AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇದು ನನಗೆ ಅನಿವಾರ್ಯ, ಬಡ್ತಿಗಾಗಿ ವಾರದಲ್ಲಿ 20 ಗಂಟೆ ಕೆಲಸ ಮಾಡಿದ ಉದ್ಯೋಗಿ

ಕಂಪನಿ ನೀಡುವ ಕಿರುಕುಳ ಒಂದಲ್ಲ, ಎರಡಲ್ಲ. ಇಂತಹ ಕಿರುಕುಳದಿಂದ ಅದೆಷ್ಟೋ ಪ್ರತಿಭೆಗಳು ಜೀವನ ಕಳೆದುಕೊಂಡಿವೆ. ಅದರಲ್ಲೂ ಇತ್ತೀಚಿಗಿನ ದಿನಗಳಲ್ಲಿ ಕಂಪನಿಗಳು ಉದ್ಯೋಗಿಗಳ ಮೇಲೆ ಕೆಲಸದ ಹೊರೆಯನ್ನು ಹೆಚ್ಚಿಸಿದೆ. ಇದೀಗ ಇಂತಹದೇ ಪೋಸ್ಟ್​​​ ವೈರಲ್​ ಆಗಿದೆ. ತನ್ನ ಕಂಪನಿ 20 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯ ಮಾಡುತ್ತಿದೆ. ಅದು ಕೂಡ ಸಂಬಳರಹಿತವಾಗಿ, ಇದರಿಂದ ನನ್ನ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಿದೆ ಎಂದು ವ್ಯಕ್ತಿಯೊಬ್ಬರು ತಮ್ಮ ಕಷ್ಟವನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಿದ್ದಾರೆ.

Viral: ಇದು ನನಗೆ ಅನಿವಾರ್ಯ, ಬಡ್ತಿಗಾಗಿ ವಾರದಲ್ಲಿ 20 ಗಂಟೆ ಕೆಲಸ ಮಾಡಿದ ಉದ್ಯೋಗಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on:Jul 16, 2025 | 4:19 PM

Share

ಕೆಲವೊಂದು ಕಂಪನಿಗಳು ದಬ್ಬಾಳಿಕೆಯ ಹೊರೆಯನ್ನು ಉದ್ಯೋಗಿಗಳಿಗೆ ಹಾಕುತ್ತದೆ. ಇದು ಕೆಲವೊಂದು ಉದ್ಯೋಗಿಗಳಿಗೆ ಅನಿವಾರ್ಯ (work-life balance) ಏಕೆಂದರೆ ಮಧ್ಯಮ ವರ್ಗದಿಂದ ಬಂದಿರುತ್ತಾರೆ, ಹಾಗಾಗಿ ಕೆಲಸದ ಅನಿವಾರ್ಯ ಇದ್ದೇ ಇರುತ್ತದೆ. ಅದಕ್ಕಾಗಿ ಕೆಲಸದಲ್ಲಿ ಯಾವುದೇ ಒತ್ತಡ, ಚಿತ್ರಹಿಂಸೆಯಾದರೂ ಅದನ್ನು ಮಾಡುತ್ತಾರೆ. ಇದೇ ರೀತಿಯ ಹಿಂಸೆಯ ಬಗ್ಗೆ  ಉದ್ಯೋಗಿಯೊಬ್ಬರು ರೆಡ್ಡಿಟ್​​​ನಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ಸಾಫ್ಟ್‌ವೇರ್ ಡೆವಲಪರ್ (tech lead role) ಒಬ್ಬರು ತಮ್ಮ ಕೆಲಸ ಅವಧಿಯನ್ನು ಮೀರಿ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ. ಅದು ಕೂಡ ಬರೋಬ್ಬರಿ ವಾರದಲ್ಲಿ 20 ಗಂಟೆಗಳ ಕಾಲ ವೇತನವಿಲ್ಲದೆ ಕೆಲಸ ಮಾಡಿದ್ದಾರೆ. ಕಂಪನಿಯ ಈ ಒತ್ತಡಕ್ಕೆ ಅವರ ಆರೋಗ್ಯದಲ್ಲೂ ಕೂಡ ಏರುಪೇರಾಗಿದೆ ಎಂದು ತಮ್ಮ ಕಷ್ಟವನ್ನು ರೆಡ್ಡಿಟ್​​​ನಲ್ಲಿ ಹಂಚಿಕೊಂಡಿದ್ದಾರೆ.

ಕೆಲಸದ ನಂತರ ಪ್ರತಿ ದಿನವೂ 3 ಗಂಟೆ ಹೆಚ್ಚು ಕೆಲಸ ಮಾಡಿದ್ದೇನೆ. ನನ್ನ ವಾರಾಂತ್ಯ ಕೆಲಸದಲ್ಲೇ ಕಳೆದು ಹೋಗಿದೆ. ಈ ಕೆಲಸಕ್ಕೆ ಯಾವುದೇ ಸಂಬಳ ಇಲ್ಲ, ಈ ಬಗ್ಗೆ ಯಾರನ್ನೂ ಪ್ರಶ್ನೆ ಮಾಡುವ ಅಧಿಕಾರ ಕೂಡ ನಮಗೆ ಇಲ್ಲ ಎಂದು ದುಃಖದಲ್ಲಿ ಹೇಳಿದ್ದಾರೆ. ಈ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕು ಏಕೆಂದರೆ  ನನಗೆ ಬಡ್ತಿ ಬೇಕೆಂದರೆ ಇದನ್ನು ನಾನು ಮಾಡಲೇಬೇಕು ಎಂದು ಹೇಳಿದ್ದಾರೆ. ಇನ್ನು ಹೀಗೆ ಕೆಲಸ ಮಾಡಿ ತನ್ನ ಆರೋಗ್ಯದ ಮೇಲೆಯೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಎದೆಯ ಭಾರ ಮತ್ತು ಹೃದಯ ಸಮಸ್ಯೆಗಳಿಗೆ ಸಂಬಂಧಿಸಿದ ಇತರ ಲಕ್ಷಣಗಳನ್ನು ಅನುಭವಿಸುತ್ತಿದ್ದೇನೆ. ಈ ಬಗ್ಗೆ ವೈದ್ಯರ ಬಳಿ ಕೇಳಿದಾಗ ಹೆಚ್ಚಿನ ಒತ್ತಡದ ವಾತಾವರಣವನ್ನು ತಪ್ಪಿಸಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಕಂಪನಿಗೆ ಯಾವುದೇ ಮಾಹಿತಿ ನೀಡಿಲ್ಲ. ಏಕೆಂದರೆ ಇದರ ಬಗ್ಗೆ ಅವರು ಯಾವುದೇ ಕಾಳಜಿ ತೋರಿಸಲ್ಲ, ಅವರಿಗೆ ಕೆಲಸ ಮಾತ್ರ ಮುಖ್ಯ ಎಂದು ಹೇಳಿದ್ದಾರೆ.

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ:

I’m being forced to work 20 extra unpaid hours a week byu/Money-Contract-8885 inIndianWorkplace

ಇದನ್ನೂ ಓದಿ
Image
ಪ್ರಧಾನಿ ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ
Image
ಮ್ಯಾನೇಜರ್‌ಗೆ​​ 15 ಬಾರಿ ಚಾಕುವಿನಿಂದ ಇರಿದು ಕೊಂದ ಮಹಿಳಾ ಉದ್ಯೋಗಿ
Image
ಆರೋಗ್ಯ ಸಮಸ್ಯೆ ಅಂದ್ರು ವಿಚಿತ್ರ ಬೇಡಿಕೆ ಇಡ್ತಾರಂತೆ ಬಾಸ್
Image
ಈ ಸಾಫ್ಟ್‌ವೇರ್ ಇಂಜಿನಿಯರ್​​​ನ ತಿಂಗಳ ಖರ್ಚು 4.28 ಲಕ್ಷ ರೂ.

ಇದನ್ನೂ ಓದಿ: ಪ್ರಧಾನಿ ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ, ನಾರಾಯಣ ಮೂರ್ತಿ ಮತ್ತೆ ಟ್ರೆಂಡ್​​​​​

ಒಂದು ವೇಳೆ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿದ್ರೆ ಅವರು ನಂಬುವುದಿಲ್ಲ ಎಂದು ತಮ್ಮ ಪೋಸ್ಟ್​​​ನಲ್ಲಿ ಹೇಳಿದ್ದಾರೆ. ಇನ್ನು ಈ ಪೋಸ್ಟ್​​ ಬಗ್ಗೆ ಅನೇಕರು ಕಾಮೆಂಟ್​​ ಮಾಡಿದ್ದಾರೆ. ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸದ ಸಮಯದಲ್ಲಿ ಸ್ವಯಂ-ಕಲಿಕೆಯ ಸಮಯವನ್ನು ನಿಗದಿಪಡಿಸಲು ನಿಮ್ಮ ವ್ಯವಸ್ಥಾಪಕರನ್ನು ಕೇಳಿ ಎಂದು ಒಬ್ಬ ಬಳಕೆದಾರ ಕಾಮೆಂಟ್​​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಇದು ನಮಗೂ ಕಡ್ಡಾಯವಾಗಿದೆ… ಬಿಟ್ಟುಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್​​ನಲ್ಲಿ ಕೆಲವರು ಉದ್ಯೋಗಿಯ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎದೆ ನೋವು ಅಥವಾ ಉಸಿರಾಟದ ತೊಂದರೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ ಎಂದು ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಕೆಲಸ ಬಿಡುವುದು ಒಳ್ಳೆಯದು, ಇದಕ್ಕೆ ನಿಮ್ಮ ಆರೋಗ್ಯವನ್ನು ತ್ಯಾಗ ಮಾಡುವುದು ಸರಿಯಲ್ಲ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Wed, 16 July 25

ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ