Viral Video : ಎಟಿಎಂ ಬೂತಿನಲ್ಲಿ ಸೆಗಣಿ ಹಾಕಿ ಅಲ್ಲಿಯೇ ಕುಳಿತ ಹಸು, ಗ್ರಾಹಕರ ಪರದಾಟ

Cow Poops All Over ATM : ಎಸಿ ಬೇಕಾಗಿತ್ತೆ ಈ ಹಸುವಿಗೆ? ಪಾಪ ಅತಿಸಾರದಿಂದ ಬಳಲುತ್ತಿದೆಯೇ? ನೆಟ್ಟಿಗರು ಹೀಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಿಮಗೇನು ಅನ್ನಿಸಬಹುದು ಈ ವಿಡಿಯೋ ನೋಡುತ್ತಿದ್ದಂತೆ.

Viral Video : ಎಟಿಎಂ ಬೂತಿನಲ್ಲಿ ಸೆಗಣಿ ಹಾಕಿ ಅಲ್ಲಿಯೇ ಕುಳಿತ ಹಸು, ಗ್ರಾಹಕರ ಪರದಾಟ
ಎಟಿಎಂನಿಂದ ಹಣ ಪಡೆಯುತ್ತಿರುವ ಗ್ರಾಹಕ.
Updated By: ಶ್ರೀದೇವಿ ಕಳಸದ

Updated on: Sep 26, 2022 | 11:48 AM

Viral Video : ನಮಗೆ ಅಸಹಜ ದೃಶ್ಯವೊಂದು ಕಣ್ಣಿಗೆ ಬೀಳುತ್ತದೆ ಎಂದಲ್ಲಿ ಅದರ ಹಿಂದೆ ಏನೋ ಸತ್ಯ ಅಡಗಿದೆ ಎಂದರ್ಥ. ಈಗ ಈ ವಿಡಿಯೋ ನೋಡಿ, ಗರ್ಭಗುಡಿಯ ಮುಂದೆ ನಂದಿ ಕುಳಿತಂತೆ ಎಟಿಎಂ ಮಶೀನ್ ಮುಂದೆ ಕುಳಿತುಬಿಟ್ಟಿದೆ ಹಸು. ಸುಮ್ಮನೇ ಕುಳಿತಿದ್ದರೆ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆದರೆ ಬೂತಿನ ತುಂಬಾ ಸೆಗಣಿ ಹಾಕಿ ರಾಡಿ ಮಾಡಿ ಕುಳಿತಿದೆ. ಗ್ರಾಹಕರು ಇಂಥದ್ದರಲ್ಲಿಯೇ ಸರ್ಕಸ್ ಮಾಡಿಕೊಂಡು, ಮೂಗು ಮುಚ್ಚಿಕೊಂಡು ಮಶೀನಿನಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ವಿಡಿಯೋ ವೈರಲ್ ಆಗದಿದ್ದೀತೇ?

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಘಟನೆ ಮಧ್ಯಪ್ರದೇಶದ ರೇವಾ ಗ್ರಾಮದಲ್ಲಿ ನಡೆದಿದೆ. ಪತ್ರಕರ್ತರೊಬ್ಬರು ಈ ವಿಡಿಯೋ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿರುವ ವ್ಯಕ್ತಿ ಸೆಗಣಿಯ ವಾಸನೆ ತಡೆಯಲಾಗದೆ ಹೇಗೆ ಪರದಾಡುತ್ತಿದ್ದಾನೆ ಗಮನಿಸಿ. ಈತನ ಸೋದರಳಿಯ ಇದನ್ನು ನಗುತ್ತಲೇ ಚಿತ್ರೀಕರಿಸಿದ್ದಾನೆ. ಆದರೆ ಹಸುವಿನ ಆರೋಗ್ಯದ ಬಗ್ಗೆ ಸೂಕ್ಷ್ಮವಾಗಿ ಯೋಚಿಸಿದ್ದಾರೆ ನೆಟ್ಟಿಗರು.

ಕೆಲವರು, ಬಹುಶಃ ಅತಿಸಾರದಿಂದ ಇದು ಬಳಲುತ್ತಿರಬಹುದು. ಪಶುವೈದ್ಯರ ಬಳಿ ಕರೆದೊಯ್ಯಬೇಕು ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ. ಹಲವರು ಈ ದೃಶ್ಯ ನೋಡಿ ಅಸಹ್ಯಗೊಂಡಿದ್ದಾರೆ. ಎಸಿ ಬೇಕೆಂದು ಈ ಹಸು ಅಲ್ಲಿ ಹೋಗಿದೆ ಎಂದು ಮತ್ತಷ್ಟು ಜನ ತಮಾಷೆ ಮಾಡಿದ್ದಾರೆ.

ಇಷ್ಟೆಲ್ಲ ನಡೆಯುತ್ತಿರುವಾಗ ಎಟಿಎಂ ಭದ್ರತಾ ಸಿಬ್ಬಂದಿ ಎಲ್ಲಿ ಹೋಗಿರಬಹುದು? ಎಂದು ಭದ್ರತಾ ಸಿಬ್ಬಂದಿಯ ಬೇಜವಾಬ್ದಾರಿಯನ್ನು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಸೂಕ್ತ ಗೋಶಾಲೆ, ಆರೈಕೆ ಇದ್ದಲ್ಲಿ ಹಸು ಯಾಕೆ ಇಲ್ಲಿ ಬಂದು ಕುಳಿತಿರುತ್ತಿತ್ತು? ಅಥವಾ ಅನಾರೋಗ್ಯದಿಂದಾಗಿ ದಿಕ್ಕುತಪ್ಪಿ ಹೀಗಿಲ್ಲಿ ಬಂದು ಕುಳಿತಿದೆಯೋ? ಎಟಿಎಂ ಅನ್ನು ಶುಚಿಗೊಳಿಸಬಹುದು. ಆದರೆ ಹಸುವಿನ ಈ ಅವಸ್ಥೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:42 am, Mon, 26 September 22