
ತೂಕ ಇಳಿಸಿಕೊಳ್ಳುವುದಕ್ಕೂ (China gym challenge) ಬಹುಮಾನ ನೀಡುತ್ತಾರೆ ಎಂದರೆ ನಂಬುತ್ತೀರಾ? ಹೌದ ನಂಬಲೇಬೇಕು. ಚೀನಾದ ಜಿಮ್ ಒಂದರಲ್ಲಿ ಕೇವಲ ಮೂರು ತಿಂಗಳಲ್ಲಿ 50 ಕೆಜಿ ತೂಕ ಇಳಿಸುವವರಿಗೆ ಪೋರ್ಷೆ ಕಾರನ್ನು ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿಕೊಂಡಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ , ಉತ್ತರ ಚೀನಾದ ಶಾಂಡೊಂಗ್ ಪ್ರಾಂತ್ಯದ ಬಿನ್‌ಝೌನಲ್ಲಿರುವ ಫಿಟ್‌ನೆಸ್ ಕೇಂದ್ರದಲ್ಲಿ ಈ ಸ್ಪರ್ಧೆಯನ್ನು ಆರಂಭಿಸಿದೆ. ಇದು ಚೀನಾದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಇದರಿಂದ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಬಹುದು ಚೀನಾದ ತಜ್ಞರು ಹೇಳಿದ್ದಾರೆ.
ಅಕ್ಟೋಬರ್ 23 ರಂದು ತನ್ನ ಜಿಮ್ ಸದಸ್ಯರಿಗೆ ಈ ಸವಾಲು ನೀಡಿದೆ. ಮೂರು ತಿಂಗಳೊಳಗೆ 50 ಕೆಜಿ ತೂಕ ಇಳಿಸಿಕೊಂಡವರಿಗೆ ಸುಮಾರು 1.1 ಮಿಲಿಯನ್ ಯುವಾನ್ (₹1.3 ಕೋಟಿ) ಬೆಲೆಬಾಳುವ ಪೋರ್ಷೆ ಪನಾಮೆರಾ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಇದೀಗ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಬಳಕೆದಾರರು ಇದನ್ನು ವಿರೋಧಿಸಿದ್ದಾರೆ. ವಾಂಗ್ ಎಂಬ ಫಿಟ್‌ನೆಸ್ ಕೇಂದ್ರದ ಜಿಮ್ ತರಬೇತುದಾರ ಈ ಬಗ್ಗೆ ಸ್ಪಷ್ಟನೆಯನ್ನು ಕೂಡ ನೀಡಿದ್ದು, ವೈರಲ್ ಆಗಿರುವ ಪೋಸ್ಟ್ ನಿಜ, ಈಗಾಗಲೇ ಕೆಲವರು ಈ ಸವಾಲನ್ನು ಸ್ವೀಕರಿಸಿದ್ದಾರೆ. ಇದಕ್ಕೆ 30 ಜನ ಆದ್ಮೇಲೆ, ಈ ಆಫರ್ ಅನ್ನು ಕ್ಲೋಸ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹೆಲ್ಮೆಟ್ ಇಲ್ಲ, ಮೊಬೈಲ್ನಲ್ಲಿ ಮಾತನಾಡುತ್ತಾ ಬಂದು ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ
ಈ ಸವಾಲು ಸ್ವೀಕರಿಸಲು ನೋಂದಣಿ ಶುಲ್ಕ 10,000 ಯುವಾನ್ (₹ 1.23 ಲಕ್ಷ), ಇದರಲ್ಲಿ ಊಟ ಮತ್ತು ವಸತಿಯನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಆದರೆ ಜಿಮ್ ಟ್ರೈನರ್ ನೀಡುವ ಈ ಪೋರ್ಷೆ ಪನಾಮೆರಾ 2020ರಲ್ಲಿ ಬಳಸಿದ ಕಾರು ಎಂದು ಹೇಳಲಾಗಿದೆ. ಆದರೆ ಇಂತಹ ಸವಾಲು ಯಾರು ಸ್ವೀಕರಿಸಬೇಡಿ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಕಡಿಮೆ ಅವಧಿಯಲ್ಲಿ 50 ಕೆಜಿ ತೂಕ ಇಳಿಸುವುದು ಅಪಾಯಕಾರಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ