ಹಿಂದೂ ಧರ್ಮದಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ. ಜೊತೆಗೆ ಗೋಮೂತ್ರ ಹಾಗೂ ಸಗಣಿಯನ್ನು ಕೂಡಾ ಪವಿತ್ರ ಎಂದು ಪರಿಗಣಿಸಲಾಗಿದ್ದು, ಇವುಗಳನ್ನು ಹೋವ ಹವನದಂತಹ ಮಂಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅದೇ ರೀತಿ ದಕ್ಷಿಣ ಸೂಡಾನ್ ದೇಶದ ಬುಡಕಟ್ಟು ಜನಾಂಗದವರು ಗೋವುಗಳಿಗೆ ಪವಿತ್ರ ಸ್ನಾನವನ್ನು ನೀಡಿದ್ದು, ಅವರು ಪ್ರತಿನಿತ್ಯ ಪವಿತ್ರ ಗೋ ಮೂತ್ರದಲ್ಲಿಯೇ ತಲೆ ಸ್ನಾನ ಮಾಡುತ್ತಾರಂತೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೌದು ದಕ್ಷಿಣ ಸುಡಾನ್ ನ ಮಂಡರಿ ಮತ್ತು ಡಿಂಕಾ ಬುಡಕಟ್ಟು ಜನಾಂಗದವರು ಇಂದಿಗೂ ಗೋ ಮೂತ್ರದಿಂದಲೇ ತಲೆ ಸ್ನಾನ ಮಾಡ್ತಾರೆ. ಹಸು ಸಾಕಾನೆ ಈ ಬುಡಕಟ್ಟು ಜನಾಂಗದವರ ಮೂಲ ಕಸುಬಾಗಿದ್ದು, ಭಾರತೀಯರಂತೆ ಅವರು ಕೂಡಾ ಗೋವುಗಳಿಗೆ ಪೂಜನೀಯ ಸ್ಥಾನವನ್ನು ನೀಡಿದ್ದಾರೆ. ಹಸುಗಳ ಪವಿತ್ರತೆಯ ಬಗ್ಗೆ ಅವರ ನಂಬಿಕೆ ಎಷ್ಟು ಬಲವಾಗಿದೆಯೆಂದರೆ, ಅವರು ಗೋಮೂತ್ರದಿಂದ ತಲೆ ಸ್ನಾನ ಮಾಡುತ್ತಾರೆ. ಏಕೆಂದರೆ ಗೋ ಮೂತ್ರವು ರೋಗ ನಿವಾರಕ ಮತ್ತು ಆರೋಗ್ಯವರ್ಧಕವಾಗಿದ್ದು, ಇಂತಹ ಪವಿತ್ರ ಗೋಮೂತ್ರದಿಂದ ಸ್ನಾನ ಮಾಡುವುದರಿಂದ ಆರೋಗ್ಯ ವೃದ್ಧಿಸುವುದಲ್ಲದೆ, ಅವುಗಳು ಸೊಳ್ಳೆಗಳ ಕಾಟದಿಂದಲೂ ನಮ್ಮನ್ನು ರಕ್ಷಿಸುತ್ತವೆ ಎಂಬ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ.
Weird as it may look, Mundari and Dinka tribes of South Sudan take showers with cow urine because they think it’s antiseptic and frees them from parasites and mosquitoes.
[📹anibal_bueno]pic.twitter.com/03Sw7N2jpS
— Massimo (@Rainmaker1973) March 19, 2024
ಇದನ್ನೂ ಓದಿ: Viral Video: ಲಿಫ್ಟ್ ಒಳಗೆ ಸೆಲ್ಫಿ ತೆಗೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ರೆ ಈ ವಿಡಿಯೋ ನೀವು ನೋಡಲೇ ಬೇಕು
ಈ ಕುರಿತ ವಿಡಿಯೋವೊಂದನ್ನು @Rainmaker1973 ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಚಿಕೊಳ್ಳಲಾಗಿದ್ದು, “ಇದು ನೋಡಲು ಸ್ವಲ್ಪ ವಿಲಕ್ಷಣವಾಗಿ ಕಾಣಿಸಬಹುದು, ಆದರೆ ದಕ್ಷಿಣ ಸುಡಾನ್ ನ ಮುಂಡರಿ ಮತ್ತು ಡಿಂಕಾ ಬುಡಕಟ್ಟು ಜನಾಂಗದವರು ಪ್ರತಿನಿತ್ಯ ಗೋಮೂತ್ರದಿಂದಲೇ ಸ್ನಾನ ಮಾಡುತ್ತಾರೆ. ಏಕೆಂದರೆ ಗೋಮೂತ್ರ ನಂಜು ನಿರೋಧಕ ಮಾತ್ರವಲ್ಲದೆ ಅದು ಸೊಳ್ಳೆ ಕಡಿತದಿಂದಲೂ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಭಾವಿಸುತ್ತಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಹಸು ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಆ ಪವಿತ್ರ ಗೋಮೂತ್ರದಲ್ಲಿಯೇ ಡಿಂಕಾ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತಲೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ