Viral: ವಧುನಿನ ಕಡೆಯವರು ರೊಟ್ಟಿ ಬಡಿಸಲು ತಡ ಮಾಡಿದರೆಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ವರ

ಕ್ಷುಲ್ಲಕ ಕಾರಣಗಳಿಂದ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಆಗಬೇಕಿದ್ದ ಮದುವೆಗಳೇ ನಿಂತು ಹೋದ ಅದೆಷ್ಟೋ ಘಟನೆಗಳು ಈ ಹಿಂದೆಯೂ ಸಾಕಷ್ಟು ನಡೆದಿವೆ. ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ವಧುವಿನ ಕಡೆಯವರು ರೊಟ್ಟಿ ಬಡಿಸಲು ತಡ ಮಾಡಿದರೆಂಬ ಕಾರಣಕ್ಕೆ ವರನೊಬ್ಬ ಆಗಬೇಕಿದ್ದ ಮದುವೆಯನ್ನೇ ರದ್ದು ಮಾಡಿ, ಮರುದಿನ ತನ್ನ ಅತ್ತೆ ಮಗಳೊಂದಿಗೆ ಮದುವೆಯಾಗಿದ್ದಾನೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ವಧುನಿನ ಕಡೆಯವರು ರೊಟ್ಟಿ ಬಡಿಸಲು ತಡ ಮಾಡಿದರೆಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ವರ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 31, 2024 | 1:00 PM

ಮದುವೆ ಮಂಟಪದಲ್ಲಿವೇ ಮದುವೆ ಮುರಿದು ಬಿದ್ದಂತಹ ಕೆಲವೊಂದಿಷ್ಟು ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಅದರಲ್ಲೂ ಕೇವಲ ಊಟದ ವಿಚಾರಕ್ಕೆ ಅದೆಷ್ಟೋ ಮದುವೆಗಳು ರದ್ದಾಗಿದ್ದುಂಟು, ಮದುವೆ ಮನೆ ರಣರಂಗವಾಗಿದ್ದುಂಟು. ಇದೀಗ ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ವಧುವಿನ ಕಡೆಯವರು ರೊಟ್ಟಿ ಬಡಿಸಲು ತಡ ಮಾಡಿದರೆಂಬ ಕಾರಣಕ್ಕೆ ವರನೊಬ್ಬ ಆಗಬೇಕಿದ್ದ ಮದುವೆಯನ್ನೇ ರದ್ದು ಮಾಡಿ, ಮರುದಿನ ಅತ್ತೆ ಮಗಳೊಂದಿಗೆ ಮದುವೆಯಾಗಿದ್ದಾನೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ವಧುವಿನ ಕಡೆಯವರು ರೊಟ್ಟಿ ಬಡಿಸಲು ವಿಳಂಬ ಮಾಡಿದರೆಂದು ಕೋಪಗೊಂಡ ವರ ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದಾನೆ. ನಂತರ ಆತ ತನ್ನ ಅತ್ತೆ ಮಗಳನ್ನು ಮದುವೆಯಾಗಿದ್ದಾನೆ.

ವರದಿಗಳ ಪ್ರಕಾರ ಡಿಸೆಂಬರ್‌ 22 ರಂದು ಈ ಘಟನೆ ನಡೆದಿದ್ದು, ವರ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಕುಳಿತ ಸಂದರ್ಭದಲ್ಲಿ ಮದುಮಗನಿಗೆ ವಧುವಿನ ಕುಟುಂಬಸ್ಥರು ರೊಟ್ಟಿ ಬಡಿಸುವಾಗ ವಿಳಂಬ ಮಾಡಿದ್ದು, ಇದನ್ನು ಕಂಡು ಸ್ನೇಹಿತರು ಆತನನ್ನು ಗೇಲಿ ಮಾಡಿದ್ದಾರೆ. ಇದರಿಂದ ಕೋಪಗೊಂಡ ವರ ವಧುವಿನ ಮನೆಯವರನ್ನು ನಿಂದಿಸಿ ಕೊನೆಗೆ ಮದುವೆಯನ್ನೇ ಕ್ಯಾನ್ಸಲ್‌ ಮಾಡಿ ಹೊರಟು ಹೋಗಿದ್ದಾನೆ. ನ್ಯಾಯಕ್ಕಾಗಿ ವಧುವಿನ ಕಡೆಯವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ನಾವೆಲ್ಲರೂ ಬೆಳಗ್ಗೆಯೇ ರೆಡಿಯಾಗಿ ಕುಳಿತಿದ್ದೆವು. ಆದರೆ ಆತ ರೊಟ್ಟಿ ಬಡಿಸಲು ತಡವಾಯಿತೆಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ. ಅಷ್ಟೇ ಅಷ್ಟೇ ಅಲ್ಲದೆ ನನ್ನ ಪೋಷಕರನ್ನು ಕೂಡಾ ನಿಂದಿಸಿದ್ದಾನೆ. ಅದಕ್ಕಾಗಿ ನಾನು ಪೊಲೀಸ್‌ ಠಾಣೆಯ ಮೆಟ್ಟಿಲೇರಬೇಕಾಯಿತು ಎಂದು ವಧು ಹೇಳಿಕೊಂಡಿದ್ದಾಳೆ.

ಮದುವೆ ಮನೆಗೆ ಸುಮಾರು 200 ಮಂದಿ ಅತಿಥಿಗಳು ಬಂದಿದ್ದರು. ಅತಿಥಿಗಳ ಆತಿಥ್ಯದಿಂದ ಹಿಡಿದು ಊಟದವರೆಗೆ ಸುಮಾರು ಏಳು ಲಕ್ಷ ರೂ. ಖರ್ಷಾಗಿದೆ. ಅಷ್ಟೇ ಅಲ್ಲದೆ ಮದುವೆಯ ದಿನವೇ ವರದಕ್ಷಿಣೆಯ ರೂಪದಲ್ಲಿ 1.5 ಲಕ್ಷ ರೂ.ಗಳನ್ನು ಕೂಡಾ ನೀಡಿದ್ದೇವೆ ಎಂದು ವಧುವಿನ ತಾಯಿ ಆರೋಪಿಸಿದ್ದಾರೆ. ಇದೀಗ ವರ ಬೇರೆ ಮದುವೆಯಾಗಿದ್ದು, ಆತನ ವಿರುದ್ಧ ಎಫ್‌.ಐ.ಆರ್‌ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಒಂಟಿಯಾಗಿದ್ದ ತಾಯಿಗೆ ಎರಡನೇ ಮದುವೆ ಮಾಡಿಸಿದ ಮಗ; ಭಾವನಾತ್ಮಕ ವಿಡಿಯೋ ವೈರಲ್‌

ನಂತರ ಎಸ್ಪಿ ಸೂಚನೆ ಮೇರೆಗೆ ಎರಡೂ ಕಡೆಯವರನ್ನು ಹಾಗೂ ಗ್ರಾಮದ ಮುಖಂಡರನ್ನು ಮೊಘಲ್ಸರಾಯ್ ಠಾಣೆಗೆ ಕರೆಸಿ, ರಾಜಿ ಸಂದಾನ ಮಾಡಲಾಯಿತು. ಗಂಟೆಗಳ ಮಾತುಕತೆಯ ನಂತರ, ಅಂತಿಮವಾಗಿ ಎರಡೂ ಕಡೆಯವರ ನಡುವೆ ಒಪ್ಪಂದ ನಡೆದು ವರನ ಕಡೆಯವರು ವಧುವಿಗೆ 1.61 ಲಕ್ಷ ರೂ. ಪರಿಹಾರ ಧನ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ