AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ: ಮನೆಯ ಮುಂದೆ ಆಟ ಆಡುತ್ತಿದ್ದ ಪುಟ್ಟ ಮಗುವನ್ನು ಅಪಹರಿಸಲು ಯತ್ನಿಸಿದ ಕಾಡು ಕೋತಿ..! ಮುಂದೆ ಆಗಿದ್ದೇನು?

ಚಿಕ್ಕ ಮಗು ತನ್ನಪಾಡಿಗೆ ತಾನು ಬೀದಿಯಲ್ಲಿ ತನ್ನ ಸ್ಕೂಟರ್‌ನಲ್ಲಿ ಏಕಾಂಗಿಯಾಗಿ ಆಟವಾಡುತ್ತಿದ್ದಳು, ಕಳ್ಳ ಬೇಕ್ಕಿನಂತೆ ಬಂದ ಕಾಡು ಕೋತಿಯೊಂದು ಅವಳ ತಲೆ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಿದೆ.

ಚೀನಾ: ಮನೆಯ ಮುಂದೆ ಆಟ ಆಡುತ್ತಿದ್ದ ಪುಟ್ಟ ಮಗುವನ್ನು ಅಪಹರಿಸಲು ಯತ್ನಿಸಿದ ಕಾಡು ಕೋತಿ..! ಮುಂದೆ ಆಗಿದ್ದೇನು?
ಮಗುವಿನ ಮೇಲೆ ದಾಳಿ ಮಾಡಿದ ಕಾಡು ಕೋತಿ
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 23, 2022 | 5:16 PM

Share

Viral Video: ಪ್ರತಿಯೊಂದು ಪ್ರಾಣಿ ಕೂಡ ತನ್ನದೇ ಆದ ಸ್ವರೂಪವನ್ನು ಹೊಂದಿರುತ್ತದೆ. ಮನುಷ್ಯರೊಂದಿಗೆ ಅವುಗಳ ಒಡನಾಟ ನೋಡಲು ಎಷ್ಟು ಚಂದವೋ ಅದೇ ರೀತಿಯಾಗಿ ಅವುಗಳ ಕಾದಾಟವು ಅಷ್ಟೇ ಆಘಾತಕಾರಿಯಾಗಿರುತ್ತದೆ. ಪ್ರಾಣಿಗಳು ಕಾದಾಡುವಂತಹ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತೇವೆ. ಅಂತಹದ್ದೇ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ತನ್ನ ಮನೆಯ ಮುಂದೆ ಚಿಕ್ಕ ಮಗುವೊಂದು ಆಟವಾಡುತ್ತಿದ್ದು, ಇದೇ ವೇಳೆ ಕಾಡು ಕೋತಿಯೊಂದು ಪುಟ್ಟ ಮಗುವಿನ ಮೇಲೆ ದಾಳಿ ಮಾಡಿ ಕೂದಲು ಹಿಡಿದೆಳೆದುಕೊಂಡು ಹೋಗಿರುವಂತಹ ಆಘಾತಕಾರಿ ವಿಡಿಯೋ ಹರಿದಾಡುತ್ತಿದೆ. ಮಂಗಳವಾರ ಮಧ್ಯಾಹ್ನ ನೈಋತ್ಯ ಚೀನಾದ ಚಾಂಗ್‌ಕಿಂಗ್ ಬಳಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಚಿಕ್ಕ ಮಗು ತನ್ನಪಾಡಿಗೆ ತಾನು ಬೀದಿಯಲ್ಲಿ ತನ್ನ ಸ್ಕೂಟರ್‌ನಲ್ಲಿ ಏಕಾಂಗಿಯಾಗಿ ಆಟವಾಡುತ್ತಿದ್ದಳು, ಕಳ್ಳ ಬೇಕ್ಕಿನಂತೆ ಬಂದ ಕಾಡು ಕೋತಿಯೊಂದು ಅವಳ ತಲೆ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಿದೆ. ಅದೃಷ್ಟವಶಾತ್, ಇಲ್ಲೇ ಇದ್ದ ಒಬ್ಬ ಯುವಕ ಕಾರ್ಯಪ್ರವೃತ್ತನಾಗಿದ್ದು, ಮಗುವನ್ನು ತೆಗೆದುಕೊಂಡು ಹೋಗುವ ಮೊದಲು ಪ್ರಾಣಿಯ ಹಿಡಿತದಿಂದ ಮಗುವನ್ನು ರಕ್ಷಿಸಿದನು ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಲಿಯು ಎಂದು ಮಾತ್ರ ಗುರುತಿಸಲಾಗಿರುವ ಬಾಲಕಿಯ ತಾಯಿಯ ಪ್ರಕಾರ, ಮಂಗಳವಾರ ಮಧ್ಯಾಹ್ನ ಅವಳು ಒಳಗೆ ಅಡುಗೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಕೆಯನ್ನು ಚಿಕಿತ್ಸೆಗಾಗಿ ಮತ್ತು ಲಸಿಕೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮೂರು ವರ್ಷದ ಮಗುವಿನ ತಲೆಯ ಮೇಲೆ ಗಾಯವಾಗಿದೆ.

ಗ್ಲೋಬಲ್ ಟೈಮ್ಸ್ ಪ್ರಕಾರ, ಸ್ಥಳೀಯ ಅಧಿಕಾರಿಗಳು ಸ್ಥಳೀಯ ಪ್ರದೇಶದಲ್ಲಿ ಹಲವಾರು ಇತರ ದಾಳಿಗಳಿಗೆ ಕೋತಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಕೋತಿ ಸ್ಥಳೀಯ ಗ್ರಾಮಸ್ಥರ ಮೇಲೆ ಹಲವು ಬಾರಿ ದಾಳಿ ನಡೆಸಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಮೀಪದ ಪರ್ವತಗಳಿಂದ ಬಂದ ಕೋತಿಯನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಸಣ್ಣ ಪ್ರಾಣಿಯು ಹತ್ತಿರದ ಪರ್ವತಗಳಲ್ಲಿ ವಾಸಿಸುತ್ತದೆ ಮತ್ತು ಹಾಳುಮಾಡಲು ಸಾಂದರ್ಭಿಕವಾಗಿ ವಸತಿ ಪ್ರದೇಶಕ್ಕೆ ಬರುತ್ತದೆ ಎಂದು ಸ್ಥಳೀಯ ಪೊಲೀಸರು ಹೇಳುತ್ತಾರೆ. ನಿವಾಸಿಗಳನ್ನು ರಕ್ಷಿಸಲು ಕೋತಿಯನ್ನು ಹಿಡಿದ ನಂತರ ಅದನ್ನು ಕಾಡು ಪ್ರಾಣಿ ಸಂರಕ್ಷಣಾ ವಿಭಾಗಕ್ಕೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸ್ಥಳೀಯ ಅರಣ್ಯ ಇಲಾಖೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ಕಾಡು ಮಂಗಗಳ ದಾಳಿಗಳು ವಿರಳ ಘಟನೆಗಳಾಗಿದ್ದು, ಅವು ಮತ್ತೆ ಮನುಷ್ಯರ ಮೇಲೆ ದಾಳಿ ಮಾಡದಂತೆ ತಡೆಯಲು ಪ್ರಯತ್ನಿಸಲಾಗುತ್ತಿದೆ.

ಈ ರೀತಿಯ ಘಟನೆ ಈ ಹಿಂದೆಯೊಮ್ಮೆ ನಡೆದಿದ್ದು, ವಿಡಿಯೋದಲ್ಲಿ ಹುಡುಗಿ ಹೊರಾಂಗಣದಲ್ಲಿ ಸ್ಕೂಟರ್‌ನೊಂದಿಗೆ ಆಟವಾಡುತ್ತಿರುವಾಗ ಕೋತಿ  ಇದ್ದಕ್ಕಿದ್ದಂತೆ ಮೇಲಕ್ಕೆ ಹಾರಿ, ಅವಳನ್ನು ನೆಲದ ಮೇಲೆ ಎಸೆದು ವೇಗವಾಗಿ ಎಳೆದುಕೊಂಡು ಹೋಗುವುದನ್ನು ನೋಡಿದ್ದೇವು. ಅದೃಷ್ಟವಶಾತ್ ದಾರಿಹೋಕ ಗ್ರಾಮಸ್ಥರು ಕೋತಿಯ ಬಳಿಗೆ ಧಾವಿಸಿ ಮಗುವನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ:

ನೋಟು ಅಮಾನ್ಯೀಕರಣ ಮತ್ತು ಕೋವಿಡ್-19 ಕೋಟ್ಯಾಂತರ ಉದ್ಯೋಗಗಳನ್ನು ನಶಿಸಿಹಾಕಿವೆ: ಸಿದ್ದರಾಮಯ್ಯ

Guinness World Record: 236 ಫೈಬ್ರಾಯ್ಡ್​ಗಳ ಆಪರೇಷನ್ ಬಳಿಕ ಗಿನ್ನೆಸ್ ದಾಖಲೆ ಬರೆದ ಬೆಂಗಳೂರು ಯುವತಿ