Viral Video: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಡಿ ಸಿಲುಕಿದ ಗೋಮಾತೆ ಬದುಕಿ ಬಂದದ್ದೇ ರೋಚಕ

| Updated By: ಅಕ್ಷಯ್​ ಪಲ್ಲಮಜಲು​​

Updated on: May 16, 2024 | 5:51 PM

ರೈಲ್ವೆ ಹಳಿಗಳ ಬಳಿ ಆಹಾರವನ್ನರಸುತ್ತಾ ಬರುವ ಹಸು, ಕುರಿ ಇತ್ಯಾದಿ ಪ್ರಾಣಿಗಳು ವೇಗವಾಗಿ ಬರುವ ರೈಲುಗಳಿಗೆ ಡಿಕ್ಕಿ ಹೊಡೆದು ಸಾವನ್ನಪ್ಪುತ್ತವೆ. ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಹಸುವೊಂದು ವೇಗವಾಗಿ ಬಂದಂತಹ ವಂದೇ ಭಾರತ್‌ ರೈಲಿನಡಿ ಸಿಕ್ಕಿಹಾಕಿಕೊಂಡಿದ್ದು, ಲೋಕೋ ಪೈಲೆಟ್‌ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್‌ ಹಸು ಪ್ರಾಣಾಪಾಯದಿಂದ ಪಾರಾಗಿದೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

Viral Video: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಡಿ ಸಿಲುಕಿದ ಗೋಮಾತೆ ಬದುಕಿ ಬಂದದ್ದೇ ರೋಚಕ
Follow us on

ಜನರಿಗೆ ಎಷ್ಟೇ ಬುದ್ಧಿ ಹೇಳಿದ್ರೂ ಕೂಡಾ ತಮ್ಮ ಹಸು, ಕುರಿ, ಎಮ್ಮೆ, ಕರುಗಳನ್ನು ರೈಲ್ವೆ ಹಳಿಯ ಪಕ್ಕದಲ್ಲಿ ಮೇಯಲು ಬಿಟ್ಟುಬಿಡುತ್ತಾರೆ. ಹೀಗೆ ರೈಲ್ವೆ ಹಳಿಯತ್ತಿರ ಬರುವ ಈ ಮುಗ್ಧ ಜೀವಿಗಳು ವೇಗವಾಗಿ ಬರುವಂತಹ ರೈಲುಗಳಿಗೆ ಡಿಕ್ಕಿ ಹೊಡೆದು ಸಾವಿಗೀಡಾದ ಅದೆಷ್ಟೋ ಘಟನೆಗಳು ನಡೆದಿದೆ. ಇದೀಗ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ವೇಗವಾಗಿ ಬರುತ್ತಿದ್ದಂತ ವಂದೇ ಭಾರತ್‌ ರೈಲಿನಡಿ ಹಸುವೊಂದು ಸಿಕ್ಕಿಹಾಕಿಕೊಂಡಿದೆ. ಲೋಕೋ ಪೈಲೆಟ್‌ ಬುದ್ಧಿವಂತಿಕೆಯಿಂದ ಅದೃಷ್ಟವಶಾತ್‌ ಹಸು ಪ್ರಾಣಾಪಾಯದಿಂದ ಪಾರಾಗಿದೆ. ಈ ಮನಕಲಕುವ ವಿಡಿಯೋ ದೃಶ್ಯಾವಳಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹುಝೈಫಾ ಅನ್ಸಾರಿ (@huzaifa4625) ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ವಂದೇ ಭಾರತ್‌ ರೈಲಿನಡಿ ಹಸುವೊಂದು ಸಿಕ್ಕಿಹಾಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ರೈಲಿನ ಹಳಿಯ ಮೇಲೆ ಹಸು ಇರುವುದನ್ನು ಗಮನಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಲೋಕೋ ಪೈಲೆಟ್‌ ಹಸುವನ್ನು ರಕ್ಷಿಸಲು ತುರ್ತು ಬ್ರೇಕ್‌ ಹಾಕಿದ್ದಾರೆ. ಹಸು ಹತ್ತಿರದಲ್ಲಿಯೇ ಇದ್ದ ಕಾರಣ ದುರಾದೃಷ್ಟವಶಾತ್‌ ಅದು  ರೈಲಿನಡಿ ಸಿಕ್ಕಿ ಹಾಕಿಕೊಂಡು ಸಾವಿನ ಕೂಪದಿಂದ ಹೊರಬರಲು ಪ್ರಯತ್ನಿಸುತ್ತದೆ.‌ ಬಳಿಕ ಲೋಕೋ ಪೈಲೆಟ್‌ ರೈಲನ್ನು ನಿಧಾನವಾಗಿ ಹಿಂದಕ್ಕೆ ತೆಗೆದು ಹಸುವನ್ನು ರಕ್ಷಿಸಿದ್ದಾರೆ. ನಂತರ ಹಸು ಬದುಕಿತು ಬಡ ಜೀವ ಎನ್ನುತ್ತಾ ಹಳಿಯಿಂದ ಎದ್ದು ಹೋಗಿದೆ.

ಇದನ್ನೂ ಓದಿ: ಒಂದು ದೇಹ ಎರಡು ಜೀವ; ಮೂರು ಕಾಲು, ನಾಲ್ಕು ಕೈ, ಒಂದು ಶಿಶ್ನ ಸಯಾಮಿ ಅವಳಿ ಮಕ್ಕಳ ಜನನ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:


ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 28.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ 1 ಮಿಲಿಯನ್‌ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದು, ಮುಗ್ಧ ಹಸುವನ್ನು ರಕ್ಷಣೆ ಮಾಡಿದ ಲೋಕೋ ಪೈಲೆಟ್‌ ಕಾರ್ಯವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ