ಕೆಸರಿನಲ್ಲಿ ಪ್ರೀ-ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಂಡ ಜೋಡಿ: ವೈರಲ್​ ಆದ ಫೋಟೋಗಳು

| Updated By: Pavitra Bhat Jigalemane

Updated on: Jan 06, 2022 | 2:46 PM

ಸರಿನಲ್ಲಿ ಮಾಡಿಕೊಂಡಿರುವ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಸದ್ಯ ನೆಟ್ಟಿಗರ ಮನ ಸೆಳೆದಿದೆ. ಈ ಹೊಸ ಪರಿಕಲ್ಪನೆಯ ಪೋಟೋಶೂಟ್​ಗೆ ಬಳಕೆದಾರರು ವಾವ್​ ಎಂದಿದ್ದಾರೆ.

ಕೆಸರಿನಲ್ಲಿ ಪ್ರೀ-ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಂಡ ಜೋಡಿ: ವೈರಲ್​ ಆದ ಫೋಟೋಗಳು
ಕೆಸರಿನಲ್ಲಿ ಫೋಟೋಶೂಟ್​ ಮಾಡಿಸಿಕೊಂಡ ಜೋಡಿ
Follow us on

ಪ್ರೀ ವೆಡ್ಡಿಂಗ್ ಫೋಟೋಶೂಟ್​ ಎಂದರೆ ಹೊಸ ಟ್ರೆಂಡ್​ ಆಗಿದೆ. ಅದರಲ್ಲೂ ವಿಭಿನ್ನ ರೀತಿಯ ಪರಿಕಲ್ಪನೆಗಳೊಂದಿಗೆ ಮದುವೆಗೂ ಮೊದಲು ಫೋಟೋ ತೆಗೆಸಿಕೊಳ್ಳಬೇಕು ಎನ್ನುವುದು ಎಲ್ಲಾ ಹೊಸ ಜೋಡಿಗಳ ಹೆಬ್ಬಯಕೆಯಾಗಿರುತ್ತದೆ. ಇದಕ್ಕೆ ತಕ್ಕ ಹಾಗೆ ಫೋಟೋಗ್ರಾಫರ್​ಗಳು ಹಲವು ರೀತಿಯ ಕ್ಯಾಮಾರಾಗಳನ್ನು ಹಿಡಿದು ಫೋಟೋಶೂಟ್​ಗೆ ಬರುತ್ತಾರೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ​ ಈ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಜಾರಿಯಲ್ಲಿದೆ. ಮದುವೆಗೂ ಮೊದಲು ಒಂದಷ್ಟು ಫೋಟೋಗಳನ್ನು ತಗೆಸಿಕೊಂಡು ಅದಕ್ಕೊಂದು ಚೆಂದದ ಫ್ರೆಮ್​ ಹಾಕಿ ಮನೆಯ ಗೋಡೆಯ ಮೇಲೆ ತೂಗುಹಾಕಬೇಕೆಂದು ಕನಸು ಕಾಣುತ್ತಾರೆ. ಇದಕ್ಕೆ ಮಾಡುವ ವಿಭಿನ್ನ ಪರಿಕಲ್ಪನೆಗಳು ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. 

ಇದೀಗ ತಜಕಿಸ್ತಾನದ ಜೋಡಿಯೊಂದು ಮಾಡಿಕೊಂಡಿರುವ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಫೂಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಕೆಸರಿನಲ್ಲಿ ಮಾಡಿಕೊಂಡಿರುವ ಪ್ರೀ ವೆಡ್ಡಿಂಗ್​  ಫೋಟೋಶೂಟ್​ ಸದ್ಯ ನೆಟ್ಟಿಗರ ಮನ ಸೆಳೆದಿದೆ. ಈ ಹೊಸ ಪರಿಕಲ್ಪನೆಯ ಪೋಟೋಶೂಟ್​ಗೆ ಬಳಕೆದಾರರು ವಾವ್​ ಎಂದಿದ್ದಾರೆ.

ಮುರಾತ್ ಜುರಾಯೆವ್ ಮತ್ತು ಕಮಿಲ್ಲಾ  ಎನ್ನುವ ಜೋಡಿ ಕೆಸರಿನಲ್ಲಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಕೆಮಿಲ್ಲಾ ಅಂದವಾದ ಬಿಳಿಬಣ್ಣದ ಗೌನ್​ ತೊಟ್ಟಿದ್ದು ಮುರಾತ್​ ಕಪ್ಪು-ಬಿಳಿಯ ಸೂಟ್​ ಧರಿಸಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದು, ಕೆಸರನಲ್ಲಿ ಜಾರಿಬಿದ್ದ, ಬಟ್ಟೆ ತುಂಬಾ ಕೆಸರು ಮೆತ್ತಿಕೊಂಡ ಫೋಟೋಗಳು ವೈರಲ್​ ಆಗಿವೆ.  ಕೆಮಿಲ್ಲಾ ಜೋಡಿ ಹಂಚಿಕೊಂಡ ಪೋಟೋಗಳಿಗೆ 9 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿದ್ದು, ಹಲವರು ಶೇರ್​ ಮಾಡಿದ್ದಾರೆ.

ಇದನ್ನೂ ಓದಿ:

ಬಂಗಾರದ ಹೊದಿಕೆಯಿರುವ ಈ ಮಿಠಾಯಿಯ ಬೆಲೆ ಕೆಜಿಗೆ 16 ಸಾವಿರ ರೂ.!