27ರ ಹರೆಯದ ಯುವತಿಯ ಪೋಷಕರು ನಿಮ್ಮ ಮಗಳು ಗಂಡು ಎಂದು ವೈದ್ಯರು ಹೇಳಿದಾಗ ಆಘಾತಕ್ಕೊಳಗಾಗಿದ್ದಾರೆ. ಬಾಲಕಿ ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದು, ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಯುವತಿಯ ಹೊಟ್ಟೆಯಲ್ಲಿ ವೃಷಣಗಳು ಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದರರ್ಥ ಅವಳು ಜೈವಿಕವಾಗಿ ಪುರುಷ. ಈ ಬಹಿರಂಗಪಡಿಸುವಿಕೆಯಿಂದ ಆಕೆ ಶಾಕ್ ಆಗಿದ್ದಾಳೆ. ಏಕೆಂದರೆ ಬಾಲ್ಯದಿಂದಲೂ ಇಲ್ಲಿಯವರೆಗೆ ಅವಳು ಹುಡುಗಿಯಾಗಿ ಇಷ್ಟು ವರ್ಷ ಬದುಕಿದ್ದು, ಶೀಘ್ರದಲ್ಲೇ ಮದುವೆಗೆ ಸಿದ್ದತೆ ನಡೆಸಲಾಗಿತ್ತು.
ಈ ಆಘಾತಕಾರಿ ಪ್ರಕರಣ ಚೀನಾದ ಹುಬೈ ಪ್ರಾಂತ್ಯದಿಂದ ನಡೆದಿದೆ. ಲಿ ಯುವಾನ್ (ಹೆಸರು ಬದಲಾಯಿಸಲಾಗಿದೆ) ಹೊಟ್ಟೆಯಲ್ಲಿ ಕಂಡುಬರುವ ವೃಷಣಗಳು ವಾಸ್ತವವಾಗಿ ಪುರುಷ ಹಾರ್ಮೋನುಗಳು ಮತ್ತು ವೀರ್ಯವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಇತರ ಹುಡುಗಿಯರಂತೆ, ಲೀಗೆ ಎಂದಿಗೂ ಪಿರಿಯಡ್ಸ್ ಆಗಿರಲ್ಲಿಲ್ಲ, ಜೊತೆಗೆ ಆಕೆಯ ಸ್ತನಗಳು ಬೆಳವಣಿಗೆಯಾಗಿರಲ್ಲಿಲ್ಲ. ಮಗಳಿಗೆ ಶೀಘ್ರದಲ್ಲೇ ಮದುವೆ ನಡೆಯಲಿರುವುದರಿಂದ ಆಕೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಪೋಷಕರು ನಿರ್ಧರಿಸಿದ್ದರು.
ವಾಸ್ತವವಾಗಿ, ಲೀ 18 ವರ್ಷ ವಯಸ್ಸಿನವಳಾಗಿದ್ದಾಗ, ಅವಳು ಆಸ್ಪತ್ರೆಗೆ . ನಂತರ ವೈದ್ಯರು ದಾಖಲಾಗಿದ್ದಳು. ಆಕೆ ಅಂಡಾಶಯದ ವೈಫಲ್ಯ ಮತ್ತು ಅಸಹಜ ಹಾರ್ಮೋನ್ ಮಟ್ಟದಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದರು. ಆದರೆ ಆಕೆಯ ಕುಟುಂಬದವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಆಕೆ ಮದುವೆಯಾಗಲು ಮುಂದಾದಾಗ, ಅವಳು ಮತ್ತೊಮ್ಮೆ ಪರೀಕ್ಷೆಗೆ ನಿರ್ಧರಿಸಿದ್ದು, ಈ ವೇಳೆ ಈ ಕಹಿ ಸತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ವಿಧವೆಯರ ಗ್ರಾಮ;ಮದುವೆಯಾದ ಕೆಲವೇ ದಿನಗಳಲ್ಲಿ ಇಲ್ಲಿ ಪುರುಷರು ಸಾಯುತ್ತಾರೆ!
ಸ್ತ್ರೀರೋಗತಜ್ಞ ಡುವಾನ್ ಹೇಳುವಂತೆ, ಲಿ ಹುಡುಗಿಯಂತೆ ಕಾಣುತ್ತಿದ್ದರೂ, ಅವಳು ಪುರುಷ ಲೈಂಗಿಕ ವರ್ಣತಂತುಗಳನ್ನು ಹೊಂದಿದ್ದಾಳೆ. ಅವರು ಜನ್ಮಜಾತ ಅಡ್ರಿನಲ್ ಹೈಪರ್ಪ್ಲಾಸಿಯಾ (CAH) ನಿಂದ ಬಳಲುತ್ತಿದ್ದಾರೆ.ವೈದ್ಯರ ಪ್ರಕಾರ, ಇದು 50,000 ರಲ್ಲಿ ಒಬ್ಬರಿಗೆ ಸಂಭವಿಸುತ್ತದೆ.
ಕ್ಯಾನ್ಸರ್ ಬರುವ ಅಪಾಯವಿದ್ದ ಕಾರಣ ಲೀ ಅವರ ಹೊಟ್ಟೆಯಲ್ಲಿದ್ದ ವೃಷಣಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.ಇದಲ್ಲದೆ, ಹಾರ್ಮೋನ್ ಚಿಕಿತ್ಸೆಯನ್ನು ದೀರ್ಘಕಾಲದವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆರಂಭಿಕ ಚಿಕಿತ್ಸೆಯ ಕೊರತೆಯಿಂದಾಗಿ ಆಕೆ ವಿಟಮಿನ್ ಡಿ ಕೊರತೆ ಮತ್ತು ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿದ್ದಾಳೆ ಎಂದು ವರದಿಯಿಂದ ತಿಳಿದುಬಂದಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Tue, 7 May 24