ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ನಾಗರ ಹಾವು ನುಂಗಿದೆ. ಇಂತಹ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಭಯಂಕರ ದೃಶ್ಯ ಸೆರೆಯಾಗಿದ್ದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. 6 ಅಡಿ ಉದ್ದದ ಹಾವು ಮೊಟ್ಟೆಯನ್ನು ಬಾಯಿಯಿಂದ ಹೊರಹಾಕುತ್ತಿರುವ ದೃಶ್ಯ ನೋಡಿದ ನೆಟ್ಟಿಗರು ಧಂಗಾಗಿದ್ದಾರೆ. ಭಯಾನಕವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಕೊಸಾಂಬಿ ಗ್ರಾಮದ ಪವನ್ ಎನ್ನುವವರ ಮನೆಯಲ್ಲಿ ಕೋಳಿ ಸಾಕಣಿಕೆ ಮಾಡುತ್ತಾರೆ. ಕೋಳಿ ಸಾಕಾಣಿಕ ಕೇಂದ್ರಕ್ಕೆ ಹಾವು ಸದ್ದಿಲ್ಲದೆ ಬಂದು ಮೊಟ್ಟೆಗಳನ್ನು ನುಂಗಿದೆ. ಕೋಳಿಗಳೆಲ್ಲಾ ಹಾವನ್ನು ಕಂಡು ಕೂಗಲು ಪ್ರಾರಂಭಿಸಿವೆ. ಬಳಿಕ ಎಚ್ಚರಗೊಂಡ ಮನೆಯ ಮಾಲೀಕ ಬಂದು ನೋಡುವಷ್ಟರಲ್ಲಿ, ಹಾವು ಮೊಟ್ಟೆಗಳನ್ನು ನುಂಗಿ ಒದ್ದಾಡುತ್ತಾ ಇತ್ತು. ಈ ದೃಶ್ಯ ನೋಡಿ ಭಯಗೊಂಡ ಅವರು, ಬಳಿಕವೇ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಹಾವಾಡಿಗ ಹಾವನ್ನು ಹಿಡಿದ ತಕ್ಷಣ ಒಂದಾದ ಮೇಲೊಂದು ಮೊಟ್ಟೆಗಳು ಹಾವಿನ ಬಾಯಿಂದ ಹೊರಬಿದ್ದಿದೆ.
चंद्रपुर में एक कोबरा सांप को मुर्गी के अंडे चुरा कर खाना काफी महंगा पड़ गया. जहरीले कोबरा ने मुर्गी के 10 अंडो को निगल लिया फिर एक के बाद एक अंडे को अपने पेट से बाहर निकालने लगा. यह वीडियो हर किसी को हैरान कर देगा. pic.twitter.com/CXVcoLax2X
— vikas rajurkar (@rajurkar_vikas) June 29, 2021
ಸರಿಸುಮಾರು ರಾತ್ರಿ 9 ಗಂಟೆಯ ಸಮಯದಲ್ಲಿ ಪವನ್ ನಿವಾಸಕ್ಕೆ ಹಾವು ಪ್ರವೇಶಿಸಿದೆ. ದೈತ್ಯಾಕಾರದ ಹಾವು, ಕೋಳಿಗಳಿಗೆ ಯಾವುದೇ ಹಾನಿ ಮಾಡಿಲ್ಲ. 10 ಮೊಟ್ಟೆಗಳನ್ನು ತಿಂದು ಜೀವ ಉಳಿಸಿಕೊಳ್ಳಲು ಪರದಾಡುತ್ತಿತ್ತು. ನಂತರ ಒಂದಾದ ಮೇಲೊಂದು ಮೊಟ್ಟೆಗಳನ್ನು ಹೊರಹಾಕಿದೆ. ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ಹಾವಾಡಿಗ ಮಾಹಿತಿ ಹಂಚಿಕೊಂಡಿದ್ದಾರೆ.
ಕೋಳಿ ಮೊಟ್ಟೆಗಳನ್ನು ಹೊರಹಾಕುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಯಾನಕವಾಗಿ ಈ ದೃಶ್ಯ ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ಹಾವು ನೋಡಿದರೆ ಖಂಡಿತವಾಗಿಯೂ ಭಯವಾಗುವುದಂತೂ ಸತ್ಯ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Snake bite: ಹಾವು ಕಚ್ಚಿ ಸಾವು, ನಾಲ್ಕು ಆಸ್ಪತ್ರೆಗಳಿಗೆ ಸುತ್ತಾಡುವ ವೇಳೆಗೆ ಅಸುನೀಗಿದ ಬಾಲಕ, ಮಧ್ಯೆ ಕೊರೊನಾ ಕಾಟ
Viral Video: ಜೂ-ಕೀಪರ್ ಮೇಲೆ ಆಕ್ರಮಣ ಮಾಡಿದೆ ದಢೂತಿ ಹಾವು! ಭಯಾನಕ ದೃಶ್ಯ ವೈರಲ್