AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಾವಿನ ಹಣ್ಣಿನ ಟ್ರಕ್‌ ಪಲ್ಟಿ; ಚಾಲಕನ ಸಹಾಯಕ್ಕೂ ಬಾರದೆ ಹಣ್ಣು ಹೆಕ್ಕುವುದರಲ್ಲಿ ಬ್ಯುಸಿಯಾದ ಜನ

ಪುಗಸಟ್ಟೆ ಸಿಗುತ್ತೆ ಅಂತಾದ್ರೆ ಜನ ಯಾವುದನ್ನು ಕೂಡಾ ಬಿಡೋಲ್ಲ ಅಂತಾರೆ. ಈ ಮಾತಿಗೆ ಉದಾಹರಣೆಯಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಪಲ್ಟಿಯಾದ ಟ್ರಕ್‌ನಿಂದ ಬಿದ್ದ ಮಾವಿನ ಹಣ್ಣನ್ನು ಹೆಕ್ಕಲು ಜನ ಮುಗಿ ಬಿದ್ದಿದ್ದಾರೆ. ದೊಡ್ಡ ದೊಡ್ಡ ಚೀಲದಲ್ಲಿ ತುಂಬಿಸಿ ಹಣ್ಣುಗಳನ್ನು ತಮ್ಮ ತಮ್ಮ ಮನೆಗೆ ಸಾಗಿಸಿದ್ದು, ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Video: ಮಾವಿನ ಹಣ್ಣಿನ ಟ್ರಕ್‌ ಪಲ್ಟಿ; ಚಾಲಕನ ಸಹಾಯಕ್ಕೂ ಬಾರದೆ ಹಣ್ಣು ಹೆಕ್ಕುವುದರಲ್ಲಿ ಬ್ಯುಸಿಯಾದ ಜನ
ಮಾವಿನ ಹಣ್ಣಿಗಾಗಿ ಮುಗಿಬಿದ್ದ ಜನ Image Credit source: Social Media
ಮಾಲಾಶ್ರೀ ಅಂಚನ್​
|

Updated on: Jul 17, 2025 | 2:31 PM

Share

ಉತ್ತರಾಖಂಡ, ಜುಲೈ 15: ಫ್ರೀಯಾಗಿ ಏನಾದ್ರೂ ಸಿಗುತ್ತೆ ಅಂದ್ರೆ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬೇಕಾದ್ರೂ ಓಡಿ ಬರುತ್ತಾರೆ. ಹೀಗೆ ರಸ್ತೆಯಲ್ಲಿ ಹಣ್ಣು, ತರಕಾರಿ ತುಂಬಿದ ವಾಹನ ಪಲ್ಟಿಯಾದಾಗ (overturned truck) ಚಾಲಕನ ಸಹಾಯಕ್ಕೂ ಬಾರದೆ ಜನ ಹಣ್ಣು ತರಕಾರಿಗಳನ್ನು ದೋಚಿ ಓಡಿ ಹೋದಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿಯೂ ಇಂತಹದ್ದೇ ಘಟನೆ ನಡೆದಿದ್ದು, ಪಲ್ಟಿಯಾದ ಟ್ರಕ್‌ನಿಂದ ಬಿದ್ದ ಮಾವಿನ ಹಣ್ಣನ್ನು ಹೆಕ್ಕಲು (Locals looting  mangos)  ಜನ ಮುಗಿ ಬಿದ್ದಿದ್ದಾರೆ. ಹೌದು ಚಾಲಕ ಸಹಾಯಕ್ಕೂ ಹೋಗದೆ ಜನ ಕೇವಲ ಹಣ್ಣು ಹೆಕ್ಕಲು ಮಾತ್ರ ಬಂದಿದ್ದು, ಈ ದೃಶ್ಯವನ್ನು ಕಂಡು ಇಂತಹ ಜನರಿದ್ರೆ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಪಲ್ಟಿಯಾದ ಟ್ರಕ್‌ನಿಂದ ಬಿದ್ದ ಮಾವಿನ ಹಣ್ಣನ್ನು ಹೆಕ್ಕಲು ಮುಗಿಬಿದ್ದ ಜನ:

ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದ್ದು, ಫ್ರೀಯಾಗಿ ಸಿಕ್ಕ ಮಾವಿನ ಹಣ್ಣನ್ನು ಲೂಟಿ ಮಾಡಲು ಜನ ಮುಗಿಬಿದ್ದಿದ್ದಾರೆ. ಡೆಹ್ರಾಡೂನ್‌ನ ರಿಸ್ಪಾನಾ ಸೇತುವೆ ಮೇಲೆ ಮಾವಿನ ಹಣ್ಣುಗಳನ್ನು ಸಾಗಿಸುತ್ತಿದ್ದ ಬೃಹತ್‌ ಟ್ರಕ್‌ ಪಲ್ಟಿಯಾಗಿದ್ದು, ಪರಿಣಾಮ ವಾಹನದಲ್ಲಿದ್ದ ಹಣ್ಣುಗಳೆಲ್ಲಾ ರಸ್ತೆಗೆ ಬಿದ್ದಿದೆ. ಹಣ್ಣುಗಳು ಬಿದ್ದಿದ್ದೆ ತಡ, ಅಲ್ಲಿದ್ದ ಜನರೆಲ್ಲರೂ ಓಡೋಡಿ ಬಂದು ಚೀಲ, ಬುಟ್ಟಿಗಳಲ್ಲಿ ತುಂಬಿಸಿ ಹಣ್ಣುಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ವಿಪರ್ಯಾಸ ಏನೆಂದ್ರೆ ಚಾಲಕನ ಸ್ಥಿತಿಯ ಬಗ್ಗೆ ಯಾರು ತಲೆಕೆಡಿಸಲೇ ಇಲ್ಲ.

ಇದನ್ನೂ ಓದಿ
Image
ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!
Image
ಹಾಡಿನ ಮೂಲಕ ರಿಕ್ಷಾ ಚಾಲಕನಿಗೆ ಸ್ವೀಟ್‌ ಆಗಿ ಬುದ್ಧಿವಾದ ಹೇಳಿದ ಪೊಲೀಸ್‌
Image
ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ
Image
ಕಾರಿನಡಿ ಸಿಲುಕಿದರೂ ಪವಾಡದಂತೆ ಬದುಕುಳಿದ ಮಗು

ಇಂಡಿಯಾ ಟುಡೇ ವರದಿಯ ಪ್ರಕಾರ, ಈ ಘಟನೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿಲ್ಲ. ವಾಹನ ಉರುಳಿ ಬಿದ್ದ ಕಾರಣ ಸಂಚಾರ ಅಸ್ತವ್ಯಸ್ಥವಾಗಿದ್ದು, ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು bhUpi Panwar ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ರಸ್ತೆಯಲ್ಲಿ ಹೋಗಿ ಬರುವವರೆಲ್ಲರೂ ರಸ್ತೆಯಲ್ಲಿ ಬಿದ್ದ ಮಾವಿನ ಹಣ್ಣುಗಳನ್ನು ಹೆಕ್ಕುವಲ್ಲಿ ನಿರತರಾಗಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರಸ್ತೆಬದಿಯಲ್ಲಿ ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ

ಜುಲೈ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 35 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಜನರಿದ್ದರೆ ಭಾರತ ಎಂದಿಗೂ ಅಭಿವೃದ್ಧಿ ಹೊಂದಿದ ದೇಶವಾಗಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼರಸ್ತೆಯಲ್ಲಿ ಬಿದ್ದ ಹಣ್ಣುಗಳನ್ನು ಹೆಕ್ಕುವುದರಲ್ಲಿ ತಪ್ಪೇನು ಕಾಣುವುದಿಲ್ಲʼ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಮಾನವೀಯತೆಯ ಅದ್ಭುತ ಪ್ರದರ್ಶನʼ ಎಂದು ಕಾಮೆಂಟ್‌  ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ