Met Gala 2024: ಮೆಟ್‌ಗಾಲಾದಲ್ಲಿ 83 ಕೋಟಿ ರೂ. ಮೌಲ್ಯದ ಉಡುಪು ಧರಿಸಿ ಮಿಂಚಿದ ಭಾರತೀಯ ಉದ್ಯಮಿ ಸುಧಾ ರೆಡ್ಡಿ
ಸೋಮವಾರ ರಾತ್ರಿ (ಭಾರತೀಯ ಕಾಲಮಾನ ಮಂಗಳವಾರ ಬೆಳಿಗ್ಗೆ) ನ್ಯೂಯಾರ್ಕ್‌ನಲ್ಲಿ ಗಾಲಾ ನಡೆದಿದೆ. ಸುಧಾ ರೆಡ್ಡಿ ಧರಿಸಿರುವ ಈ ಸುಂದರ ಉಡುಗೆಯನ್ನು ತರುಣ್ ತಹ್ಲಿಯಾನಿ ವಿನ್ಯಾಸಗೊಳಿಸಿದ್ದಾರೆ. 10 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 83 ಕೋಟಿ ರೂ. ಉಡುಪು ತೊಟ್ಟು ಮೆಟ್ ಗಾಲದಲ್ಲಿ ಸುಧಾ ರೆಡ್ಡಿ ಹೆಜ್ಜೆ ಹಾಕಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ 2024ರ ಮೆಟ್ ಗಾಲಾ ಈವೆಂಟ್ನಲ್ಲಿ ಸಾಕಷ್ಟು ಭಾರತೀಯ ಸೆಲೆಬ್ರೆಟಿಗಳು ಮಿಂಚಿದ್ದಾರೆ. ಈ ಬಾರಿ ಅದ್ದೂರಿಯಾಗಿಯೇ ಮೆಟ್ ಗಾಲಾ ಆಯೋಜನೆಗೊಂಡಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಈ ಫ್ಯಾಷನ್ ಹಬ್ಬದಲ್ಲಿ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದೀಗ ಭಾರತೀಯ ಉದ್ಯಮಿ ಮತ್ತು ಬಿಲಿಯನೇರ್ ಸುಧಾ ರೆಡ್ಡಿ, ಮೆಟ್ ಗಾಲಾದಲ್ಲಿ ಕಾಣಿಸಿಕೊಂಡಿದ್ದು, ಇವರ ಉಡುಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
10 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 83 ಕೋಟಿ ರೂ. ಉಡುಪು ತೊಟ್ಟು ಮೆಟ್ ಗಾಲದಲ್ಲಿ ಸುಧಾ ರೆಡ್ಡಿ ಹೆಜ್ಜೆ ಹಾಕಿದ್ದಾರೆ. ಸುಧಾ ರೆಡ್ಡಿ ಅವರು ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ನಿರ್ದೇಶಕಿ. ರೆಡ್ಡಿ ಅವರು ಸುಧಾ ರೆಡ್ಡಿ ಫೌಂಡೇಶನ್, ಯುನಿಸೆಫ್, ಗ್ಲೋಬಲ್ ಗಿಫ್ಟ್ ಫೌಂಡೇಶನ್ ಮುಂತಾದ ಸಾಕಷ್ಟು ಚಾರಿಟಿ ಮೂಲಕ ಲೋಕೋಪಕಾರಿ ಕಾರ್ಯಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ವಿಧವೆಯರ ಗ್ರಾಮ;ಮದುವೆಯಾದ ಕೆಲವೇ ದಿನಗಳಲ್ಲಿ ಇಲ್ಲಿ ಪುರುಷರು ಸಾಯುತ್ತಾರೆ!
ಸೋಮವಾರ ರಾತ್ರಿ (ಭಾರತೀಯ ಕಾಲಮಾನ ಮಂಗಳವಾರ ಬೆಳಿಗ್ಗೆ) ನ್ಯೂಯಾರ್ಕ್‌ನಲ್ಲಿ ಗಾಲಾ ನಡೆದಿದೆ. ಸುಧಾ ರೆಡ್ಡಿ ಧರಿಸಿರುವ ಈ ಸುಂದರ ಉಡುಗೆಯನ್ನು ತರುಣ್ ತಹ್ಲಿಯಾನಿ ವಿನ್ಯಾಸಗೊಳಿಸಿದ್ದಾರೆ. ಸುಧಾ ರೈಡಿ ಕೈಯಲ್ಲಿ ಹಿಡಿದುಕೊಂಡಿದ್ದ ವಿಂಟೇಜ್ ಚಾನೆಲ್ ಬ್ಯಾಗ್ ಬರೋಬ್ಬರಿ 33 ಲಕ್ಷ ಬೆಲೆಯದ್ದು. ಸುಧಾ ರೆಡ್ಡಿಯ ಸಂಪೂರ್ಣ ಉಡುಗೆ ಸರಿಸುಮಾರು 10 ಮಿಲಿಯನ್ ಅಂದರೆ 83 ಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ