Viral: ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ವಿಮಾನದಲ್ಲಿ ಮಗು ಹುಟ್ಟಿದರೆ ಯಾವ ದೇಶದ್ದಾಗುತ್ತೆ ಆ ಮಗು?

ರೈಲು ಮತ್ತು ಬಸ್ಸಿನಲ್ಲಿ ಪ್ರಯಾಣಿಸುವಂತಹ ಸಂದರ್ಭದಲ್ಲಿ ತುಂಬು ಗರ್ಭಿಣಿ ಮಹಿಳೆ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಅದರಂತೆ ವಿಮಾನದಲ್ಲೂ ಮಗು ಜನಿಸಿದಂತಹ ಅಪರೂಪದ ಪ್ರಕರಣಗಳು ನಡೆದದ್ದುಂಟು. ಒಂದು ವೇಳೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಾಯಿ ಮಗುವಿಗೆ ಜನ್ಮವನ್ನು ನೀಡಿದರೆ ಆ ಮಗುವಿಗೆ ಯಾವ ದೇಶದ ಪೌರತ್ವವನ್ನು ಪಡೆಯಬಹುದು ಎಂಬುದು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಸಂಗತಿ ಇಲ್ಲಿದೆ.

Viral: ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ವಿಮಾನದಲ್ಲಿ ಮಗು ಹುಟ್ಟಿದರೆ ಯಾವ ದೇಶದ್ದಾಗುತ್ತೆ ಆ ಮಗು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 31, 2024 | 10:33 AM

ಇತ್ತೀಚಿಗೆ ರೈಲು ಮತ್ತು ಚಲಿಸುತ್ತಿರುವ ಬಸ್ಸಿನಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದಂತಹ ಒಂದೆರಡು ಘಟನೆಗಳು ನಡೆದಿದ್ದವು. ಈ ಹಿಂದೆಯೂ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಅದರಂತೆ ವಿಮಾನದಲ್ಲೂ ಮಗುವಿಗೆ ಜನ್ಮ ನೀಡಿದಂತಹ ಅಪರೂಪದ ಘಟನೆಗಳು ನಡೆದದ್ದುಂಟು. ಒಂದು ವೇಳೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಾಯಿ ಮಗುವಿಗೆ ಜನ್ಮವನ್ನು ನೀಡಿದರೆ ಆ ಮಗುವಿಗೆ ಯಾವ ದೇಶದ ಪೌರತ್ವವನ್ನು ಪಡೆಯಬಹುದು ಎಂಬ ಯೋಚನೆ ನಿಮಗೂ ಬಂದಿದ್ಯಾ? ಹಾಗಿದ್ರೆ ವಿಮಾನದಲ್ಲಿ ಜನಿಸಿದ ಮಗು ಯಾವ ದೇಶದ್ದಾಗುತ್ತೆ, ಈ ಕುರಿತ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

ವಿಮಾನದಲ್ಲಿ ಪ್ರಯಾಣಿಸುವಾಗ ತಾಯಿ ಮಗುವಿಗೆ ಜನ್ಮ ನೀಡಿದರೆ ಮಗು ಯಾವ ದೇಶದ ಪೌರತ್ವ ಪಡೆಯುತ್ತದೆ:

ಅಂತರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಾಯಿ ಮಗುವಿಗೆ ಜನ್ಮವನ್ನು ನೀಡಿದರೆ ಆ ಮಗುವಿನ ಜನ್ಮಸ್ಥಳ ಮತ್ತು ಪೌರತ್ವಕ್ಕೆ ಸಂಬಂದಪಟ್ಟಂತೆ ಬೇರೆ ಬೇರೆ ದೇಶಗಳು ವಿಭಿನ್ನ ನಿಯಮಗಳನ್ನು ಹೊಂದಿವೆ. ಸಾಮಾನ್ಯವಾಗಿ ಭಾರತದಲ್ಲಿ ಏಳು ತಿಂಗಳ ಅಥವಾ 8, 9 ತಿಂಗಳ ಗರ್ಭಿಣಿಯರಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿಯಿಲ್ಲ. ಅದಾಗ್ಯೂ ತುರ್ತು ಮತ್ತು ಕೆಲವು ವಿಶೇಷ ಸಂದರ್ಭದಲ್ಲಿ ಗರ್ಭಿಣಿಯರಿಗೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ.

ಒಂದು ವೇಳೆ ತುಂಬು ಗರ್ಭಿಣಿ ಅಂತರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಗುವಿಗೆ ಜನ್ಮವನ್ನು ನೀಡಿದರೆ ಮಗುವಿನ ಜನ್ಮ ಸ್ಥಳ ಮತ್ತು ಪೌರತ್ವದ ಬಗ್ಗೆ ಪ್ರಶ್ನೆ ಬರುತ್ತದೆ. ಹೀಗಿರುವಾಗ ಮಗು ಯಾವ ಸಮಯದಲ್ಲಿ ಜನಿಸಿತು ಮತ್ತು ಆ ಸಮಯದಲ್ಲಿ ಯಾವ ದೇಶದ ಗಡಿಯಲ್ಲಿ ವಿಮಾನ ಹಾರುತ್ತಿತ್ತು ಎಂಬುದನ್ನು ನೋಡಲಾಗುತ್ತದೆ. ಒಂದು ವೇಳೆ ಅಮೇರಿಕಾದ ಗಡಿಯಲ್ಲಿ ವಿಮಾನ ಹಾರುತ್ತಿರುವಾಗ ಮಗು ಜನಿಸಿದರೆ, ಆ ದೇಶವೇ ಮಗುವಿನ ಜನ್ಮ ಸ್ಥಳವೆಂದು ಪರಿಗಣಿಸಲಾಗುತ್ತದೆ. ಮತ್ತು ವಿಮಾನ ಲ್ಯಾಂಡ್‌ ಆದ ಮೇಲೆ ಆ ದೇಶದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಜನ್ಮ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬಹುದು. ಇದರೊಂದಿಗೆ, ಮಗುವಿಗೆ ತನ್ನ ಹೆತ್ತವರ ರಾಷ್ಟ್ರೀಯತೆಯನ್ನೇ ಪಡೆಯುವ ಹಕ್ಕು ಸಹ ಇದೆ.

ಉದಾಹರಣೆಗೆ, ಬಾಂಗ್ಲಾದೇಶದಿಂದ ಅಮೆರಿಕಕ್ಕೆ ಹೋಗುವ ವಿಮಾನವು ಭಾರತದ ಗಡಿಯ ಮೂಲಕ ಹಾದು ಹೋದರೆ ಮತ್ತು ಈ ವಿಮಾನದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದರೆ, ಮಗು ತನ್ನ ಹೆತ್ತವರ ರಾಷ್ಟ್ರೀಯತೆ ಮತ್ತು ಭಾರತದ ಪೌರತ್ವ ಎರಡನ್ನೂ ಪಡೆಯಬಹುದು. ಆದರೆ, ಭಾರತದಲ್ಲಿ ಮಾತ್ರ ದ್ವಿ ಪೌರತ್ವಕ್ಕೆ ನಿಷೇಧವಿದೆ.

ಇದನ್ನೂ ಓದಿ: ವಿದ್ಯುತ್‌ ತಂತಿಯಲ್ಲಿ ಸಿಲುಕಿ ಜೀವನ್ಮರಣದ ಹೋರಾಟದಲ್ಲಿದ್ದ ಪಾರಿವಾಳವನ್ನು ರಕ್ಷಿಸಿದ ಯುವಕರು

ಈ ಹಿಂದೆಯೂ ಇಂತಹ ಘಟನೆಯೊಂದು ನಡೆದಿತ್ತು:

ಅಮೆರಿಕದಲ್ಲಿ ಇಂತಹ ಘಟನೆಯೊಂದು ಬೆಳಕಿಗೆ ಬಂದಿತ್ತು. ನೆದರ್ಲ್ಯಾಂಡ್ ರಾಜಧಾನಿ ಆಂಸ್ಟರ್‌ಡ್ಯಾಮ್‌ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ , ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದರು. ಆ ಸಮಯದಲ್ಲಿ ವಿಮಾನವು ಅಟ್ಲಾಂಟಿಕ್ ಸಾಗರದ ಮೇಲೆ ಹಾರುತ್ತಿತ್ತು. ವಿಮಾನ ಲ್ಯಾಂಡ್ ಆದ ಬಳಿಕ ತಾಯಿ ಮತ್ತು ಮಗುವನ್ನು ಅಮೆರಿಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮೆರಿಕದ ಗಡಿಯಲ್ಲಿ ಮಹಿಳೆ ಮಗುವಿಗೆ ಜನ್ಮವನ್ನು ನೀಡಿದ ಕಾರಣದಿಂದಾಗಿ, ಆ ಮಗು ನೆದರ್ಲ್ಯಾಂಡ್ ಮತ್ತು ಅಮೆರಿಕ ಈ ಎರಡೂ ದೇಶಗಳ ಪೌರತ್ವವನ್ನು ಪಡೆಯಿತು. ಅದಾಗ್ಯೂ ಅಂತರಾಷ್ಟ್ರೀಯ ವಿಮಾನದಲ್ಲಿ ಮಗು ಜನಿಸಿದರೆ, ಆ ಮಗುವಿನ ಪೌರತ್ವಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ದೇಶಗಳಲ್ಲಿ ವಿಭಿನ್ನ ಕಾನೂನು ಮತ್ತು ನಿಯಮಗಳಿವೆ.

ವೈರಲ್​​ ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ 

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ