Trending: ನಿಯಮ ಪಾಲಿಸದ್ದಕ್ಕೆ ಕೆಲಸದಿಂದ ಕಿತ್ತು ಹಾಕಿದ ಕಂಪನಿ, ಕೋರ್ಟ್ ಮೊರೆ ಹೋದಾತನಿಗೆ ಬಂಪರ್
ಕಂಪನಿಯು ತನ್ನನ್ನು ಕೆಲಸದಿಂದ ತೆಗೆದು ಹಾಕಿತು ಎಂದು ಆರೋಪಿಸಿ ನ್ಯಾಯ ಕೇಳಿಕೊಂಡು ಕೋರ್ಟ್ ಮೆಟ್ಟಿಲೇರಿದ ಉದ್ಯೋಗ ಕಳೆದುಕೊಂಡ ವ್ಯಕ್ತಿಯ ಬ್ಯಾಂಕ್ ಅಕೌಂಟ್ಗೆ ಲಕ್ಷಾಂತರ ರೂಪಾಯಿ ಬೀಳುವಂತಾಯಿತು.
ಕೊರೋನಾ ವೈರಸ್ ಹರಡಿದ ನಂತರ ಮನೆಯಿಂದಲೇ ಕೆಲಸ ಮಾಡುವುದು ಆದ್ಯತೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಅನೇಕ ಕಂಪನಿಗಳು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ನೀಡಿದೆ. ಪ್ರಸ್ತುತ ಪ್ರಪಂಚದಾದ್ಯಂತ ಅನೇಕ ಕಂಪನಿಗಳು ಈ ವಿಧಾನವನ್ನು ಅನುಸರಿಸುತ್ತಿವೆ. ಆದರೆ ಈಗ ಕೊರೋನಾ ಹರಡುವಿಕೆ ಕಡಿಮೆಯಾಗಿದೆ ಮತ್ತು ಪರಿಸ್ಥಿತಿಗಳು ಸುಧಾರಿಸಿರುವುದರಿಂದ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವಂತೆ ಸೂಚಿಸುತ್ತಿವೆ. ಆದರೆ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳ ಮೇಲೆ ವಿಚಿತ್ರ ನಿಯಮಗಳನ್ನು ಹೇರುತ್ತಿವೆ. ತಾವು ಸೂಚಿಸುವ ನಿಯಮಗಳನ್ನು ಅನುಸರಿಸಬೇಕು ಎಂದು ಕಟ್ಟುನಿಟ್ಟಾಗಿ ಹೇಳುತ್ತವೆ. ಈ ಕ್ರಮದಲ್ಲಿ ಅಮೆರಿಕದ ಕಂಪನಿಯೊಂದು ವಿಚಿತ್ರ ನಿಯಮ ಜಾರಿ ಮಾಡಿ ಅದನ್ನು ಪಾಲಿಸದ ಉದ್ಯೋಗಿಯನ್ನು ವಜಾ ಮಾಡಿದೆ. ಕಂಪನಿಯ ವರ್ತನೆ ವಿರುದ್ಧ ಉದ್ಯೋಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದ ಅವರಿಗೆ ನ್ಯಾಯದ ಜತೆಗೆ ಪರಿಹಾರವೂ ಸಿಕ್ಕಿದೆ.
ಫ್ಲೋರಿಡಾ ಮೂಲದ ಟೆಲಿಮಾರ್ಕೆಟಿಂಗ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಒದಗಿಸಿದೆ. ಆದರೆ ಇದಕ್ಕೆ ವಿಚಿತ್ರ ನಿಯಮವೊಂದನ್ನ ಕೂಡ ಜಾರಿಗೊಳಿಸಿತು. ಉದ್ಯೋಗಿಗಳು ದಿನಕ್ಕೆ ಒಂಬತ್ತು ಗಂಟೆಗಳ ಕಾಲ ಕ್ಯಾಮೆರಾವನ್ನು ಆನ್ ಮಾಡಬೇಕು ಮತ್ತು ತಮ್ಮ ಲ್ಯಾಪ್‌ಟಾಪ್ ಪರದೆಯನ್ನು ಹಂಚಿಕೊಳ್ಳಬೇಕು. ಆದರೆ ಕಂಪನಿ ಹಾಕಿದ್ದ ಈ ಷರತ್ತನ್ನು ಉದ್ಯೋಗಿಯೊಬ್ಬರು ಒಪ್ಪಿರಲಿಲ್ಲ. ಇದು ತನ್ನ ಖಾಸಗಿತನದ ಮೇಲಿನ ಆಕ್ರಮಣ ಎಂದು ಅವರು ಭಾವಿಸಿ ನಿಯಮಗಳನ್ನು ಬದಿಗಿಟ್ಟರು. ನೌಕರನ ವರ್ತನೆಯಿಂದ ಕೋಪಗೊಂಡ ಕಂಪನಿಯು ಆತನನ್ನು ಕೆಲಸದಿಂದ ತೆಗೆದುಹಾಕಿತು.
ಕಂಪನಿ ವಿನಾಕಾರಣ ವಜಾ ಮಾಡಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ವ್ಯಕ್ತಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿ ಕಂಪನಿಯ ಆದೇಶಗಳು ಸರಿಯಾಗಿಲ್ಲ ಮತ್ತು ಉದ್ಯೋಗಿಯನ್ನು ವಜಾಗೊಳಿಸಲು ಯಾವುದೇ ಮಾನ್ಯ ಕಾರಣಗಳಿಲ್ಲ ಎಂದು ಹೇಳಿದೆ. ಇದಲ್ಲದೇ ಉದ್ಯೋಗಿಗೆ 72,700 ಅಮೆರಿಕನ್ ಡಾಲರ್ (ಸುಮಾರು 60 ಲಕ್ಷ ರೂ.) ಪಾವತಿಸುವಂತೆ ಆದೇಶಿಸಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Sun, 16 October 22