Viral Video: ಹಿಮ ಪರ್ವತದಲ್ಲಿ ರಾಯಲ್ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

|

Updated on: May 19, 2024 | 6:18 PM

ಈ ಐಷಾರಾಮಿ ಮದುವೆ ಸ್ವಿಟ್ಜರ್ಲೆಂಡ್‌ನ ಝೆರ್ಮಾಟ್‌ನಲ್ಲಿ ನಡೆದಿದೆ. ವಿಡಿಯೋದಲ್ಲಿ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವುದನ್ನು ಕಾಣಬಹುದು. ಇಲ್ಲಿ ವಧುವಿನ ಪ್ರವೇಶವು ಸಂಪೂರ್ಣವಾಗಿ ಬೆರಗುಗೊಳಿಸುತ್ತದೆ. ಹಿಮದ ಮುಸುಕುಗಳ ನಡುವೆ ಸಾಕಷ್ಟು ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಕೂಡ ಕಾಣಬಹುದು.

Viral Video: ಹಿಮ ಪರ್ವತದಲ್ಲಿ ರಾಯಲ್ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
Follow us on

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಮದುವೆ ವಿಭಿನ್ನ ಮತ್ತು ವಿಶಿಷ್ಟವಾಗಿರಬೇಕೆಂದು ಬಯಸುತ್ತಾರೆ. ಇದೀಗ ಪ್ರೇಮಿಗಳಿಬ್ಬರು ತಮ್ಮ ಮದುವೆಯನ್ನು ವಿಭಿನ್ನವಾಗಿ ಮಾಡಬೇಕೆಂಬ ಬಯಕೆಯಿಂದ ಸಮುದ್ರ ಮಟ್ಟದಿಂದ 2,222 ಮೀಟರ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಮಂಜಿನಿಂದ ಆವೃತವಾದ ಪ್ರದೇಶದಲ್ಲಿ ದಂಪತಿಗಳು ತಮ್ಮ ವಿವಾಹದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಇಷ್ಟಯ ವೈಶ್ಟಿಷ್ಯತೆಯನ್ನೊಳಗೊಂಡ ಮದುವೆ ಕಂಡು ನೆಟ್ಟಿಗರು ಶಾಕ್​ ಆಗಿದ್ದಾರೆ.

ಈ ಐಷಾರಾಮಿ ಮದುವೆ ಸ್ವಿಟ್ಜರ್ಲೆಂಡ್‌ನ ಝೆರ್ಮಾಟ್‌ನಲ್ಲಿ ನಡೆದಿದೆ. ವಿಡಿಯೋದಲ್ಲಿ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವುದನ್ನು ಕಾಣಬಹುದು. ಇಲ್ಲಿ ವಧುವಿನ ಪ್ರವೇಶವು ಸಂಪೂರ್ಣವಾಗಿ ಬೆರಗುಗೊಳಿಸುತ್ತದೆ. ಹಿಮದ ಮುಸುಕುಗಳ ನಡುವೆ ಸಾಕಷ್ಟು ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಕೂಡ ಕಾಣಬಹುದು.

ಇದನ್ನೂ ಓದಿ: ಸೋಶಿಯಲ್​​ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ

ಈ ಫೋಟೋ ಮತ್ತು ವಿಡಿಯೋಗಳನ್ನು @LebaneseWeddings ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಏಪ್ರಿಲ್​​ 16ರಂದು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದು, ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು “ಈ ಮದುವೆಯು ನಿಜವಾಗಿಯೂ ಅದ್ಧೂರಿಯಾಗಿತ್ತು. ಇವರನ್ನು ನೋಡಿದರೆ ರಾಜ ರಾಣಿಯರಂತೆ ಕಾಣುತ್ತಿದ್ದಾರೆ” ಎಂದು ಬರೆದರೆ ಮತ್ತೊಬ್ಬರು “ಹೊಸ ಲೋಕವನ್ನೇ ಸೃಷ್ಟಿಸಿದ್ದೀರಾ” ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ