ರುಚಿಯಾದ ರಬಡಿ ಹೇಗೆ ತಯಾರಿಸುತ್ತಾರೆ ನೋಡಿದ್ದೀರಾ?

Indore : 1,400 ದಶಕಕ್ಕಿಂತಲೂ ಪೂರ್ವದಲ್ಲಿ ಈ ಖಾದ್ಯದ ತಯಾರಿಕೆ ಚಾಲ್ತಿಯಲ್ಲಿತ್ತು. ಇದು ಇಂದಿಗೂ ಅದೇ ಸ್ವಾದ ಅದೇ ಘಮ ಉಳಿಸಿಕೊಂಡು ಜನರ ರುಚಿತಂತುಗಳನ್ನು ಆಳುತ್ತಿದೆ. ಬನ್ನಿ ಇದನ್ನು ಹೇಗೆ ತಯಾರಿಸುತ್ತಾರೆ ಎಂದು ನೋಡೋಣ.

ರುಚಿಯಾದ ರಬಡಿ ಹೇಗೆ ತಯಾರಿಸುತ್ತಾರೆ ನೋಡಿದ್ದೀರಾ?
ರಬಡಿ ತಯಾರಿಕೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 01, 2023 | 6:50 PM

Viral Video : ಭಾರತೀಯ ಸಿಹಿತಿಂಡಿಗಳಿಗೆ ಮನಸೋಲದವರು ಯಾರಿದ್ದಾರೆ? ಅದರಲ್ಲಿಯೂ ಹಾಲಿನಿಂದ ಮಾಡಿದ ಖಾದ್ಯಗಳೆಂದರೆ ಎಂಥವರ ನಾಲಗೆಯೂ ನೀರೂರುತ್ತದೆ. ಖಾದ್ಯ ತಯಾರಿಕೆಯ ಪರಿಮಳ ಮೂಗಿಗೆ ಬಡಿದರೆ ಸಾಕು ಅರಿವಿಲ್ಲದೆಯೇ ಕಾಲುಗಳು ಅತ್ತ ಚಲಿಸುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಂದೋರ್​ನಲ್ಲಿ ರಬಡಿ (Rabdi) ಖಾದ್ಯವನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ನೋಡಬಹುದಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Amar Sirohi (@foodie_incarnate)

ಹಾಲನ್ನು ಹೀಗೆ ಕಾಯಿಸುತ್ತಾ ಹೋಗಬೇಕು. ಅದು ತಿಳಿಹಳದಿಯಾಗಿ ಕೆನೆಗಟ್ಟುವ ತನಕ. ಕಡಿಮೆ ಉರಿಯಲ್ಲಿ ಕುದಿಸುತ್ತ, ತೇಲಿಬರುವ ಕೆನೆಯನ್ನು ಪಾತ್ರೆಯ ಅಂಚಿಗೆ ಅಂಟಿಸುತ್ತ ಸಾಕಷ್ಟುಕೆನೆ ಸಂಗ್ರಹವಾಗುತ್ತಿದ್ದಂತೆ ಅದಕ್ಕೆ ಬೆಲ್ಲ, ಗೋಡಂಬಿ, ಪಿಸ್ತಾ ಬಾದಾಮ್​ ಸೇರಿಸಿದರೆ ರಬಡಿ ಸಿದ್ಧ. ಇದರ ರುಚಿ ಬಾಸುಂದಿಯಂತೆಯೂ ಅನ್ನಿಸುತ್ತದೆ.

ಇದನ್ನೂ ಓದಿ : ಆಶಾ ಭೋಸ್ಲೆಯ ‘ಆಂಖೋ ಕೀ ಮಸ್ತಿ’ ಹಾಡಿದ ಗಿಲ್ಗಿಟ್ ಬಲ್ಟಿಸ್ತಾನ್​ನ ತರುಣಿ

ಈ ವಿಡಿಯೋ ನೋಡಿದ ಅನೇಕರು ರುಚಿಯ ಬಗ್ಗೆ ಹೊಗಳಿದ್ದಾರೆ. ಇದನ್ನು ಜಿಲೇಬಿಯೊಂದಿಗೆ ತಿನ್ನುತ್ತೇವೆ ಎಂದಿದ್ದಾರೆ ಅನೇಕರು. ನಮ್ಮ ಭಾರತದ ಅತ್ಯಂತ ರುಚಿಯಾದ ಪದಾರ್ಥಗಳಲ್ಲಿ ಇದೂ ಒಂದು ಎಂದಿದ್ದಾರೆ. ಈ ವಿಡಿಯೋ ಚಿತ್ರೀಕರಿಸಿದ್ದು ಇಂದೋರ್​ನ ಲಕ್ಷ್ಮೀ ನಾರಾಯಣ ದೂದ್​ವಾಲಾ ಅಂಗಡಿಯಲ್ಲಿ.

ಇದನ್ನೂ ಓದಿ : 16 ದೋಸೆ ಪ್ಲೇಟ್​ ಒಂದೇ ಕೈಯಲ್ಲಿ; ವಿದ್ಯಾರ್ಥಿ ಭವನದ ಸರ್ವರ್ ಕೌಶಲಕ್ಕೆ ಆನಂದ ಮಹೀಂದ್ರಾ ಮೆಚ್ಚುಗೆ

ರಬಡಿಯ ಇತಿಹಾಸ ಗೊತ್ತೇ? 1,400 ದಶಕಕ್ಕಿಂತಲೂ ಮೊದಲು ಈ ಖಾದ್ಯದ ತಯಾರಿಕೆ ಚಾಲ್ತಿಯಲ್ಲಿತ್ತು ಎಂದು ಚಂಡಿಮಂಗಲ ಎಂಬ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. 1965ರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ರಬಡಿ ತಯಾರಿಕೆ ಮೇಲೆ ನಿಷೇಧ ಹೇರಲಾಯಿತು. ಏಕೆಂದರೆ ಈ ಸಿಹಿತಿಂಡಿಗಾಗಿ ಅತಿಯಾದ ಹಾಲಿನ ಬಳಕೆಯಾಗುತ್ತಿದೆ ಎನ್ನುವ ಕಾರಣಕ್ಕೆ. ಆದರೆ ಸಿಹಿತಿಂಡಿ ತಯಾರಕರು ನ್ಯಾಯಾಲಯದ ಮೆಟ್ಟಿಲು ಏರಿದರು. ಒಂದು ವರ್ಷದೊಳಗೆ ನ್ಯಾಯಾಲಯವು ಆದೇಶವನ್ನು ಹಿಂಪಡೆಯಿತು.

ನಿಮಗೀಗ ರಬಡಿ ತಿನ್ನುವ ಆಸೆಯಾಯಿತೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:42 pm, Wed, 1 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್