AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಹೆಲ್ಮೆಟ್ ಇಲ್ಲ, ಮೊಬೈಲ್​​​​ನಲ್ಲಿ ಮಾತನಾಡುತ್ತಾ ಬಂದು ಕಾರಿಗೆ ಡಿಕ್ಕಿ ಹೊಡೆದ ಬೈಕ್​​ ಸವಾರ

ಬೆಂಗಳೂರಿನ ರಸ್ತೆ ಸುರಕ್ಷತೆ ಕುರಿತು ಕಳವಳ ಮೂಡಿಸಿರುವ ವೈರಲ್ ವಿಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ. ಹೆಲ್ಮೆಟ್ ಧರಿಸದೆ, ಫೋನ್‌ ಮಾತನಾಡುತ್ತಾ ಅಡ್ಡಾದಿಡ್ಡಿ ಬೈಕ್ ಓಡಿಸಿದ ಸವಾರ ಕಾರಿಗೆ ಡಿಕ್ಕಿ ಹೊಡೆದ ಘಟನೆ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ಅಜಾಗರೂಕ ಚಾಲನೆಯು ನಗರದ ರಸ್ತೆ ಸುರಕ್ಷತೆಯ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ, ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ಬೆಂಗಳೂರು: ಹೆಲ್ಮೆಟ್ ಇಲ್ಲ, ಮೊಬೈಲ್​​​​ನಲ್ಲಿ ಮಾತನಾಡುತ್ತಾ ಬಂದು ಕಾರಿಗೆ ಡಿಕ್ಕಿ ಹೊಡೆದ ಬೈಕ್​​ ಸವಾರ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Oct 31, 2025 | 11:49 AM

Share

ಬೆಂಗಳೂರು, .31: ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆ (Bengaluru Road Safety) ಎಷ್ಟಿದೆ? ಎಂಬ ಪ್ರಶ್ನೆಗಳು ಮೂಡಿದೆ. ದಿನಕ್ಕೊಂದು ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿರುವ ಅನೇಕ ವಿಡಿಯೋಗಳು ಸಾಕ್ಷಿಯಾಗಿದೆ. ರೀತಿಯ ಬೇಜವ್ದಾರಿತನ ರಸ್ತೆ ಸಂಚಾರವೇ ಕಾರಣ, ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ವಿಡಿಯೋದಿಂದಲ್ಲೇ ಬೆಂಗಳೂರಿನಲ್ಲಿ ಸುರಕ್ಷತೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದರಿಂದ ದಿನಕ್ಕೊಂದು ಅಪಘಾತಗಳು ನಡೆಯುತ್ತ ಇರುತ್ತದೆ. ಬೆಂಗಳೂರಿನಲ್ಲಿ ಇಂತಹ ಅಜಾಗರೂಕ ಚಾಲನೆಗಳು ಜನರಲ್ಲಿ ಕಳವಳ ಮೂಡಿಸಿದೆ. ಯೂಟ್ಯೂಬರ್ ಒಬ್ಬರು ತಮ್ಮ ಕಣ್ಮುಂದೆಯೇ ನಡೆದ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ಸೋಶಿಯಲ್ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೈಕ್ ಸವಾರನೊಬ್ಬ ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆ ಕ್ರಾಸ್​​ ಮಾಡುವ ವೇಳೆ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರಿನ ಡ್ಯಾಶ್‌ಕ್ಯಾಮ್ ಕ್ಯಾಮರ್​​ದಲ್ಲಿ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಬೈಕ್​​ ಸವಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಬೈಕ್ಚಲಿಸಿದ್ದಾನೆ. ಬೈಕ್​​ನಲ್ಲಿ ಮಿರರ್​​​​​ ಇಲ್ಲ, ಬೈಕ್​​ ಹಿಂದೆ ಕುತಿರುವ ವ್ಯಕ್ತಿ ಹಾಗೂ ಸವಾರ, ಇಬ್ಬರು ಹೆಲ್ಮೆಟ್​​​ ಕೂಡ ಧರಿಸಿಲ್ಲ. ಇನ್ನೊಂದು ಕಡೆ ವಿರುದ್ಧ ದಿಕ್ಕಿನಿಂದ ಕಾರನ್ನು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದ ಯಾವುದೇ ತೊಂದರೆಗಳು ಆಗಿಲ್ಲ. ಆದರೆ ಇದು ಸಂಚಾರಿ ನಿಯಮಗಳಿಗೆ ವಿರುದ್ಧವಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: 

View this post on Instagram

A post shared by 3rdEye Dude (@3rdeyedude)

ಸೋಶಿಯಲ್​​ ಮೀಡಿಯಾದಲ್ಲಿ ಬೈಕ್ ಸವಾರನ ನಿರ್ಲಕ್ಷ್ಯ ವರ್ತನೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇನ್ನು ವಿಡಿಯೋವನ್ನು ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದು, ಬೈಕ್​​ ಸವಾರ ಫೋನ್‌ನಲ್ಲಿ ಮಾತನಾಡುತ್ತಿರುವ ಮತ್ತು ಹೆಲ್ಮೇಟ್ಧರಿಸದೇ ಇರುವುದು ಎಷ್ಟು ಸರಿ? ಇದಕ್ಕೆ ಏನ್​​ ಹೇಳುತ್ತಿರಾ? ಎಂದು ವಿಡಿಯೋ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಅನೇಕ ಬಳಕೆದಾರರು ಬೈಕ್ ಸವಾರನ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದು, ಕಾರು ಚಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಬೈಕ್ಸವಾರನ್ನು ಮಾಹಿತಿಯನ್ನು ಪಡೆದು, ಆತ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಚಾರ್ಜಿಂಗ್ ಪಾಯಿಂಟ್​​​ನಲ್ಲಿ ಉಂಟಾದ ಸಮಸ್ಯೆಯನ್ನು 15 ನಿಮಿಷದಲ್ಲಿ ಪರಿಹರಿಸಿದ ಭಾರತೀಯ ರೈಲ್ವೆ ಇಲಾಖೆ

ಒಬ್ಬ ಬಳಕೆದಾರ ಬೈಕ್ ಸವಾರ ಅದೃಷ್ಟಶಾಲಿ, ಕಾರು ಚಾಲಕನ ಜವಾಬ್ದಾರಿಯುತ ಚಾಲನೆಯಿಂದ ಆತನ ಜೀವ ಉಳಿತು ಎಂದು ಕಮೆಂಟ್ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ, ಬೆಂಗಳೂರಿನಲ್ಲಿ ಇಂತಹ ಘಟನೆಗಳನ್ನು ನೋಡಿಯು ನೋಡದಂತೆ ಕಣ್ಮುಚ್ಚಿ ಇರುವುದು ಒಳ್ಳೆಯದು, ಏಕೆಂದರೆ ಇಂತಹ ಘಟನೆಗಳು ಬೆಂಗಳೂರಿನಲ್ಲಿ ಸಾಮಾನ್ಯವಾಗಿದೆ. ಇವರು ಯಾವತ್ತೂ ಬದಲಾವಣೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ