Viral Video: ದೆಹಲಿ: ಮೆಟ್ರೋ ಕೋಚ್​ನಲ್ಲಿ ಚುಂಬಿಸುತ್ತಿರುವ ಜೋಡಿ; ಮತ್ತೆ ಆಕ್ರೋಶಗೊಂಡ ನೆಟ್ಟಿಗರು

Kissing: ಇದು ಅಸಹ್ಯಕರ, ಇದು ಹಣ ಉಳಿಸುವ ಉತ್ತಮ ಉಪಾಯವಲ್ಲವೆ? ಎಂದು ಕೆಲವರು ಹೇಳಿದ್ದಾರೆ, ಮೆಟ್ರೋ ರೈಲ್ವೇ ಆಡಳಿತವು ಇನ್ನೂ ಕ್ರಮ ಕೈಗೊಳ್ಳದಿದ್ದರೆ ಬೆಡ್ರೂಮ್​ ದೃಶ್ಯಗಳನ್ನೂ ಪ್ರಯಾಣಿಕರು ನೋಡಬೇಕಾಗುತ್ತದೆ ಎಂದು ಇನ್ನೂ ಕೆಲ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ದೆಹಲಿ ಮೆಟ್ರೋ ಇಂಥ ಸಂಗತಿಗಳಿಗಾಗಿ ವಿಶ್ವಪ್ರಸಿದ್ಧಿಯಾಗುತ್ತಿದೆ ಎಂದಿದ್ದಾರೆ ಇನ್ನುಳಿದವರು.

Viral Video: ದೆಹಲಿ: ಮೆಟ್ರೋ ಕೋಚ್​ನಲ್ಲಿ ಚುಂಬಿಸುತ್ತಿರುವ ಜೋಡಿ; ಮತ್ತೆ ಆಕ್ರೋಶಗೊಂಡ ನೆಟ್ಟಿಗರು
ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಚುಂಬಿಸುತ್ತಿರುವ ದೃಶ್ಯ

Updated on: Sep 25, 2023 | 2:02 PM

Delhi: ದೆಹಲಿ ಮೆಟ್ರೋ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಜೋಡಿಯೊಂದು ಮೆಟ್ರೋ ಕೋಚ್​​ನ ಒಳಗೆ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಮತ್ತೆ ಕೆರಳಿದ್ದಾರೆ.  ಆನಂದ ವಿಹಾರ ಮೆಟ್ರೋ ನಿಲ್ದಾಣದ ಆಸುಪಾಸು ಈ ಘಟನೆ ನಡೆದಿದೆ ಎನ್ನುವುದು ಮೆಟ್ರೋ ರೈಲಿನೊಳಗಿನಿಂದ (Metro Train) ಕೇಳಿಬಂದ ಉದ್ಘೋಷಣೆಯಿಂದ ತಿಳಿದುಬರುತ್ತದೆ. ಮೆಟ್ರೋ ಪ್ರಯಾಣಿಕರ ವರ್ತನೆಯ ಕುರಿತು ಮೆಟ್ರೋ ಆಡಳಿತ ಮಂಡಳಿಯು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಹೀಗೇ ಆದರೆ ಮುಂದೆ ಏನು ಗತಿ ಎಂದು ಕಳವಳಗೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral: ಆಫೀಸ್​ ಕುರ್ಚಿಯಲ್ಲಿ ಕುಳಿತು ಆಟೋ ಓಡಿಸುತ್ತಿರುವ ಚಾಲಕ; ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಪೋಸ್ಟ್​ ಅನ್ನು @Postman_46 X ನಲ್ಲಿ ಪೋಸ್ಟ್ ಮಾಡಿದ್ದಾರೆ. ಆನಂದ ವಿಹಾರದ ಮತ್ತೊಂದು ಭಾವನಾತ್ಮಕ ವಿಡಿಯೋ. ಪ್ರೀತಿ ಕುರುಡು ಆದರೆ ಜನರು ಕುರುಡರಲ್ಲ ಎನ್ನುವುದನ್ನು ನಾವು ಮರೆತಿರಬಹುದು ಎಂಬ ಒಕ್ಕಣೆ ಈ ವಿಡಿಯೋಗಿದೆ.

ಮೆಟ್ರೋ ರೈಲಿನೊಳಗೆ ಚುಂಬನ ದೃಶ್ಯ

ಅನೇಕರು ಈ ವಿಡಿಯೋದಡಿ ವ್ಯಂಗ್ಯವನ್ನೂ ಆಡಿದ್ದಾರೆ. ಓಯೋಗೆ ಖರ್ಚು ಮಾಡುವ ಹಣ ಉಳಿತಾಯವಾಗುತ್ತಿದೆ ಎಂದಿದ್ದಾರೆ ಒಬ್ಬರು. ಹಣವನ್ನು ಉಳಿಸಲು ಈ ಸ್ಕೀಮ್ ಬಹಳ ಉತ್ತಮ ಎಂದಿದ್ದಾರೆ ಇನ್ನೊಬ್ಬರು. ದೆಹಲಿ ಜನರಿಗೆ ಇದೇನು ಹೊಸತೇನಲ್ಲ ಎಂದಿದ್ದಾರೆ ಮತ್ತೊಬ್ಬರು. ಇಂಥ ಜನರಿಗಾಗಿ ದೆಹಲಿ ಮೆಟ್ರೋ ರೂಮುಗಳನ್ನು ಸೃಷ್ಟಿಸಬೇಕು! ನಾಚಿಕೆಯಾಗಬೇಕು ದೆಹಲಿ ಮೆಟ್ರೋ ಆಡಳಿತಕ್ಕೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಕಂಡೀರಾ ಚೀನಾದ ಈ ಬಾಲಬಾಣಸಿಗನ; ಅಚ್ಚರಿಗೊಂಡ ನೆಟ್ಟಿಗರು

ಖುಷಿಯಾಗುತ್ತಿದೆ! ನನ್ನ ಮಹಾನ್ ಭಾರತ ಬದಲಾಗುತ್ತಿದೆ ಎಂದಿದ್ದಾರೆ ಒಬ್ಬರು. ಸರ್ಕಾರವು ಈಗಲೇ ಇಂಥ ನಡೆವಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದೆ ಬೆಡ್ರೂಮ್​ ದೃಶ್ಯಗಳನ್ನು ಮೆಟ್ರೋದಲ್ಲಿಯೇ ನೋಡಬೇಕಾಗಬಹುದು ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 2:01 pm, Mon, 25 September 23