Viral Video: ಮಳೆ ನೀರಿನಲ್ಲಿ ಆಟವಾಡುತ್ತಿರುವಾಗ ಚರಂಡಿಗೆ ಬಿದ್ದು ಕೊಚ್ಚಿ ಹೋದ 3 ವರ್ಷದ ಮಗು
ಇಂಡೋನೇಷ್ಯಾದಲ್ಲಿ ಮಳೆನೀರಿನಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಚರಂಡಿಗೆ ಬಿದ್ದು ಕೊಚ್ಚಿ ಹೋದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಸಹೋದರಿ ಘಟನೆಯನ್ನು ಆಶ್ಚರ್ಯದಿಂದ ನೋಡುತ್ತಿರುವುದು ವೀಡಿಯೋದಲ್ಲಿದೆ.
ಇಂಡೋನೇಷ್ಯಾ: ಮಳೆ ನೀರಿನಲ್ಲಿ ಆಟವಾಡುತ್ತಿರುವಾಗಲೇ ಚರಂಡಿಗೆ ಬಿದ್ದು 3 ವರ್ಷದ ಮಗು ಕೊಚ್ಚಿ ಹೋದ ಘಟನೆ ಇಂಡೋನೇಷ್ಯಾದ ಸುರಬಯಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಟವಾಡುತ್ತಲೇ ಪುಟ್ಟ ಕಂದಮ್ಮ ಚರಂಡಿ ನೀರಿನಲ್ಲಿ ಮುಳುಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಟಿ ಟುಡೇ ವರದಿಯ ಪ್ರಕಾರ, ಡಿಸೆಂಬರ್ 24 ರಂದು ಈ ಘಟನೆ ನಡೆದಿದ್ದು, ಮಳೆಗೆ ಮೂರು ಮಕ್ಕಳು ಮನೆಯ ಹೊರಗೆ ಆಟವಾಡುತ್ತಿದ್ದಾಗ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ವೀಡಿಯೊದಲ್ಲಿ, ಮೊದಲನೆಯದಾಗಿ ಹುಡುಗಿ ಓಡಿ ಬಂದಿರುವುದನ್ನು ಕಾಣಬಹುದು. ಅವಳ ಹಿಂದೆ ಅವಳ ಮೂರು ವರ್ಷದ ತಮ್ಮನ್ನೂ ಓಡಿಬಂದಿದ್ದಾನೆ. ಇದಾದ ನಂತರ ಮಗು ನೀರಿನ ಬಳಿ ಹೋಗಿ ಅದರಲ್ಲಿ ಮುಳುಗಿದೆ. ಆಶ್ಚರ್ಯದ ಸಂಗತಿಯೆಂದರೆ, ಹುಡುಗಿ ತನ್ನ ಸ್ಥಳದಲ್ಲಿ ನಿಂತು ತನ್ನ ಸಹೋದರ ಮುಳುಗುವುದನ್ನು ನೋಡುತ್ತಲೇ ಇರುತ್ತಾಳೆ. ಈ ಗಂಭೀರ ಅಪಘಾತವನ್ನು ಆಕೆಗೆ ಏನಾಯಿತು ತಿಳಿದಿರಲಿಲ್ಲ ಎಂದು ತೋರುತ್ತದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನು ಓದಿ; ಪುಟ್ಟ ಮಗುವನ್ನು ರಂಜಿಸಲು ವಿಮಾನದಲ್ಲಿ ಹಾಡು ಹಾಡಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್
ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನೆಟ್ಟಿಗರು ಮಗುವಿನ ಪೋಷಕರ ಮೇಲೆ ಕೋಪಗೊಂಡಿದ್ದಾರೆ. ಅನೇಕ ಬಳಕೆದಾರರು ಈ ಅಪಘಾತಕ್ಕೆ ಮಗುವಿನ ಪೋಷಕರನ್ನು ದೂಷಿಸಿದ್ದಾರೆ. tatak_sinta_cell ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಿ. 25ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ