Viral Video: ಪ್ರೀ ವೆಡ್ಡಿಂಗ್​ ಫೋಟೋ ಶೂಟ್​ಗಾಗಿ ತಲೆಕೆಳಗಾಗಿ ನಿಂತ ಯುವಕ

ತಮಿಳುನಾಡಿನ ದೇವಸ್ಥಾನದ ಎದುರು ನಡೆಸಿದ ಜೋಡಿಯೊಂದರ ಪ್ರೀ ವೆಡ್ಡಿಂಗ್​ ಶೂಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ವಿಡಿಯೋ ನೋಡಿ ನೆ್ಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.

Viral Video: ಪ್ರೀ ವೆಡ್ಡಿಂಗ್​ ಫೋಟೋ ಶೂಟ್​ಗಾಗಿ ತಲೆಕೆಳಗಾಗಿ ನಿಂತ ಯುವಕ
ಪ್ರೀ ವೆಡ್ಡಿಂಗ್​ ಫೋಟೊಶೂಟ್​
Edited By:

Updated on: Feb 23, 2022 | 11:48 AM

ಪ್ರೀ ವೆಡ್ಡಿಂಗ್ ಫೋಟೋಶೂಟ್(Pre Wedding PhotoShoot)​ ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ವಿಭಿನ್ನ ಕಲ್ಪನೆಗಳ ಮೂಲಕ, ಹೊಸ ಹೊಸ ಜಾಗಗಳಿಗೆ ತೆರಳಿ ಫೋಟೋಶೂಟ್​ ಮಾಡಿಸುತ್ತಾರೆ. ಈಗಂತೂ ಫೋಟೋಗ್ರಾಫರ್​ಗಳೂ ಕೂಡ ಹೊಸ ಹೊಸ ರೀತಿಯ ಕಾನ್ಸೆಪ್ಟ್​ಗಳನ್ನು ಇಟ್ಟುಕೊಂಡು ಜೋಡಿಗಳ ಪೋಟೋಶೂಟ್​ ಮಾಡಿಸುತ್ತಾರೆ. ಇದೀಗ ತಮಿಳುನಾಡಿನ ದೇವಸ್ಥಾನದ ಎದುರು ನಡೆಸಿದ ಜೋಡಿಯೊಂದರ ಪ್ರೀ ವೆಡ್ಡಿಂಗ್​ ಶೂಟ್​ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್​ ಆಗಿದೆ. ಟ್ವಿಟರ್(Twitter) ​ನಲ್ಲಿ ಟ್ರೆಂಡ್​ ಸೃಷ್ಟಿಸಿದ ವಿಡಿಯೋ ನೋಡಿ ನೆ್ಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.

ವಿಡಿಯೋದಲ್ಲಿ ಹುಡುಗ ತಲೆಕೆಳಗಾಗಿ ನಿಂತಿರುತ್ತಾನೆ, ಯುವತಿ ಭರತನಾಟ್ಯದ ಸ್ಟೆಪ್​ನಂತೆ ಪೋಸ್​ ‘ನೀಡುತ್ತಾಳೆ. ಮುಂದುವರೆದ ದೃಶ್ಯಗಳಲ್ಲಿ ಹುಡುಗನ ಕುತ್ತಿಗೆಯಲ್ಲಿದ ಹಾರವನ್ನು ಯುವತಿ ಹಿಡಿದೆಳೆಯುವಂತೆ ಕಾಣಿಸಿದ್ದು, ನಂತರ ಸ್ನೇಹಿತರೊಂದಿಗೆ ಹುಡುಗ ಯುವತಿಯನ್ನು ಎತ್ತಿದ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಯುವತಿ ಕೆಂಪು ಬಣ್ಣದ ಸೀರೆ, ಒಡವೆ ಧರಿಸಿದ್ದು, ಹುಡುಗ ಬಿಳಿ ಪಂಚೆ ಮತ್ತು ಶರ್ಟ್ ಧರಿಸಿದ್ದಾನೆ. ಜತೆಗೆ ಇಬ್ಬರೂ ಹಾರವನ್ನು ಹಾಕಿಕೊಂಡಿದ್ದು. ಪಕ್ಕಾ ಮದುವೆಗೆ ರೆಡಿಯಾದ ಜೋಡಿಯಂತೆ ಕಾಸ್ಟ್ಯೂಮ್​ ಧರಿಸಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು, ದೇವಸ್ಥಾನದ ಮುಂದೆ ಈ ರೀತಿ ಫೋಟೊಶೂಟ್​ ಮಾಡಲು ಅವಕಾಶ ನೀಡಿದ್ದಾರಾ ಎಂದು ಪ್ರಶ್ನಿಸಿದರೆ. ಫೋಟೋಗೆ ಪೋಸ್​ ನೀಡಲಿ ತಲೆಕೆಳಗಾಗಿ ನಿಂತ ಹುಡುಗನ ಸ್ಥತಿಯನ್ನು ನೋಡಿ ಪಾಪ ಎಂದಿದ್ದಾರೆ. ಸದ್ಯ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು,ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

ಉಕ್ರೇನ್​ ಬಿಕ್ಕಟ್ಟಿನ ಕುರಿತು ಏಕಕಾಲದಲ್ಲಿ ಆರು ಭಾಷೆಗಳಲ್ಲಿ ವರದಿ ನೀಡಿದ ಪತ್ರಕರ್ತ: ವಿಡಿಯೋ ವೈರಲ್​

Published On - 11:41 am, Wed, 23 February 22