Video: ಉದ್ಘಾಟನೆಗೊಂಡ ಕೆಲ ತಿಂಗಳಲ್ಲೇ ಕುಸಿದೇ ಬಿಡ್ತು ಚೀನಾದ ಬೃಹತ್ ಹಾಂಗ್‌ಕ್ವಿ ಸೇತುವೆ, ಭಯಾನಕ ದೃಶ್ಯ ವೈರಲ್

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾದ ಹಾಂಗ್ಕಿ ಸೇತುವೆಯ ಒಂದು ಭಾಗವು ಕುಸಿತು ಬಿದ್ದಿದೆ. ಸೇತುವೆ ಕುಸಿಯುತ್ತಿರುವ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೇತುವೆ ಕುಸಿತಕ್ಕೂ ಮುನ್ನ ಸಂಚಾರ ನಿರ್ಬಂಧಿಸಿದ್ದರಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಉದ್ಘಾಟನೆಗೊಂಡ ಕೆಲ ತಿಂಗಳಲ್ಲೇ ಕುಸಿದೇ ಬಿಡ್ತು ಚೀನಾದ ಬೃಹತ್ ಹಾಂಗ್‌ಕ್ವಿ ಸೇತುವೆ, ಭಯಾನಕ ದೃಶ್ಯ ವೈರಲ್
ಚೀನಾದ ಬೃಹತ್ ಹಾಂಗ್‌ಕ್ವಿ ಸೇತುವೆ
Image Credit source: Twitter

Updated on: Nov 12, 2025 | 4:07 PM

ಚೀನಾ, ನವೆಂಬರ್ 12: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ (Sichuan province of China) ಹೊಸದಾಗಿ ನಿರ್ಮಿಸಲಾಗಿದ್ದ ಬೃಹತ್ ಹಾಂಗ್‌ಕ್ವಿ ಸೇತುವೆಯ (Hongqi Bridge) ಒಂದು ಭಾಗ ಮಂಗಳವಾರ ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿದೆ. ಮಧ್ಯ ಚೀನಾವನ್ನು ಟಿಬೆಟ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದ 758 ಮೀಟರ್ ಉದ್ದದ ಈ ಸೇತುವೆ ಇದಾಗಿದ್ದು, ಸೇತುವೆ ಕುಸಿದು ಬೀಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Weather monitor ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಬೃಹತ್ ‘ಹಾಂಗ್‌ಕ್ವಿ ಸೇತುವೆಯ ಒಂದು ಭಾಗ ಕುಸಿಯುವ ದೃಶ್ಯವನ್ನು ನೀವಿಲ್ಲಿ ನೋಡಬಹುದು. ಚೀನಾವನ್ನು ಟಿಬೆಟ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದ ಈ ಸೇತುವೆಯೂ ಸೆಪ್ಟೆಂಬರ್ ತಿಂಗಳಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿತ್ತು.​​ ಆದರೆ ಉದ್ಘಾಟನೆಗೊಂಡ ಕೆಲ  ತಿಂಗಳಲ್ಲೇ  ಬೃಹತ್‌ ಸೇತುವೆ ಕುಸಿದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಸೇತುವೆಯ ಬಳಿ ಇರುವ ಇಳಿಜಾರು ಮತ್ತು ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ಭೂಪ್ರದೇಶದಲ್ಲಿ ಬದಲಾವಣೆಗಳನ್ನು ಗಮನಿಸಿದ್ದು, ಹೀಗಾಗಿ ಒಂದು ದಿನ ಮುಂಚಿವಾಗಿ ಸೇತುವೆಯಲ್ಲಿನ ಸಂಚಾರವನ್ನು ಸಂಪೂರ್ಣವಾಗಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೇರ್ಕಾಂಗ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದಾದ ಒಂದು ದಿನದ ಬಳಿಕ ಮಂಗಳವಾರ ಪರ್ವತದ ಇಳಿಜಾರಿನ ಪರಿಸ್ಥಿತಿ ಹದಗೆಟ್ಟಿದ್ದು, ಹೀಗಾಗಿ ಭೂಕುಸಿತಗಳು ಸಂಭವಿಸಿ ಸೇತುವೆ ಕುಸಿತಕ್ಕೆ ಕಾರಣವಾಯಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ:ರೀಲ್ಸ್​ಗಾಗಿ ಹೆಲ್ಮೆಟ್​ ಇಲ್ಲದೆ ಅಪಾಯಕಾರಿ ಸ್ಟಂಟ್, ಬೇರೆಯವರ ಜೀವಕ್ಕೆ ತಂತು ಆಪತ್ತು

ಈ ಪೋಸ್ಟ್ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಪರ್ವತ ಮೇಲಿನ ಅಪಾಯದ ಮೌಲ್ಯ ಮಾಪನಗಳು ಈ ಯೋಜನೆ ವಿಫಲವಾಗಲು ಮುಖ್ಯ ಕಾರಣ ಎಂದಿದ್ದಾರೆ. ಇನ್ನೊಬ್ಬರು, ಚೀನಾದ ಶುವಾಂಗ್‌ಜಿಯಾಂಗ್‌ಕೌ ಸಿಚುವಾನ್ ಪ್ರಾಂತ್ಯದಲ್ಲಿ ಭಾಗಶಃ ಕುಸಿದ ಹಾಂಗ್ಕಿ ಸೇತುವೆ ಕೇವಲ 10 ರಿಂದ 11 ತಿಂಗಳುಗಳ ಕಾಲ ಬಳಕೆಯಲ್ಲಿತ್ತು. ಸೇತುವೆ 2024 ರಲ್ಲಿ ಪೂರ್ಣಗೊಂಡಿತು. ಸೇತುವೆಯ ನಿರ್ಮಾಣವು ನಡೆಯುತ್ತಿರುವ ಶುವಾಂಗ್‌ಜಿಯಾಂಗ್‌ಕೌ ಅಣೆಕಟ್ಟು ಯೋಜನೆಗೆ ಸಂಬಂಧಿಸಿದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು ಚೀನಾದಲ್ಲಿ ನಿರ್ಮಾಣವಾಗಿದ್ದರಿಂದ ಕುಸಿದೇ ಬಿಡ್ತು ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:01 pm, Wed, 12 November 25