Conga Line: ಜರ್ಮನ್​ನಲ್ಲಿ 14 ನಾಯಿಗಳಿಂದ ಗಿನ್ನೆಸ್ ವಿಶ್ವ ದಾಖಲೆ, ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Feb 02, 2023 | 7:16 AM

ಜರ್ಮನ್ ಪ್ರಜೆಯೊಬ್ಬರು ಒಟ್ಟು 14 ನಾಯಿಗಳನ್ನು ಒಂದರ ಹಿಂದೆ ಒಂದರಂತೆ ನಿಲ್ಲಿಸಿ ಗಿನ್ನೆಸ್ ದಾಖಲೆ ಬರೆದಿದ್ದಾರೆ.

Conga Line: ಜರ್ಮನ್​ನಲ್ಲಿ 14 ನಾಯಿಗಳಿಂದ ಗಿನ್ನೆಸ್ ವಿಶ್ವ ದಾಖಲೆ, ವಿಡಿಯೋ ವೈರಲ್
Follow us on

ಜರ್ಮನ್ ಪ್ರಜೆಯೊಬ್ಬರು ತಮ್ಮ ನಾಯಿಗಳಿಗೆ ಕೊಂಗಾವನ್ನು(Conga Line) ಹೇಗೆ ಮಾಡಬೇಕೆಂದು ಕಲಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು(Guinness World Record) ಪಡೆದಿದ್ದಾರೆ. ಈ ಹಿಂದೆ 2020ರಲ್ಲಿ ಅಲೆಕ್ಸಾ ಲೌನ್‌ಬರ್ಗರ್ ಎಂಬ 12 ವರ್ಷದ ಡಾಂಗ್ ಟ್ರೈನರ್ ಆಗಿದ್ದ ಬಾಲಕಿ ತನ್ನ 8 ನಾಯಿಗಳಿಗೆ ಕೊಂಗಾ ಮಾಡಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದರು. ಈಗ ಅವರ ತಂದೆ ಕೊಂಗಾದ ಮೂಲಕವೇ ಮಗಳ ದಾಖಲೆಯನ್ನು ಮುರಿದಿದ್ದಾರೆ. ವೋಲ್ಫ್‌ಗ್ಯಾಂಗ್ ಲಾಯೆನ್‌ಬರ್ಗರ್ ಎಂಬುವವರು ನಾಯಿಗಳಿಗೆ ಕೊಂಗಾ ಮಾಡಿದ ದಾಖಲೆ ಬರೆದಿದ್ದಾರೆ.

ಕೊಂಗಾ ಎಂದರೇನು?

ಕೊಂಗಾ ಎಂಬುದು ಲ್ಯಾಟಿನ್ ಅಮೇರಿಕನ್ ನೃತ್ಯವಾಗಿದೆ. ಕೊಂಗ ಲೈನ್ ಎಂದರೆ ಒಬ್ಬರ ಹಿಂದೆ ಒಬ್ಬರಂತೆ ಎರಡೇ ಕಾಲಿನಲ್ಲಿ ಸರಪಳಿ ರೀತಿಯಲ್ಲಿ ನಿಲ್ಲುವುದು. ಎಮ್ಮಾ, ಫಿಲೌ, ಫಿನ್, ಸೈಮನ್, ಸೂಸಿ, ಮಾಯಾ, ಉಲ್ಫ್, ಸ್ಪೆಕ್, ಬೀಬಿ, ಕೇಟೀ, ಜೆನ್ನಿಫರ್, ಎಲ್ವಿಸ್, ಚಾರ್ಲಿ ಮತ್ತು ಕ್ಯಾಥಿ ಸೇರಿದಂತೆ ಒಟ್ಟು 14 ನಾಯಿಗಳನ್ನು ಒಂದರ ಹಿಂದೆ ಒಂದರಂತೆ ನಿಲ್ಲಿಸಿ ಗಿನ್ನೆಸ್ ದಾಖಲೆ ಬರೆದಿದ್ದಾರೆ.

ಈ ಬಗ್ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಇದು ಹೆಚ್ಚಿನ ಮೆಚ್ಚುಗೆ ಪಡೆದಿದೆ. ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಹೆಚ್ಚಿನ ವೀವ್ಸ್ ಪಡೆದಿದೆ. ಇದುವರೆಗೆ 8,000 ಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಅನೇಕರು ಈ ಫೋಸ್ಟ್​ಗೆ ಕಮೆಂಟ್ ಮಾಡುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ