Video : ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್​ಗಳ ಕಿತ್ತಾಟ, ಈ ದೃಶ್ಯ ನೋಡಿ ನೆಟ್ಟಿಗರು ಸುಸ್ತೋ ಸುಸ್ತು

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 07, 2024 | 7:57 PM

ಸಾಮಾನ್ಯವಾಗಿ ಪ್ರಯಾಣಿಕರು ಸೀಟಿಗಾಗಿ ಜಗಳವಾಡುವುದನ್ನು ನಾವು ನೀವುಗಳು ನೋಡಿರುತ್ತೇವೆ. ಕೆಲವರಂತೂ ಬಸ್ಸಿನಲ್ಲಿ ಸೀಟು ಹಿಡಿಯಲು ಕರವಸ್ತ್ರ, ಬ್ಯಾಗ್ ಇನ್ನಿತ್ತರ ತಂತ್ರಗಳನ್ನು ಬಳಸುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕರ ನಡುವೆ ಸೀಟಿಗಾಗಿ ನಡೆದ ಜಗಳವಲ್ಲ. ರೈಲನ್ನು ಓಡಿಸಲು ಪೈಲೆಟ್ಸ್ ಗಳಿಬ್ಬರೂ ಜಗಳವಾಡುವ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

Video : ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್​ಗಳ ಕಿತ್ತಾಟ, ಈ ದೃಶ್ಯ ನೋಡಿ ನೆಟ್ಟಿಗರು ಸುಸ್ತೋ ಸುಸ್ತು
ವೈರಲ್ ವಿಡಿಯೋ
Follow us on

ರೈಲು ಅಥವಾ ಬಸ್ ಹಿಡಿಯಲು ಪ್ರಯಾಣಿಕರ ನಡುವೆ ಯಾವಾಗಲೂ ಜಗಳ ನಡೆಯುತ್ತಿರುತ್ತದೆ. ಅದರಲ್ಲಿ ಸರ್ಕಾರದ ಶಕ್ತಿಯೋಜನೆಗಳ ಬಂದ ಮೇಲಂತೂ ಬಸ್ಸಿನಲ್ಲಿ ಸೀಟಿಗಾಗಿ ಜಡೆಜಗಳಗಳು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಯಾವತ್ತಾದರೂ ರೈಲನ್ನು ಓಡಿಸಲು ಪೈಲೆಟ್ಸ್ ಗಳು ಜಗಳವಾಡುವುದನ್ನು ಕೇಳಿದ್ದೀರಾ. ಹೌದು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಂದೇಭಾರತ್ ಎಕ್ಸ್ ಪ್ರೆಸ್ ಓಡಿಸಲು ರೈಲ್ವೇಯ ಲೋಕೋ ಪೈಲೆಟ್ಸ್ ಗಳ ನಡುವೆ ನಡೆದ ಜಗಳವೊಂದು ನಡೆದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ರಾಜೇಂದ್ರ ಬಿ. ಅಕ್ಲೇಕರ್ ಹೆಸರಿನ ಖಾತೆಯಲ್ಲಿ ಈ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ‘ಪ್ರತಿಷ್ಠಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಓಡಿಸಲು ಲೋಕೋ ಪೈಲೆಟ್ಸ್ ಗಳ ನಡುವಿನ ಜಗಳವು ಭಾರತೀಯ ರೈಲ್ವೆಗೆ ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಐಷಾರಾಮಿ ವಂದೇಭಾರತ್ ಎಕ್ಸ್‌ಪ್ರೆಸ್‌ನ ಚಾಲಕನ ಕ್ಯಾಬಿನ್‌ಗೆ ಹೋಗಲು ಲೋಕೋ ಪೈಲೆಟ್ಸ್ ಹರಸಾಹಸ ಪಡುತ್ತಿರುವುದನ್ನು ಕಾಣಬಹುದು.
ಮೊದಲಿಗೆ ಲೋಕೋ ಪೈಲೆಟ್ಸ್ ಒಬ್ಬರು ಆಗ್ರಾ-ಉದಯಪುರ ರೈಲಿನ ಪೈಲೆಟ್ಸ್ ಕಂಪಾರ್ಟ್‌ಮೆಂಟ್ ಹತ್ತಿ ಬಾಗಿಲು ಲಾಕ್ ಮಾಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಇತ್ತ ಈ ರೈಲು ನಾನು ಓಡಿಸುವುದು ಎಂದು ಕೆಲ ಲೋಕೋ ಪೈಲೆಟ್ಸ್ ಗಳು ಜಗಳ ಆರಂಭಿಸಿದ್ದಾರೆ. ಆದರೆ ಬಾಗಿಲು ತೆಗೆಯದ ಕಾರಣ ಈ ರೈಲಿನ ಕಿಟಿಕಿಯಿಂದ ಒಬ್ಬೊಬ್ಬರು ಲೊಕೋಪೈಲೆಟ್ಸ್ ನುಸುಳಿಕೊಂಡು ರೈಲು ಹತ್ತುವುದನ್ನು ಕಾಣಬಹುದು. ಈ ವಂದೇಭಾರತ ರೈಲನ್ನು ಓಡಿಸಲು ಪರಸ್ಪರ ಬಟ್ಟೆ ಹರಿದುಕೊಳ್ಳುವಷ್ಟರ ಮಟ್ಟಿಗೆ ಜಗಳ ಆಡಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಹೃದಯಾಘಾತ, ಜೀವ ಉಳಿಸಲು ವೈದ್ಯರ ಹೋರಾಟ ಹೇಗಿತ್ತು ನೋಡಿ

ಈ ಸಂದರ್ಭದಲ್ಲಿ ಅಲ್ಲೇ ಇದ್ದ ಪ್ರಯಾಣಿಕರು ಕೂಡ ಲೋಕೋ ಪೈಲೆಟ್ಸ್ ಗಳು ಜಗಳ ಆಡಲು ಮತ್ತಷ್ಟು ಹುರಿದುಂಬಿಸಿದ್ದಾರೆ. ಈ ವಿಡಿಯೋವು ಒಂದು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರೊಬ್ಬರು, ‘ರೈಲು ಸೀಟಿಗಾಗಿ ಪ್ರಯಾಣಿಕರು ಕಿತ್ತಾಡಿಕೊಂಡರೆ, ರೈಲು ಓಡಿಸಲು ಪೈಲೆಟ್ ಕಿತ್ತಾಡಿಕೊಳ್ಳುತ್ತಿದ್ದಾರೆ, ಈ ರೈಲ್ವೇ ಅಂದರೆ ಕಿತ್ತಾಟವೋ ಅಥವಾ ಕಿತ್ತಾಟ ಅಂದರೆ ರೈಲ್ವೇಯೋ ‘ ಎಂದಿದ್ದಾರೆ. ಮತ್ತೊಬ್ಬರು, ‘ಬುಲೆಟ್ ರೈಲನ್ನು ಪರಿಚಯಿಸಿದರೆ ಪೈಲೆಟ್ಸ್ ಗಳ ಕಿತ್ತಾಟ ಹೇಗಿರಬಹುದು ಎಂದೊಮ್ಮೆ ಊಹಿಸಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ