Live! ಸಜೀವ ಆಕ್ಟೋಪಸ್ ತಿನ್ನಲು ಆರ್ಡರ್ ಮಾಡಿ.. ಡೈನಿಂಗ್ ಟೇಬಲ್ ಇಟ್ಟಾಗ ಆಕ್ಟೋಪಸ್ ಸರಿದಾಡುವುದನ್ನು ನೋಡಿ
ಆಕ್ಟೋಪಸ್ ಡೈನಿಂಗ್ ಟೇಬಲ್ ಸುತ್ತಲೂ ಚಲಿಸುವ ವಿಡಿಯೋ ವೀಕ್ಷಿಸಿ: ಈ ಆಘಾತಕಾರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬೆಸ್ಟ್ ಫಿಶಿಂಗ್ 2024 ಶೀರ್ಷಿಕೆಯಡಿ ಹಂಚಿಕೊಳ್ಳಲಾಗಿದೆ. ಇದನ್ನು ಇಲ್ಲಿಯವರೆಗೆ 37 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದಲ್ಲದೆ, 4.5 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.
ಜಗತ್ತು ಸಸ್ಯಾಹಾರದತ್ತ ವೇಗವಾಗಿ ಚಲಿಸುತ್ತಿದೆ ಎಂದು ಹೇಳಲಾಗುತ್ತದೆ. ಆದರೆ, ನಾನ್ವೆಜ್ ಪೀಸ್ ಇಲ್ಲದೇ ಮಾಸ್ ಇಲ್ಲ ಎನ್ನುತ್ತಾ ನಾನ್ ವೆಜ್ ತಿನ್ನಲು ಇಷ್ಟಪಡುವವರು ಜಗತ್ತಿನಲ್ಲಿ ಹೆಚ್ಚಾಗಿದ್ದಾರೆ . ತಾವು ತಿನ್ನುವ ಆಹಾರದಲ್ಲಿ ನಾನ್ ವೆಜ್ ಇಲ್ಲದಿದ್ದರೆ ಇವರಿಗೆ ಬೇರೇನೂ ತಿನ್ನಲು ಇಷ್ಟವಿರುವುದಿಲ್ಲ. ಕೆಲವರಿಗೆ ಮನೆಯಲ್ಲಿಯೇ ಮಾಡಿದ ನಾನ್ ವೆಜ್ ಅಂದರೆ ಇಷ್ಟ. ಇನ್ನು ಕೆಲವರಿಗೆ ಹೋಟೆಲ್ ಅಥವಾ ರೆಸ್ಟೊರೆಂಟ್‌ನಲ್ಲಿ ತಯಾರಿಸಿದ ಮಾಂಸಾಹಾರ (Non Veg) ಇಷ್ಟವಾಗುತ್ತದೆ. ಆದ್ರೆ ರೆಸ್ಟೋರೆಂಟ್ ನಲ್ಲಿ ನಾನ್ ವೆಜ್ ತಿನ್ನಲು ಕುಳಿತಾಗ ಅನಿರೀಕ್ಷಿತ ಘಟನೆ ನಡೆದರೆ ಶಾಕ್ ಆಗಬೇಕಾಗುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋವೊಂದು ವೈರಲ್ ಆಗಿದೆ ( Viral Video). ಅದೊಂದು ಆಘಾತಕಾರಿ ದೃಶ್ಯ ಅದರಲ್ಲಿ ಕಂಡುಬರುತ್ತದೆ (Trending).
ವಾಸ್ತವವಾಗಿ ರೆಸ್ಟೋರೆಂಟ್‌ನಲ್ಲಿ ಡೈನಿಂಗ್ ಟೇಬಲ್‌ನಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಅದರಲ್ಲಿ ಜೀವಂತ ಆಕ್ಟೋಪಸ್ ಅನ್ನು ಸಹ ನೀಡಲಾಗಿತ್ತು. ಡೈನಿಂಗ್ ಟೇಬಲ್ ಆ ಜೀವಂತ ಆಕ್ಟೋಪಸ್ ಇದ್ದಕ್ಕಿದ್ದಂತೆ ಅಲ್ಲಿದ್ದ ಇತರೆ ಭಕ್ಷ್ಯಗಳ ಮಧ್ಯೆಯಿಂದ ಹೊರಬಂದು ಸರಿದಾಡಲು ಪ್ರಾರಂಭಿಸುತ್ತದೆ. ಮೇಜಿನ ಮೇಲೆ ನಡೆದಾಡುವ ಆ ಆಕ್ಟೋಪಸ್ ಹೇಗೆ ಮುಂದೆ ಮುಂದೆ ಸಾಗುತ್ತದೆ ಮತ್ತು ಟೇಬಲ್‌ನಿಂದ ಕೆಳಗಿಳಿಯಲು ಹೇಗೆಲ್ಲಾ ಪ್ರಯತ್ನಿಸುತ್ತಿದೆ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈ ದೃಶ್ಯ ತುಸು ಆಘಾತಕಾರಿಯಾಗಿದೆ. ಈ ವಿಚಿತ್ರ ವಿದ್ಯಮಾನ ಎಲ್ಲಿ ನಡೆದಿದೆ ಎಂಬುದು ತಿಳಿದಿಲ್ಲವಾದರೂ ಜಪಾನ್, ಕೊರಿಯಾ, ಚೀನಾದಂತಹ ಅನೇಕ ದೇಶಗಳಲ್ಲಿ ಜನರು ಆಕ್ಟೋಪಸ್ ಮಾಂಸವನ್ನು ಸಹ ತಿನ್ನುತ್ತಾರೆ. ಕೆಲವರು ಲೈವ್ ಆಕ್ಟೋಪಸ್ ಅನ್ನು ಸಹ ಆರ್ಡರ್ ಮಾಡಿ ತಿನ್ನುತ್ತಾರೆ.
ಈ ಆಘಾತಕಾರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬೆಸ್ಟ್ ಫಿಶಿಂಗ್ 2024 ಶೀರ್ಷಿಕೆಯಡಿ ಹಂಚಿಕೊಳ್ಳಲಾಗಿದೆ. ಇದನ್ನು ಇಲ್ಲಿಯವರೆಗೆ 37 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದಲ್ಲದೆ, 4.5 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.
View this post on Instagram
ಅದೇ ಸಮಯದಲ್ಲಿ, ವೀಡಿಯೊವನ್ನು ನೋಡಿದ ನಂತರ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದರು. ಒಬ್ಬರು ಕೋಪದಿಂದ ಬರೆದಿದ್ದಾರೆ: ಪ್ರಾಣಿಗಳು ಸಹ ಬದುಕಲು ಬಯಸುತ್ತವೆ. ಮನುಷ್ಯ ಜೀವಂತ ಪ್ರಾಣಿಗಳನ್ನೂ ತಿನ್ನುವಷ್ಟು ಕ್ರೂರಿಯಾಗುತ್ತಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಖೇದಕರ. ಈ ಭೂಮಿಯಲ್ಲಿ ಮನುಷ್ಯರಷ್ಟೇ ಬದುಕಲು ಅರ್ಹರಾ? ಎಂಬ ಮಾರ್ಮಿಕ ಪ್ರಶ್ನೆ ಎತ್ತಿದ್ದಾರೆ. ಅಂತೆಯೇ ಒಬ್ಬರು ‘ಈ ನೋಟ ಭಯಾನಕವಾಗಿದೆ. ಊಟ ಮಾಡುತ್ತಿದ್ದ ಟೇಬಲ್ ಮೇಲೆಯೇ ಇಂತಹ ಘಟನೆ ನಡೆದಿದೆ. ಮುಂದೇನು? ಎಂದು ಕುತೂಹಲ ತೋರಿದ್ದಾರೆ.
ಹೆಚ್ಚಿನ ಟ್ರೆಂಡಿಂಗ್ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..
Published On - 11:44 am, Tue, 7 May 24