Viral: ಪುಟ್ಟ ಮಗುವನ್ನು ರಂಜಿಸಲು ವಿಮಾನದಲ್ಲಿ ಹಾಡು ಹಾಡಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಥಟ್ಟನೆ ನಮ್ಮ ಮನ ಗೆಲ್ಲುತ್ತವೆ. ಇದೀಗ ಅಂತಹದ್ದೊಂದು ವಿಡಿಯೋ ವೈರಲ್ ಆಗಿದ್ದು, ಮಗು ಕಿರಿಕಿರಿಯಿಂದ ಅಳಬಾರದು, ಅದಕ್ಕೂ ಮನರಂಜನೆಯನ್ನು ನೀಡಬೇಕೆಂದು ವ್ಯಕ್ತಿಯೊಬ್ಬರು ವಿಮಾನದೊಳಗೆ ಮಗುವಿಗಾಗಿ ಬೇಬಿ ಶಾರ್ಕ್ ಹಾಡನ್ನು ಹಾಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ವಿಮಾನದಲ್ಲಿ ಪ್ರಯಾಣಿಸುವಾಗ ಶಿಶುಗಳು ಅಥವಾ ಪುಟಾಣಿ ಮಕ್ಕಳು ಆರಾಮದಾಯಕವಾಗಿ ಇರಲು ಕಷ್ಟಪಡುತ್ತಾರೆ. ಹೀಗೆ ಅವರಿಗೆ ಉಂಟಾಗುವ ಕಿರಿಕಿರಿಯಿಂದಾಗಿ ಜೋರಾಗಿ ಅಳಲು ಆರಂಭಿಸುತ್ತಾರೆ. ಹೆಚ್ಚಿನ ಮಕ್ಕಳು ವಿಮಾನದಲ್ಲಿ ಪ್ರಯಾಣಿಸುವಾಗ ಹೀಗೆ ಜೋರಾಗಿ ಅಳುತ್ತಾರೆ. ತಾನು ಪ್ರಯಾಣಿಸುತ್ತಿದ್ದ ವಿಮಾನದೊಳಗೆ ಮಗು ಅಳಬಾರದು ಅದನ್ನು ಖುಷಿಖುಷಿಯಿಂದ ನೋಡಿಕೊಳ್ಳಬೇಕು ಎಂದು ಇಲ್ಲೊಬ್ರು ವ್ಯಕ್ತಿ ಮಗುವನ್ನು ರಂಜಿಸಲು ವಿಮಾನದೊಳಗೆ ಮಕ್ಕಳ ಫೇವರೆಟ್ ಹಾಡುಗಳಲ್ಲಿ ಒಂದಾದ ಬೇಬಿ ಶಾರ್ಕ್ ಹಾಡನ್ನು ಹಾಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ಲೆಬನಾನ್ ಮೂಲದ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯ ಸಿಇಒ ವಿಡೋ ಬಿರ್ಜಾವಿ ಎಂಬವರು ಮಗುವನ್ನು ರಂಜಿಸಲು ವಿಮಾನದೊಳಗೆ ಬೇಬಿ ಶಾರ್ಕ್ ಹಾಡನ್ನು ಹಾಡಿದ್ದಾರೆ. ತಂದೆತ ಮಡಿಲಲ್ಲಿ ಕುಳಿತಿದ್ದ ಆ ಹೆಣ್ಣು ಮಗು ಬಿರ್ಜಾವಿ ಅವರ ಹಾಡನ್ನು ಬಹಳ ಸಂತೋಷದಿಂದ ಆಲಿಸಿದೆ.
ಬಿರ್ಜಾವಿ (midobirjawi) ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬೇಬಿ ಶಾರ್ಕ್ ಆನ್‌ಬೋರ್ಡ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಿರ್ಜಾವಿ ಅವರು ಪುಟಾಣಿ ಮಗುವೊಂದನ್ನು ರಂಜಿಸಲು ವಿಮಾನದೊಳಗೆ ಬಹಳ ಉತ್ಸಾಹದಿಂದ ಬೇಬಿ ಶಾರ್ಕ್ ಹಾಡನ್ನು ಹಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಈ ವರ್ಷ ಸ್ವಿಗ್ಗಿ ಮತ್ತು ಝೊಮ್ಯಾಟೋದಲ್ಲಿ ಗ್ರಾಹಕರು ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು ಗೊತ್ತಾ?
ಡಿಸೆಂಬರ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಗುವಿಗಿಂತ ಸಹ ಪ್ರಯಾಣಿಕರು ಇವರ ಹಾಡಿಗೆ ಬಹಳ ಎಂಜಾಯ್ ಮಾಡ್ತಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼದೂರ ಪ್ರಯಾಣದ ವಿಮಾದಲ್ಲಿ ಇಂತಹವರು ಇದ್ದರೆ ಮಕ್ಕಳು ಖಂಡಿತವಾಗಿಯೂ ಖುಷಿಯಾಗಿರುತ್ತವೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಗುವಿಗೆ ಈ ಹಾಡನ್ನು ಕೇಳಿ ಖುಷಿಗಿಂತ ಆಘಾತವಾಗಿರುವಂತೆ ಕಾಣುತ್ತಿದೆʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ