತು. ಈ ದೈತ್ಯ ಟ್ರಕ್‌ಗಳ ಕಾರಣದಿಂದಾಗಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿತ್ತು. ಗಂಟೆಗಳು ಅಲ್ಲ, ಈ ಟ್ರಾಫಿಕ್‌ ಜಾಮ್‌ ಅನ್ನು ತೆರವು ಗೊಳಿಸಲು ಬರೋಬ್ಬರಿ 12 ದಿನಗಳು ಬೇಕಾದವು. ಸಂಚಾರ ದಟ್ಟಣೆ ಸಂಭವಿಸಿದ ಪರಿಣಾಮ ಹಲವು ವಾಹನಗಳು ಜಖಂಗೊಂಡಿದ್ದವು. ಇನ್ನೂ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಜನ ಮನೆಗೆ ಹೋಗಲು ಸಾಧ್ಯವಾಗದೆ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ತಾತ್ಕಲಿಕ ಟೆಂಟ್‌ಗಳನ್ನು ನಿರ್ಮಿಸಿದ್ದರು. ಇನ್ನೂ ಕೆಲವರು ತಮ್ಮ ವಾಹನಗಳಲ್ಲಿ ಕುಳಿತು ದಿನ ಕಳೆದರು. ತಿಂಡಿ, ತಂಪು ಪಾನೀಯ, ಊಟ ಸೇರಿದಂತೆ ಆಹಾರ ಪದಾರ್ಥಗಳನ್ನು ಇಲ್ಲಿ ನಾಲ್ಕು ಪಟ್ಟು ಬೆಲೆಗೆ ಮಾರಾಟ ಮಾಡಲಾಗಿತ್ತು. ಇಲ್ಲಿನ ಸರ್ಕಾರ ಈ ಒಂದು ಟ್ರಾಫಿಕ್‌ ತೆರವುಗೊಳಿಸಲು ಹಗಲಿರುಳು ಶ್ರಮಿಸಿತ್ತು. 2010 ರ ಆಗಸ್ಟ್‌ 14 ರಂದು ಉಂಟಾದ ಈ ಟ್ರಾಫಿಕ್‌ ಜಾಮ್ ಆಗಸ್ಟ್‌ 26, 2010 ರಂದು ಕೊನೆಗೊಂಡಿತು. ಒಟ್ಟಾರೆ ಈ ಟ್ರಾಫಿಕ್‌ ತೆರವುಗೊಳಿಸಲು 12 ದಿನಗಳು ಬೇಕಾಯಿತು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ