Video Viral: ಬಾಸ್ಮತಿ ಅಕ್ಕಿಯ ಗೋಣಿಯನ್ನು ಬ್ಯಾಗ್ ರೀತಿ ಧರಿಸಿದ ಅಮೇರಿಕನ್ ಮಹಿಳೆ; ವಿಡಿಯೋ ವೈರಲ್

ಅಮೆರಿಕದ ಮಹಿಳೆಯೊಬ್ಬರು ಬಾಸ್ಮತಿ ಅಕ್ಕಿಯ ಗೋಣಿಯನ್ನು ಹ್ಯಾಂಡ್‌ಬ್ಯಾಗ್‌ನಂತೆ ಧರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮಂಡಾ ಜಾನ್ ಮಂಗಳತಿಲ್ ಎಂಬ ಪ್ರಭಾವಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ. ಈ ವಿಡಿಯೋ ಭಾರತೀಯರನ್ನು ಆಶ್ಚರ್ಯಗೊಳಿಸಿದೆ. ಇದು ಇಲ್ಲಿ ಉಚಿತವಾಗಿ ಲಭ್ಯವಿದೆ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Video Viral: ಬಾಸ್ಮತಿ ಅಕ್ಕಿಯ ಗೋಣಿಯನ್ನು ಬ್ಯಾಗ್ ರೀತಿ ಧರಿಸಿದ ಅಮೇರಿಕನ್ ಮಹಿಳೆ; ವಿಡಿಯೋ ವೈರಲ್
Viral Video
Follow us
ಅಕ್ಷತಾ ವರ್ಕಾಡಿ
|

Updated on: Dec 31, 2024 | 11:38 AM

ಅಮೆರಿಕದ ಮಹಿಳೆಯೊಬ್ಬಳು ಬಾಸ್ಮತಿ ಅಕ್ಕಿಯ ಗೋಣಿಯನ್ನು ಬ್ಯಾಗ್ ರೀತಿ ಧರಿಸಿ ಬೀದಿಯಲ್ಲೆಲ್ಲಾ ಸುತ್ತಾಡಿದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋದಲ್ಲಿ ಮಹಿಳೆ ರಾಯಲ್ ಬಾಸ್ಮತಿ ಅಕ್ಕಿಯ ಚೀಲವನ್ನು ಭುಜದ ಮೇಲೆ ಹೊತ್ತು ಸಲೂನ್‌ ಮುಂದೆ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಅಮಂಡಾ ಜಾನ್ ಮಂಗಳತಿಲ್ ಎಂಬ ಅಮೇರಿಕನ್ ಪ್ರಭಾವಿ ತನ್ನ ಇನ್ಸ್ಟಾಗ್ರಾಮ್​ ಖಾತೆಯಲ್ಲಿ(amandajohnmangalathil10) ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದೆ. ವಿಡಿಯೋ ಈಗಾಗಲೇ 9ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸಾವಿರಾರು ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಇದು ಇಲ್ಲಿ ಉಚಿತವಾಗಿ ಲಭ್ಯವಿದೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಜನರು ‘ಅಕ್ಕಿಯ ಚೀಲ’ ಎಂದು ಕಾಮೆಂಟ್​ ಮಾಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: Viral Video: ಮಳೆ ನೀರಿನಲ್ಲಿ ಆಟವಾಡುತ್ತಿರುವಾಗ ಚರಂಡಿಗೆ ಬಿದ್ದು ಕೊಚ್ಚಿ ಹೋದ 3 ವರ್ಷದ ಮಗು

ವಿಡಿಯೋ ಹಂಚಿಕೊಂಡ ಅಮಂಡಾ ‘ಭಾರತೀಯರೇ ಅಮೆರಿಕದಲ್ಲಿ ಯಾವ ಟ್ರೆಂಡ್ ನಡೆಯುತ್ತಿದೆ ಎಂಬುದನ್ನು ನೋಡಿ. ಮಹಿಳೆ ಬ್ರಾಂಡೆಡ್ ಬ್ಯಾಗ್ ಬಿಟ್ಟು ಬಾಸುಮತಿ ಅಕ್ಕಿಯ ಚೀಲವನ್ನು ಹೊತ್ತು ಸಲೂನ್‌ಗೆ ಹೋಗುತ್ತಿದ್ದಾಳೆ’ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಭಾರತದಲ್ಲಿ ಇದು ಉಚಿತವಾಗಿ ದೊರೆಯುತ್ತದೆ. ಮಹಿಳೆ ಐಷಾರಾಮಿ ಚೀಲವನ್ನು ಹೊರುವ ಬದಲು ಈ ಚೀಲವನ್ನು ಆರಿಸಿಕೊಂಡಿರುವುದನ್ನು ನೀವು ನೋಡಬಹುದು ಎಂದು ವಿಡಿಯೋದಲ್ಲಿ ಹೇಳಿರುವುದು ವೈರಲ್​​ ಆಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ