Viral: ಒಂಟಿಯಾಗಿದ್ದ ತಾಯಿಗೆ ಎರಡನೇ ಮದುವೆ ಮಾಡಿಸಿದ ಮಗ; ಭಾವನಾತ್ಮಕ ವಿಡಿಯೋ ವೈರಲ್
ಪಾಕಿಸ್ತಾನದ ಹೃದಯಸ್ಪರ್ಶಿ ಕಥೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು ಇಲ್ಲಿನ ಯುವಕನೊಬ್ಬ ಒಂಟಿಯಾಗಿದ್ದ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸುವ ಮೂಲಕ ಸುದ್ದಿಯಾಗಿದ್ದಾನೆ. ತನ್ನ ಇಡೀ ಜೀವನವನ್ನೇ ನಮಗಾಗಿ ಮುಡಿಪಾಗಿಟ್ಟ, ನಿಸ್ವಾರ್ಥದಿಂದ ಬದುಕಿದ ನನ್ನ ತಾಯಿಗೂ ಪ್ರೀತಿ ಜೀವನದಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎಂದು ಈ ಯುವಕ ತನ್ನ ತಾಯಿಗೆ ಮರು ಮದುವೆಯನ್ನು ಮಾಡಿಸಿದ್ದಾನೆ.
ಮಕ್ಕಳಿರುವ ತಾಯಿ ಒಂದು ವೇಳೆ ಡಿವೋರ್ಸ್ ಆದ ಬಳಿಕ ಅಥವಾ ಗಂಡ ತೀರಿ ಹೋದ ಬಳಿಕ ಎರಡನೇ ಮದುವೆಯಾದರೆ ಸಮಾಜ ನೂರೊಂದು ಕೊಂಕು ಮಾತುಗಳನ್ನಾಡುತ್ತದೆ. ಇಲ್ಲೊಬ್ಬ ಯುವಕ ಸಮಾಜ ಈ ಎಲ್ಲಾ ಎಲ್ಲೆಗಳನ್ನು ಮೀರಿ ತನ್ನ ಹೆತ್ತಮ್ಮನ ಖುಷಿಗಾಗಿ ಆಕೆಗೆ ಎರಡನೇ ಮದುವೆಯನ್ನು ಮಾಡಿಸಿದ್ದಾನೆ. ಹೌದು 18 ವರ್ಷಗಳ ಕಾಲ ನಮಗಾಗಿ ನಿಸ್ವಾರ್ಥದಿಂದ ಬದುಕಿದ ನನ್ನ ತಾಯಿಗೂ ಪ್ರೀತಿ ಜೀವನದಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎಂದು ಈ ಯುವಕ ಒಂಟಿಯಾಗಿದ್ದ ತನ್ನ ತಾಯಿಗೆ ಮರು ಮದುವೆಯನ್ನು ಮಾಡಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದಿದೆ.
ಪಾಕಿಸ್ತಾನದ ಯುವಕ ಅಬ್ದುಲ್ ಅಹದ್ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾನೆ. ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎನ್ನುತ್ತಾ ತನ್ನ ತಾಯಿಯ ಖುಷಿಗಾಗಿ ಅಹದ್ ಅಮ್ಮನಿಗೆ ಎರಡನೇ ಮದುವೆಯನ್ನು ಮಾಡಿಸಿದ್ದಾನೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಈ ಹೃದಯಸ್ಪರ್ಶಿ ಕಥೆಯನ್ನು ಅಹದ್ (muserft.ahad) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಹದ್ ತಾನೇ ಮುಂದೆ ನಿಂತು ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿದ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ವಿಮಾನದಲ್ಲಿ ಮಗು ಹುಟ್ಟಿದರೆ ಯಾವ ದೇಶದ್ದಾಗುತ್ತೆ ಆ ಮಗು?
ಡಿಸೆಂಬರ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀವು ನಿಮ್ಮ ತಾಯಿಯ ಖುಷಿಗಾಗಿ ಬಹಳ ಅದ್ಭುತ ಕೆಲಸವನ್ನು ಮಾಡಿದ್ದೀರಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜವಾಗಿಯೂ ಒಂಟಿಯಾಗಿ ಬದುಕುವುದು ತುಂಬಾ ಕಷ್ಟ, ಪ್ರತಿಯೊಬ್ಬರಿಗೂ ಸುಖ ದುಃಖವನ್ನು ಹಂಚಿಕೊಳ್ಳಲು ಸಂಗಾತಿಯ ಅವಶ್ಯಕತೆಯಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಯುವಕನ ಈ ನಡೆಗೆ ಭಾರೀ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ