
ಚೀನಾ, ಅಕ್ಟೋಬರ್ 10: ಹೆಚ್ಚಿನವರು ಆಹಾರದಿಂದ ಹಿಡಿದು ಪ್ರತಿಯೊಂದು ವಸ್ತುಗಳನ್ನು ಆನ್ಲೈನ್‌ನಲ್ಲೇ ಆರ್ಡರ್ ಮಾಡುತ್ತಾರೆ. ರೆಸ್ಟೋರೆಂಟ್‌ಗಳಿಂದ ಹೋಗಿ ಫುಡ್ ಆರ್ಡರ್ ಮಾಡುವುದಕ್ಕೆ ಹೋಲಿಸಿದರೆ, ಆನ್ಲೈನ್ ಫುಡ್ ಆರ್ಡರ್ (Food delivery) ಮಾಡುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ಡೆಲಿವರಿ ಬಾಯ್ ಪಾರ್ಸಲ್ ನೀಡಲು ಬೈಕ್ ಅಥವಾ ಸೈಕಲ್ ಬಳಸುವುದನ್ನು ನೀವು ನೋಡಿರುತ್ತೀರಿ. ಆದರೆ ಡೆಲಿವರಿ ಬಾಯ್ ಕುದುರೆ ಏರಿ ಬಂದು ಪ್ರವಾಸಿಗರು ಫುಡ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಚೀನಾದಲ್ಲಿ (China) ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರವಾಸಿಗರು ಇದ್ದದ್ದು ವಿಶಾಲವಾದ ಹುಲ್ಲುಗಾವಲಿನಲ್ಲಿ ಪ್ರದೇಶದಲ್ಲಾದ ಕಾರಣ ಡೆಲಿವರಿ ಬಾಯ್ ಫುಡ್ ತಲುಪಿಸಲು ಈ ರೀತಿ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೌದು, ವಿಶಾಲವಾದ ಹುಲ್ಲುಗಾವಲಿನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದ ಪ್ರವಾಸಿಗರು ಫುಡ್ ಆರ್ಡರ್ ಮಾಡಿದ್ದಾರೆ. ಆದರೆ ಆ ಜಾಗಕ್ಕೆ ಬೈಕ್ ಅಥವಾ ಸೈಕಲ್ ಮೇಲೆ ಹೋಗಲು ಸಾಧ್ಯವಿಲ್ಲ ಎನ್ನುವುದು ಆಹಾರ ವಿತರಣಾ ಸಿಬ್ಬಂದಿಗೆ ಅರಿವಾಗಿದೆ. ಈ ವೇಳೆಯಲ್ಲಿ ಆರ್ಡರ್ ಕ್ಯಾನ್ಸಲ್ ಮಾಡುವ ಬದಲು ತಮ್ಮ ಬುದ್ಧಿ ಉಪಯೋಗಿಸಿದ್ದಾರೆ. ಬೈಕ್ ಬದಲಾಗಿ ಕುದುರೆ ಮೇಲೆ ತೆರಳಿ ಆರ್ಡರ್ ತಲುಪಿಸಿದ್ದಾರೆ.
cgtn ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಆಹಾರ ವಿತರಣಾ ಸಿಬ್ಬಂದಿಯೊಬ್ಬರು ಹುಲ್ಲುಗಾವಲಿನ ಪ್ರದೇಶದಲ್ಲಿ ಕುದುರೆ ಮೇಲೆ ಸವಾರಿ ಮಾಡಿ ಪ್ರವಾಸಿಗರಿಗೆ ಆರ್ಡರ್ ಮಾಡಿದ್ದ ಫುಡ್ ತಲುಪಿಸುತ್ತಿರುವುದನ್ನು ಕಾಣಬಹುದು. ಕಾರಿನಲ್ಲಿ ಹೋಗುತ್ತಿದ್ದ ಪ್ರವಾಸಿಗರಿಗೆ ತನ್ನ ಕೈಯಲ್ಲಿದ್ದ ಫುಡ್ ನೀಡಿದ್ದಾರೆ.
ಇದನ್ನೂ ಓದಿ: Viral: ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಸಿಲ್ವರ್ ಕಾಯಿನ್; ಆದ್ರೆ ಮನೆಗೆ ಬಂದದ್ದು ಮಾತ್ರ ಮ್ಯಾಗಿ, ಮಿಕ್ಸ್ಚರ್ ಪ್ಯಾಕೆಟ್
ಈ ವಿಡಿಯೋ ಹನ್ನೊಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಡೆಲಿವರಿ ಸರ್ವಿಸ್ ಮತ್ತೊಂದು ಹಂತಕ್ಕೆ ತಲುಪಿದೆ ಎಂದಿದ್ದಾರೆ. ಮತ್ತೊಬ್ಬರು ಕೆಲಸದ ಮೇಲಿನ ನಿಯತ್ತು, ಶ್ರದ್ಧೆ ಇದರಲ್ಲಿಯೇ ವ್ಯಕ್ತವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಪ್ರತಿ ಸಮಸ್ಯೆಗೂ ಪರಿಹಾರವಿದೆ, ಈ ಡೆಲಿವರಿ ಬಾಯ್ ಎಷ್ಟು ಚೆನ್ನಾಗಿ ತಲೆಉಪಯೋಗಿಸಿದ್ದಾರೆ ನೋಡಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:25 pm, Fri, 10 October 25