Viral Video: ಬೃಹತ್ ಗಾತ್ರದ ಏಡಿ ಗಾಲ್ಫ್ ಬ್ಯಾಟ್ ಮುರಿದು ಹಾಕಿದೆ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

| Updated By: preethi shettigar

Updated on: Jan 04, 2022 | 1:59 PM

ತೆಂಗಿನ ಏಡಿ ಅತ್ಯಂತ ದೊಡ್ಡ ಗಾತ್ರದ ಏಡಿಯಾಗಿದೆ. 3 ಅಡಿ ಮತ್ತು 3 ಇಂಚಿನ ಅಗಲದವರೆಗೆ ಇದು ಬೆಳೆಯಬಹುದು. ಇದು 4 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು ಹೊಂದಿರುತ್ತದೆ. ಜತೆಗೆ 50 ವರ್ಷಗಳವರೆಗೆ ಈ ಏಡಿ ಬದುಕಬಲ್ಲದು.

Viral Video: ಬೃಹತ್ ಗಾತ್ರದ ಏಡಿ ಗಾಲ್ಫ್ ಬ್ಯಾಟ್ ಮುರಿದು ಹಾಕಿದೆ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು
ಬೃಹತ್ ಗಾತ್ರದ ಏಡಿ
Follow us on

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲಾ ಒಂದು ವಿಡಿಯೋ ವೈರಲ್​ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ತಮಾಷೆಯ ವಿಡಿಯೋಗಳು ಹರಿದಾಡಿದರೆ ಮತ್ತೆ ಕೆಲವೊಮ್ಮೆ ಭಯ ಹುಟ್ಟಿಸುವ ಅಥವಾ ಅಚ್ಚರಿಯನ್ನುಂಟು ಮಾಡುವ ವಿಡಿಯೋಗಳು ವೈರಲ್​ ಆಗುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social media) ಬೃಹತ್​ ಗಾತ್ರದ ಏಡಿಯ ವಿಡಿಯೋವೊಂದು ವೈರಲ್​ ಆಗಿದೆ. ಆಸ್ಟ್ರೇಲಿಯದ ಗಾಲ್ಫ್ (Golf) ಆಟಗಾರರ ಜತೆಗೆ ಬೃಹತ್​ ಗಾತ್ರದ ಏಡಿ ಕಾಣಿಸಿಕೊಂಡಿದೆ. ಇದನ್ನು ನೋಡಿದ ಆಟಗಾರರು ಅಚ್ಚರಿಗೊಂಡಿದ್ದಾರೆ. ಆಸ್ಟ್ರೇಲಿಯಾದ ಕ್ರಿಸ್‌ಮಸ್ ದ್ವೀಪದಲ್ಲಿ ಚಿತ್ರೀಕರಿಸಲಾದ ಈ ವಿಡಿಯೋ ತುಣುಕು ಸದ್ಯ ವೈರಲ್​ ಆಗಿದ್ದು, ಏಡಿಯ ಶಕ್ತಿ ಕಂಡ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

news.com.au ಪ್ರಕಾರ, ಕ್ರಿಸ್‌ಮಸ್ ದ್ವೀಪದ ಸ್ಥಳೀಯ ಪಾಲ್ ಬುಹ್ನರ್ ಮತ್ತು ಅವರ ಸ್ನೇಹಿತರು ಅಕ್ಟೋಬರ್ 2020 ರಲ್ಲಿ ಈ ದೈತ್ಯಾಕಾರದ ಏಡಿಯನ್ನು ನೋಡಿದ್ದು, ಅದರೊಂದಿಗೆ ವಿಡಿಯೋ ಮಾಡಿದ್ದಾರೆ. ಆದರೆ ಈ ವಿಡಿಯೋ ಜನವರಿ 2022 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ಆದ ವಿಡಿಯೋದಲ್ಲಿ ಏಡಿಯು ಗಾಲ್ಫ್ ಮೈದಾನದಲ್ಲಿ ಕಾಣಿಸಿಕೊಂಡಿದೆ. ಏಡಿ ಗಾಲ್ಫ್​ ಬ್ಯಾಟ್​ ಅನ್ನು ತನ್ನ ಕಾಲುಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿದೆ. ಇದನ್ನು ತಪ್ಪಿಸಲು ಆಟಗಾರರು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಕೊನೆಗೆ ಗಾಲ್ಫ್​ ಬ್ಯಾಟ್​ ಅನ್ನು ಏಡಿ ಮುರಿದು ಹಾಕಿದೆ. ಈ ವಿಡಿಯೋದಲ್ಲಿನ ಆಟಗಾರರು ಬ್ಯಾಟ್​ ಅನ್ನು ಏಡಿ ಮುರಿದ ರೀತಿ ಕಂಡು ಅಚ್ಚರಿಗೊಂಡಿದ್ದಾರೆ.

ವೈರಲ್​ ಆದ ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಕೆರ್ರಿ ಬುಹ್ನರ್ ಹಂಚಿಕೊಂಡಿದ್ದಾರೆ. ಕ್ರಿಸ್‌ಮಸ್ ದ್ವೀಪದಲ್ಲಿ ಗಾಲ್ಫ್ ಅಪಾಯಕಾರಿ. ನನ್ನ ಪತಿ ಪಾಲ್ ಬುಹ್ನರ್ 2020 ರಲ್ಲಿ ಕ್ರಿಸ್​ಮಸ್​ ದ್ವೀಪದಲ್ಲಿ ಸ್ನೇಹಿತರ ಜತೆ ಆಟವಾಡಲು ಹೋದಾಗ ಈ ಅದ್ಭುತ ದೃಶ್ಯವನ್ನು ಚಿತ್ರೀಕರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಏಡಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತೆಂಗಿನ ಏಡಿ ಅತ್ಯಂತ ದೊಡ್ಡ ಗಾತ್ರದ ಏಡಿಯಾಗಿದೆ. 3 ಅಡಿ ಮತ್ತು 3 ಇಂಚಿನ ಅಗಲದವರೆಗೆ ಇದು ಬೆಳೆಯಬಹುದು. ಇದು 4 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು ಹೊಂದಿರುತ್ತದೆ. ಜತೆಗೆ 50 ವರ್ಷಗಳವರೆಗೆ ಈ ಏಡಿ ಬದುಕಬಲ್ಲದು. ಪಾರ್ಕ್ಸ್ ಆಸ್ಟ್ರೇಲಿಯಾದ ಪ್ರಕಾರ, ಈ ಅಸಾಧಾರಣ ರಾಬರ್ ಏಡಿಗಳು ಅಥವಾ ತೆಂಗಿನ ಏಡಿಗಳು ವಿಶೇಷವಾಗಿ ಹೊಳೆಯುವ ವಸ್ತುಗಳನ್ನು ಇಷ್ಟಪಡುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಲೈಕ್ಸ್​ನ ಮಹಾಪುರವೇ ಹರಿದುಬರುತ್ತಿದೆ. ಅನೇಕರು ಕಮೆಂಟ್​ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಏಡಿ ಅದನ್ನು ಇಷ್ಟಪಟ್ಟಿದೆ ಅದಕ್ಕೆ ಬ್ಯಾಟ್​ ಕೊಟ್ಟುಬಿಡಿ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನೂ ಅನೇಕರು ಕಮೆಂಟ್​ ಮೂಲಕ ಏಡಿಯ ಶಕ್ತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಮಕ್ಕಳು ಜನಿಸಿದ್ದು ಮಾತ್ರ ಬೇರೆ ಬೇರೆ ವರ್ಷದಲ್ಲಿ!

Video Viral: ಮಳೆಯ ನೀರಿನೊಂದಿಗೆ ಆಕಾಶದಿಂದ ಬಿದ್ದ ಮೀನುಗಳು: ವೀಡಿಯೋ ವೈರಲ್​

Published On - 1:55 pm, Tue, 4 January 22