
ಚೀನಾ, ಜುಲೈ 13: ಹಿರಿ ಜೀವಗಳು ಹೆಚ್ಚು ವರ್ಷ ಬದುಕಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಹಲವು ಆಚರಣೆಗಳನ್ನು ಜನರು ಮಾಡುವುದನ್ನು ಭಾರತದಲ್ಲಿ ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಗ ತಾಯಿ ಬದುಕಿರುವಾಗಲೇ ಶವಪೆಟ್ಟಿಗೆ ತರಿಸಿ ಆಕೆಯನ್ನು ಅದರಲ್ಲಿ ಕೂರಿಸಿ ಮೆರವಣಿಗೆ ಮಾಡಿಸಿರುವ ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ. ಶವ ಪೆಟ್ಟಿಗೆಯನ್ನು ಹೊತ್ತು ಮೆರವಣಿಗೆ ಮಾಡಲು 16 ಜನರನ್ನು ಅವರು ಕರೆಸಿದ್ದರು. ಆ ವ್ಯಕ್ತಿ ಆ ರೀತಿ ನಡೆದುಕೊಂಡಿದ್ದೇಕೆ ಎಂಬುದನ್ನು ನೋಡೋಣ.
ವ್ಯಕ್ತಿ ಶವಪಟ್ಟಿಗೆಯನ್ನು ಖರೀದಿಸಿದ ಬಳಿಕ 70 ವರ್ಷದ ತಾಯಿಯನ್ನು ಅದರಲ್ಲಿ ಕೂರಿಸಿ ಮನೆಯವರೆಗೆ ಮೆರವಣಿಗೆ ಮಾಡಿಸಿದ್ದಾರೆ.ಶವಪೆಟ್ಟಿಗೆಯನ್ನು ಶವವಾಹನದ ಮೇಲೆ ಇರಿಸಲಾಯಿತು. ಶವ ಪೆಟ್ಟಿಗೆಯ ಒಳಗೆ ಮಹಿಳೆ ಕುಳಿತಿದ್ದರು. ಬ್ಯಾಂಡ್ ನುಡಿಸಲಾಗುತ್ತಿತ್ತು. ಇದು ನೋಡಲು ನಿಜವಾದ ಶವ ಮೆರವಣಿಗೆಯಂತೆಯೇ ಇತ್ತು.
ಇದು ಚೀನಾದ ಗ್ರಾಮೀಣ ಭಾಗದಲ್ಲಿ ಆಚರಿಸುವ ಸಾಂಪ್ರದಾಯಿಕ ಆಚರಣೆಯಾಗಿದೆ. ದಕ್ಷಿಣ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್ಡೆಯ ಟಾವೊಯುವಾನ್ ಕೌಂಟಿಯ ಶುವಾಂಗ್ಕ್ಸಿಕೌ ಪಟ್ಟಣದ ವ್ಯಕ್ತಿಯೊಬ್ಬರು ಈ ರೀತಿ ಮಾಡಿದ್ದಾರೆ. ಈ ಆಚರಣೆ ಮಾಡುವುದರಿಂದ ತಾಯಿಯ ಆಯಸ್ಸು ಹೆಚ್ಚಾಗುತ್ತದೆ ಎಂಬುದು ನಂಬಿಕೆಯಾಗಿದೆ. ಸಾಮಾನ್ಯವಾಗಿ ವೃದ್ಧರು ಇದರಿಂದ ತುಂಬಾ ಸಂತೋಷಪಡುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಿಲ್ಲ.
ಮತ್ತಷ್ಟು ಓದಿ: ಕುಮಟಾ ಬಳಿಯ ಗುಹೆಯೊಳಗೆ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ
ಅದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಈ ಆಚರಣೆಗೆ 2.4 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ. ವಯಸ್ಸಾದ ತಾಯಿಗೆ ಶವಪೆಟ್ಟಿಗೆಯನ್ನು ಖರೀದಿಸುವುದು ಅವರ ದೀರ್ಘಾಯುಷ್ಯವನ್ನು ಹಾರೈಸುವ ಸಾಂಕೇತಿಕ ಸೂಚಕವಾಗಿದೆ.
ಶವಪೆಟ್ಟಿಗೆಯನ್ನು ಹೊರುವವರ ಸಂಖ್ಯೆಯ ಬಗ್ಗೆ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲದಿದ್ದರೂ, ಪದ್ಧತಿಗಳ ಪ್ರಕಾರ, ಶವಪೆಟ್ಟಿಗೆಯನ್ನು ಸಾಮಾನ್ಯವಾಗಿ ಎಂಟು ಅಥವಾ ಹದಿನಾರು ಜನರು ಹೊತ್ತೊಯ್ಯುತ್ತಾರೆ. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಶವ ಪೆಟ್ಟಿಗೆ ನೆಲದ ಮೇಲೆ ಇರಿಸದಂತೆ ನೋಡಿಕೊಳ್ಳಬೇಕು ಎಂಬ ನಿಯಮವಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ