ದುಬೈನಲ್ಲಿ ತನ್ನ ರೆಸ್ಟೋರೆಂಟ್ ಮುಚ್ಚಿದ್ದಕ್ಕೆ ಭಾರತೀಯ ಮೂಲದ ಮಾಲೀಕರಿಗೆ ಹೃದಯಾಘಾತ
ತನ್ನ ಕನಸಿನ ಕೂಸು ಆಗಿರುವ ರೆಸ್ಟೋರೆಂಟ್ ಅನ್ನು ಬಲವಂತವಾಗಿ ಮುಚ್ಚಿದ ಕಾರಣ ಭಾರತೀಯ ಮೂಲದ ಮಾಲೀಕರಿಗೆ ಹೃದಯಾಘಾತವಾಗಿದೆ. ಒಂದು ಒಳ್ಳೆಯ ಲಾಭ ಹಾಗೂ ಆತ್ಮೀಯತೆಯನ್ನು ತಂದಿರುವ ಗ್ರಬ್‌ಶ್ಯಾಕ್ ರೆಸ್ಟೋರೆಂಟ್ ಅನ್ನು ಮುಚ್ಚಲು ನಿರ್ಧಾರಿಸಿದ ನಂತರ ಅದರ ಮಾಲೀಕರಿಗೆ ಹೃದಯಾಘಾತವಾಗಿದ್ದು, ಈ ಬಗ್ಗೆ ಅವರ ಮಗಳು ವಿವರಣೆ ನೀಡಿದ್ದಾರೆ ನೋಡಿ.

ದುಬೈನಲ್ಲಿರುವ ತನ್ನ ನೆಚ್ಚಿನ ರೆಸ್ಟೋರೆಂಟ್ (restaurant) ಅನ್ನು ಬಲವಂತವಾಗಿ ಮುಚ್ಚಿದ ಕಾರಣ ಭಾರತೀಯ ಮೂಲದ ಮಾಲೀಕರಿಗೆ ಹೃದಯಾಘಾತವಾಗಿದೆ. ಈ ಬಗ್ಗೆ ಗಲ್ಫ್ ನ್ಯೂಸ್‌ನ ವರದಿ ಮಾಡಿದೆ, ಈ ವರದಿ ಪ್ರಕಾರ, ದುಬೈನಲ್ಲಿರುವ ಗೋವಾ ಮೂಲದ ರೆಸ್ಟೋರೆಂಟ್ ಮುಚ್ಚಿದ ನಂತರ ಗ್ರಬ್‌ಶ್ಯಾಕ್ (Grubshack) ಸಂಸ್ಥಾಪಕಿ ಗೆಮ್ಮಾ ಮಸ್ಕರೆನ್ಹಸ್ ಅವರಿಗೆ ಹೃದಯಾಘಾತವಾಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಬಗ್ಗೆ ಗೆಮ್ಮಾ ಮಸ್ಕರೆನ್ಹಸ್ ಅವರ ಪುತ್ರಿ ಮರುಷ್ಕಾ ಕೊಯೆಲ್ಹೋ ಗಲ್ಫ್ ನ್ಯೂಸ್ ತಿಳಿಸಿದ್ದಾರೆ. ನನ್ನ ಅಮ್ಮನಿಗೆ ಹೃದಯಾಘಾತವಾಯಿತು ಮತ್ತು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮರುಷ್ಕಾ ಕೊಯೆಲ್ಹೋ ತಿಳಿಸಿರುವ ಪ್ರಕಾರ, ಕಳೆದ ಒಂದು ತಿಂಗಳಿಂದ ನನ್ನ ತಾಯಿ ತುಂಬಾ ಸಂಕಟ ಪಡುತ್ತಿದ್ದಾರೆ. ಸದ್ಯಕ್ಕೆ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಗೆಮ್ಮಾ ಮಸ್ಕರೇನ್ಹಸ್ 2012 ರಲ್ಲಿ ಗ್ರಬ್‌ಶ್ಯಾಕ್ ಅನ್ನು ಪ್ರಾರಂಭಿಸಿದರು, ಇದು ಬಾಂಬೆಯಿಂದ ಗೋವಾದವರೆಗೂ ವಿಸ್ತಾರಣೆಯನ್ನು ಪಡೆದಿತ್ತು. ಆರಂಭದಲ್ಲಿ, ಗ್ರಬ್‌ಶ್ಯಾಕ್ ರೆಸ್ಟೋರೆಂಟನ್ನು ಶಾರ್ಜಾದಲ್ಲಿ ಕೇವಲ 12 ಆಸನಗಳ ಒಂದು ಸಣ್ಣ ಸ್ಥಳದಲ್ಲಿ ಪ್ರಾರಂಭಿಸಲಾಗಿತ್ತು. ಇದರಲ್ಲಿ ಗೋವಾದ ಪಾಕಪದ್ಧತಿಯನ್ನು ಹಾಗೂ ಆಹಾರಗಳನ್ನು ಗ್ರಾಹಕರಿಗೆ ನೀಡಲಾಗಿತ್ತು. ಆರಂಭಿಕ ದಿನದಲ್ಲಿ ಹೆಚ್ಚಿನ ಗ್ರಾಹಕರನ್ನು ಹಾಗೂ ಆಹಾರ ಪ್ರೀಯರನ್ನು ಇದು ಸೆಳೆದಿತ್ತು. ಯಾವಾಗಲೂ ಗ್ರಾಹಕರಿಂದ ರೆಸ್ಟೋರೆಂಟ್ ತುಂಬಿತ್ತು ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಅಬುಧಾಬಿಯಿಂದ ಈ ರೆಸ್ಟೋರೆಂಟ್ಗೆ ಬರುತ್ತಿದ್ದರು. ಅಷ್ಟೊಂದು ಜನಪ್ರಿಯತೆಯನ್ನು ಪಡೆದಿತ್ತು. ಎಷ್ಟು ಬಾರಿ ಜನ ನಮ್ಮ ಆಹಾರವನ್ನು ಸೇವಿಸಲು ಕ್ಯೂ ನಿಲ್ಲುತ್ತಿದ್ದರು. ಕೆಲವೊಂದು ಬಾರಿ ನಾವು ಮನೆಗೆ ಬರುವಾಗ ಮಧ್ಯರಾತ್ರಿ ಆಗುತ್ತಿತ್ತು. ಅಷ್ಟೊಂದು ಜನರನ್ನು ಈ ರೆಸ್ಟೋರೆಂಟ್ ಆಕರ್ಷಿಸಿತ್ತು. ಗ್ರಬ್‌ಶ್ಯಾಕ್ 2016 ರಲ್ಲಿ ದುಬೈನ ಹೆಲ್ತ್ ಕೇರ್ ಸಿಟಿನಲ್ಲಿ ಪ್ರಾರಂಭಿಸಿದ್ದೇವು, ಇದು ನನ್ನ ಅಮ್ಮನ ಕನಸು ಕೂಡ ಆಗಿತ್ತು. ಇದೊಂದು ಹಣ ಮಾಡುವ ರೆಸ್ಟೋರೆಂಟ್ ಆಗಬೇಕು ಎನ್ನುವುದು ನಮ್ಮ ಉದ್ದೇಶವಾಗಿರಲಿಲ್ಲ. ಈ ರೆಸ್ಟೋರೆಂಟ್ ಗೋಡೆಗಳ ಮೇಲೆ ಗಿಟಾರ್‌ಗಳು ಮತ್ತು ಸಂಗೀತ ವಾದ್ಯಗಳು, ಹಳೆಯ ಕಿಟಕಿ ಚೌಕಟ್ಟುಗಳು, ಹೊಂದಿಕೆಯಾಗದ ಪೀಠೋಪಕರಣಗಳು ಒಂದು ಭಾರತೀಯ ಸಂಸ್ಕೃತಿಯನ್ನು ಇಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ: ಕೊನೆಗೂ ಸ್ವಾತಂತ್ರ್ಯ ಸಿಕ್ತು; ನದಿ ದಾಟಿ ಓಡುತ್ತಾ ಕಾಡು ಸೇರಿದ ಚಿರತೆ
ಇದು ನನ್ನ ತಾಯಿಗೆ ಕೇವಲ ವ್ಯವಹಾರ ಮಾಡುವ ರೆಸ್ಟೋರೆಂಟ್ ಆಗಿರಲಿಲ್ಲ, ಅವಳ ಮನೆಯಾಗಿತ್ತು. ಆದರೆ ಅವಳ ಪರಂಪರೆ, ಅವಳ ಕನಸನ್ನು ಮುಚ್ಚುವುದು ಎಂದಾಗ ಅವಳ ಹೃದಯ ಹೊಡೆದು ಹೋಗಿದೆ. ಒಂದು ದಶಕಕ್ಕೂ ಹೆಚ್ಚು ಸೇವೆ ಮಾಡಿದ ನಂತರ ಜೂನ್ 30 ರಂದು ಗ್ರಬ್‌ಶ್ಯಾಕ್ ತನ್ನ ಬಾಗಿಲುಗಳನ್ನು ಮುಚ್ಚಬೇಕಾಯಿತು. ಈ ರೆಸ್ಟೋರೆಂಟ್ ತುಂಬಾ ನಷ್ಟವನ್ನು ಅನುಭವಿಸಿತ್ತು. ಈ ಕಾರಣಕ್ಕೆ ಮುಚ್ಚುವ ನಿರ್ಧಾರಕ್ಕೆ ಬರಲಾಗಿತ್ತು. ಕೋವಿಡ್, ಕೊರೊನಾ ಸಮಯದಲ್ಲಿ ಈ ರೆಸ್ಟೋರೆಂಟ್ ತುಂಬಾನೇ ನಷ್ಟಕ್ಕೆ ಒಳಾಗಾಗಿತ್ತು. ನಂತರ ರೆಸ್ಟೋರೆಂಟ್ ಮೇಲೆ ತರಲು ಹೊಡಿಕೆ ಹಾಗೂ ಅನೇಕ ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ ಯಾವುದೇ ಪ್ರಯತ್ನ ನಮ್ಮ ಕೈಹಿಡಿಯಲಿಲ್ಲ. ಇದೀಗ ಅದನ್ನು ಮುಚ್ಚಲೇಬೇಕು ಎಂದು ನಮ್ಮ ಕುಟುಂಬ ನಿರ್ಧಾರ ಮಾಡಿದೆ. ಆದರೆ ಇದೀಗ ಅಮ್ಮನ ಕನಸಿನ ಈ ಕೂಸನ್ನು ಯಾವ ಕಾರಣಕ್ಕೂ ಮುಚ್ಚಬಾರದು ಎಂದು ಮತ್ತೆ ಅದರಲ್ಲಿ ಚಿಕ್ಕದಾಗಿ ಉಪಾಹಾರ ಗೃಹ ಪ್ರಾರಂಭಿಸಬೇಕು ಎಂದುಕೊಂಡಿದ್ದೇನೆ. ಇದು ಲಾಭಕ್ಕಾಗಿ ಅಲ್ಲ ಎಂದು ಮರುಷ್ಕಾ ಕೊಯೆಲ್ಹೋ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Thu, 17 July 25








